
ಹಂಪಿ ಉತ್ಸವದಲ್ಲಿ ಸಿರುಗುಪ್ಪ ತಾಲೂಕಿನ ಕುಚುಪುಡಿ ನೃತ್ಯ ಪ್ರದರ್ಶಿಸಿದ ಕಲಾವಿದರು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ05- ನಗರದ ಶಾಲಾ ವಿದ್ಯಾರ್ಥಿನಿಯರ ತಂಡದವರು ಹಂಪಿ ಉತ್ಸವದಲ್ಲಿ ಎದುರು ಬಸವಣ್ಣ ವೇದಿಕೆಯಲ್ಲಿ ಬಸವರಾಜ ಬಲಕುಂದಿ ಇವರಿಂದ ತರಬೇತಿ ಹೊಂದಿದ ಮಕ್ಕಳು ತಮ್ಮ ಆಕರ್ಷಕ ಕುಚುಪುಡಿಯ 3 ನೃತ್ಯಗಳನ್ನು ಪ್ರದರ್ಶಿಸಿ ನೆರೆದಿದ್ದ ಕಲಾಸಕ್ಕರಿಂದ ಮೆಚ್ಚುಗೆ ಪಡೆದರು.
ಈ ನೃತ್ಯದಲ್ಲಿ ಪಂಪಾಪತಿ ಇವರ ಪುತ್ರಿ ಬಿ ಇ ಸಾಯಿ ಸಾನ್ವಿ ಅಮೋಘ ನೃತ್ಯ ಪ್ರದರ್ಶನ ಮಾಡಿದ್ದು ಶಿಕ್ಷಕರು ಪಾಲಕರು ಮತ್ತು ಸಂಬಂಧಿಕರು ಪ್ರತಿಭೆಗೆ ಸಂತಸಪಟ್ಟಿದ್ದಾರೆ ಕುಚುಪುಡಿ ನೃತ್ಯ ಪ್ರದರ್ಶನದಲ್ಲಿ ಮೂಷಿಕ ವಾಹನ ಸೂರ್ಯ ಚಂದ್ರನು ಮತ್ತು ಸುಗ್ಗಿ ಕಾಲ ಹಿಗ್ಗಿ ಬಂದಿತು ಎಂಬ ಹಾಡುಗಳಿಗೆ ನೃತ್ಯ ಪ್ರದೇಶನ ಮಾಡಿದ್ದಾರೆ.