ಮಂಗಳೂರ : ಸಂವಿಧಾನದ ಜಾತ ರಥಕ್ಕೆ ಸ್ವಾಗತ
ಕರುನಾಡ ಬೆಳಗು ಸುದ್ದಿ
ಮಂಗಳೂರ, 05- ಸಂವಿಧಾನ ಜಾತ ರಥಕ್ಕೆ ಅದ್ದೂರಿ ಸ್ವಾಗತ ಕುಕನೂರ 05-ತಾಲೂಕಿನ ಮಂಗಳೂರು ಗ್ರಾಮದಲ್ಲಿ ಸರ್ಕಾರದಿಂದ ಹಮ್ಮಿಕೊಂಡಿರುವ ಸಂವಿಧಾನದ ಜಾತ ರಥಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ , ಸಂವಿಧಾನ ಪೀಠಿಕೆಯನ್ನು ಉಚ್ಚರಿಸಲಾಯಿತು. ಅಂಬೇಡ್ಕರ್ ಶಾಲೆ ಯ ಮುದ್ದು ವಿದ್ಯಾರ್ಥಿಗಳು ರಾಷ್ಟ್ರಸಂವಿಧಾನಕೆ ನೀನೆ ಶಿಲ್ಪಿಯು ಎಂಬ ಹಾಡಿಗೆ ನೃತ್ಯ ಮಾಡಿದರು.
ಮಂಗಳೂರಿನ ಪ್ರಮುಖ ರಾಜ ಬಿದಿಗಳಲ್ಲಿ ಸಂವಿಧಾನ ಜಾಗೃತ ರಥದ ಮೆರವಣಿಗೆ ಜೈ ಭೀಮ್, ಜೈ ಸಂವಿಧಾನ ಜೈ ಕಾರ ಘೋಷಣೆ ಯೊಂದಿಗೆ ಸಾಗಿತು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆ ಅಧಿಕಾರಿ ವರ್ಗದವರು, ಮತ್ತು ವಿಶೇಷವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿವರ್ಗದವರು, ಗಾ. ಪಂ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವರ್ಗದವರು, ಕಂದಾಯ ಇಲಾಖೆ ಅಧಿಕಾರಿ ವರ್ಗದವರು ಮತ್ತು ಶಿಕ್ಷಣ ಇಲಾಖೆ ಶಿಕ್ಷಕರು,ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಎಂಬಿಕೆ ಕಾರ್ಯಕರ್ತರು,ಇಡೀ ಊರಿನ ಗಣ್ಯರು ಹಿರಿಯರು ಸಂಘ ಸಂಸ್ಥೆಯವರು ಎಲ್ಲರೂ ಒಗ್ಗೂಡಿ ಸೋಮವಾರ ದಿವಸ ನಡೆದ ಸಂವಿಧಾನ ಜಾಗೃತಿ ಸಾರ್ಥ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಬಹಳ ಅದ್ಭುತವಾಗಿ ನಡೆಸಿಕೊಟ್ಟರು.
