21df6ad6-7538-4480-aab4-0258c0122eeb

ಅಭೂತಪೂರ್ವ ಯಶಸ್ವಿ ಕಂಡ ಹಂಪಿ ಉತ್ಸವ 

ಹರಿದು ಬಂದ ಜನಸಾಗರ 

ಮುಂದೆ ಹಂಪಿ ಉತ್ಸವ 5 ದಿನ ನಡಿಯಲಿ

ಕರುನಾಡ ಬೆಳಗು ಸುದ್ದಿ

ಹಂಪಿ ಫೆ.05 –  ಕೋವಿಡ್ ಮತ್ತು ಬರಗಾಲ ದಿಂದ ಸ್ಥಾಗಿತ ಗೊಳಿಸಿದ್ದ ಉತ್ಸವವನ್ನು ಈ ಬಾರಿ 2024ನೇ ಸಾಲಿನಲ್ಲಿ ಹಂಪಿ ಉತ್ಸವ ಮಾಡಲೇಬೇಕೆನ್ನುವ ಉದ್ದೇಶದಿಂದ ಸರ್ಕಾರ ತೀರ್ಮಾನಿಸಿ ಫೆ.2,3 ಮತ್ತು 4ರಂದು ನಿಗದಿಗೊಳಿಸಿ ಮೂರು ತಿಂಗಳುಗಳ ಕಾಲ ಸತತ ಪ್ರಯತ್ನದ ಫಲವಾಗಿ ಹಂಪಿ ಉತ್ಸವ ಕಿಕ್ಕಿರಿದ ಜನಸ್ತೋಮವು ಮೂರುದಿನಗಳಲ್ಲಿ ಸುಮಾರು 15ಲಕ್ಷಕ್ಕೂ ಅಧಿಕ ಜನಸಂಖ್ಯೆ ಸಾಗರೊಪಾದಿಯಲ್ಲಿ ಹರಿದು ಬಂದಿದ್ದು ವಿಶೇಷವಾಗಿ ಕಂಡು ಬಂದಿತು.

ಜಿಲ್ಲಾ ಉಸ್ತುವಾರಿ ಮಂತ್ರಿಯಾದ ಜಮೀರ್ ಅಹ್ಮದ್ ಖಾನ್ ಅವರ ಆದೇಶದಂತೆ ಸ್ಥಳೀಯ ಶಾಸಕರಾದ ಗವಿಯಪ್ಪ ಮತ್ತು ಜಿಲ್ಲೆಯ ಶಾಸಕರು ಸೇರಿ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಅವರ ನೇತೃತ್ವದಲ್ಲಿ ಹಲವು ಬಾರಿ ಸಭೆ ಸೇರಿ ಚರ್ಚಿಸಿ ಉತ್ಸವಕ್ಕೆ ಬೇಕಾಗುವಂತ ರೂಪುರೇಷೆಗಳನ್ನು ತಯಾರಿಸಿಕೊಂಡು ವ್ಯವಸ್ಥಿತವಾಗಿ ಸಿದ್ಧತೆಗಳನ್ನು ನಡೆಸಿದ್ದರು.

ಅದರ ಫಲವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದೆ, ಶಾಂತಿಯುತವಾಗಿ ಹಂಪಿ ಉತ್ಸವವು ಅಭೂತಪೂರ್ವ ಯಶಸ್ವಿಯನ್ನು ಕಂಡಿತು. ಈ ಕುರಿತು ಸಾರ್ವಜನಿಕರಿಂದ ಪ್ರಸಂಶಯು ವ್ಯಕ್ತವಾಯಿತು. ಇನ್ನು ಕೆಲವರು ಮುಂಬರುವ ಉತ್ಸವದಲ್ಲಿ ಮೂರು ದಿನದ ಉತ್ಸವವನ್ನು ಐದು ದಿನಕ್ಕೆ ಏರಿಸಬೇಕೆಂದು ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!