ಹಂಪಿ ಉತ್ಸವಕ್ಕೆ ಆಹ್ವಾನಿಸದ ಜಿಲ್ಲಾಡಳಿತ ಡಿ ಸಿ ವಿರುದ್ದ ನಗರ ಸಭೆ ಸದಸ್ಯರ ಆಕ್ರೋಶ
ಕರುನಾಡ ಬೆಳಗು ಸುದ್ದಿ
ವಿಜಯನಗರ,1- ಜಿಲ್ಲಾಧಿಕಾರರಿಗಳು ಹಂಪಿ ಉತ್ಸವಕ್ಕೆ ಅಹ್ವಾನ ನೀಡಿಲ್ಲವೆಂದು ನಗರಭೆ ಸದಸ್ಯೆರೆಲ್ಲರೂ ಸೇರಿ ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಿಕ್ಕಾರ ಕೂಗಿದರು.
ಹಂಪಿ ಉತ್ಸವದ ಮೊದಲನೇ ದಿನದಂದು ನಗರ ಸಭೆಯ ಸದಸ್ಯರೆಲ್ಲರೂ ಅಧ್ಯಕ್ಷರ ಕಛೇರಿಯಲ್ಲಿ ತುರ್ತು ಸಭೆ ಸೇರಿ ಸುದ್ದಿಗೋಷ್ಠಿ ನಡೆಸಿ ನಗರಭೆ ಸದಸ್ಯರನ್ನು ಯಾವುದೇ ಕಾರ್ಯಕ್ರಮಗಳಿಗೆ ಅಹ್ವಾನಿಸದೇ ಕಡೆಗಣಿಸುತ್ತಿದ್ದಾರೆ ಬೈಕ್ ರ್ಯಾಲಿ, ತುಂಗಾರತಿಗೂ ಅಹ್ವಾನ ನೀಡಿಲ್ಲ. ಸ್ಥಳೀಯ ಆಡಳಿತಕ್ಕೆ ಪ್ರಾಮುಖ್ಯತೆ ನೀಡಿಲ್ಲ ಎಂದು ಇಂದು ಹೊಸಪೇಟೆ ನಗರಸಭಾ ಸದಸ್ಯರು ಜಿಲ್ಲಾಡಳಿತಕ್ಕೆ ದಿಕ್ಕಾರ ಕೂಗಿದರು.
ಹಂಪಿ ಉತ್ಸವ ಸ್ಥಳೀಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು ,ಜಿಲ್ಲಾಧಿಕಾರಿಗಳು ಯಾವೊಬ್ಬ ಪ್ರತಿನಿದಿಯನ್ನೂ ಅಹ್ವಾನಿಸಿಲ್ಲ ಎಂದು ನಗರ ಸಭೆ ಉಪಾದ್ಯಕ್ಷ ರೂಪೇಶಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿರೋದ ವ್ಯಕ್ತ ಪಡಿಸಿದರು.
ಇದೇ ಸಂಧರ್ಭದಲ್ಲಿ ಸ್ಥಾಯಿ ಸಮಿತಿ ಅದ್ಯಕ್ಷ ಸಂತೋಷ ಮಾತನಡಿ , ನಗರದಲ್ಲಿ ಪ್ಲೆಕ್ಸಗಳು ಎಲ್ಲೆಂದರಲ್ಲಿ ಹಾಕಲಾಗಿದೆ. ಇವುಗಳಿಗೆ ನಗರಸಭೆಯಿಂದ ಅನುಮತಿ ಕಡ್ಡಾಯ ,ಅದರೆ ಜಿಲ್ಲಾಧಿಕಾರಿ ಯವರು ಎಲ್ಲಾ ನಿಯಮಗಳನ್ನು ಮೀರಿ ನಗರದ ಎಲ್ಲೆಡೆಯಲ್ಲಿ ಪ್ಲೆಕ್ಸಗಳು ಹಾಕಲು ಅನುಮತಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತದ ವಿರುದ್ಧ ಸ್ಥಳೀಯ ಅಡಳಿತ ದ್ವನಿ ಎತ್ತಿರುವುದು ,ಇದೇ ಮೊದಲಬಾರಿಗೆ ಎಂಬುದು ವಿಶೇಷ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸೇರಿ 17ಜನ ದಲಿತ ಸದಸ್ಯರಿದ್ದೇವೆ ಅದಕ್ಕಾಗಿ ಹೀಗೆ ಮಾಡುತ್ತಿದ್ದಾರಾ? ಜಿಲ್ಲಾಧಿಕಾರಿಗಳು ರಾಜಕೀಯ ಮಾಡುತ್ತಿದ್ದಾರೆ. ಅವರು ಅನುಸರಿಸುವ ದ್ವಂದ್ವ ನೀತಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅವರೇ ಚುನಾವಣೆಗೆ ಸ್ಪರ್ದಿಸುವಂತಿದೆ.
ಹೊಸಪೇಟೆ ಯಲ್ಲಿ 2ಲಕ್ಷ ಜನಸಂಖ್ಯೆ ಹೊಂದಿದೆ ಅದರಲ್ಲಿ ನಾವು ಒಂದು ವಾರ್ಡಿನಿಂದ 6000ಸಾವಿರ ಜನರ ಮತಗಳನ್ನು ಪಡೆದು ಗೆದ್ದಂತವರು ಒಟ್ಟು 35ಜನ ಸದಸ್ಯರಿದ್ದೇವೆ ಯಾರಿಗೂ ಬೆಲೆ ಇಲ್ವಾ ಎಂದು ಮಾಜಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಂಬಯ್ಯಾ ನಾಯಕ ನೇರವಾಗಿ ಜಿಲ್ಲಾಧಿಕಾರಿಗೆ ಪ್ರಶ್ನಿಸಿದರು. ನಂತರ ನಗರಸಭೆ ಹೊರಗಡೆ ಜಿಲ್ಲಾಧಿಕಾರಿಗಳ ನಡೆ ವಿರುದ್ಧ 22ಬಿಜೆಪಿ ಬೆಂಬಲಿತ ಸದಸ್ಯರು ಒಕ್ಕೋರಲಿನಿಂದ ಜಿಲ್ಲಾಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಾತಿಸಿದರಿ
ಈ ಸಂಧರ್ಭದಲ್ಲಿ ಅಧ್ಯಕ್ಷಿಣಿ ಲತಾ, ಮಾಜಿ ಉಪಾಧ್ಯಕ್ಷ ಎಲ್ ಎಸ್ ಆನಂದ್, ರಮೇಶ್ ಗುಪ್ತ, ಹಾಗೂ ಇತರ ಸದಸ್ಯರು ಇದ್ದರು.
