ಹಂಪಿ ಉತ್ಸವ: ಪುಸ್ತಕ ಪ್ರದರ್ಶನಕ್ಕೆ ಹೆಸರು ನೋಂದಾಯಿಸಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,18- ಹಂಪಿ ಉತ್ಸವ-2024ರ ಅಂಗವಾಗಿ ಏರ್ಪಡಿಸಿದ ಪುಸ್ತಕ ಪ್ರದರ್ಶನಕ್ಕೆ ಆಸಕ್ತ ಪ್ರಕಾಶರು ತಮ್ಮ ಹೆಸರನ್ನು ನೋಂದಾಯಿಸುವಂತೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರು ತಿಳಿಸಿದ್ದಾರೆ.
ಹಂಪಿ ಉತ್ಸವವನ್ನು ಹಂಪಿಯಲ್ಲಿ ಫೆಬ್ರುವರಿ 2, 3 ಮತ್ತು 4ರಂದು ಅದ್ದೂರಿಯಾಗಿ ಏರ್ಪಡಿಸಲಾಗಿದ್ದು, ಇಲ್ಲಿ ವಿವಿಧ ಮಳಿಗೆಗಳನ್ನು ಸಿದ್ಧಪಡಿಸಿ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಉತ್ಸವದ ಅಂಗವಾಗಿ ಪುಸ್ತಕಗಳ ಮಳಿಗೆಗಳನ್ನು ತೆರೆಯಲಾಗುತ್ತಿದ್ದು,
ನಿಬಂಧನೆಗಳು: ಪ್ರತಿ ಪುಸ್ತಕ ಮಳಿಗೆಗೆ ಒಂದು ಶಾಮಿಯಾನ ಹಾಗೂ ಎರಡು ಮೇಜುಗಳನ್ನು ಒದಗಿಸಲಾಗುವುದು. ಹೆಚ್ಚಿನ ಮೇಜುಗಳಿಗೆ ಮುಂಚಿತವಾಗಿ ಬೇಡಿಕೆ ಸಲ್ಲಿಸುವುದು. ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಆರ್ಥಿಕ, ಸಾಮಾಜಿಕ, ವೈಜ್ಞಾನಿಕ, ಸಂಶೋಧನೆ, ಜನಪದ ಸಾಹಿತ್ಯ, ಪ್ರವಾಸ, ಹವ್ಯಾಸ ಮುಂತಾದ ಪ್ರಾಕಾರಗಳ ಪುಸ್ತಕಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಬಹುದು. ಯಾವುದೇ ಕಾರಣಕ್ಕೂ ಕೆಟ್ಟ ಅಭಿರುಚಿಯನ್ನು ಬೆಳೆಸುವ, ಜನರ ಮಧ್ಯೆ ವಿರಸ ಮೂಡಿಸುವ, ದೇಶದ ಐಕ್ಯತೆ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುವ ಹಾಗೂ ನಿಷೇಧಿತ ಪುಸ್ತಕಗಳನ್ನು ಪ್ರದರ್ಶಿಸಿ ಮಾರಾಟ ಮಾಡುವಂತಿಲ್ಲ. ದೇಶದ ಕಾನೂನುಬದ್ಧವಾಗಿ ಪ್ರಕಟವಾಗಿರುವ ಪುಸ್ತಕಗಳನ್ನು ಮಾತ್ರ ಪ್ರದರ್ಶನಕ್ಕಿಟ್ಟು ಮಾರಾಟ ಮಾಡಬಹುದು.
ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಾಡುವ ಪ್ರಕಾಶಕರು ಜನವರಿ 25ರೊಳಗೆ ಅಧಿಕಾರಿಗಳ ಬಳಿ ಸೂಕ್ತ ಠೇವಣಿಯನ್ನು ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾಣಿಗಾಗಿ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು, ವಿಜಯನಗರ ಜಿಲ್ಲೆ, ಹೊಸಪೇಟೆ ದೂರವಾಣಿ ಸಂಖ್ಯೆ: 7795328559, ವಿನೋದ ಮೊ.ಸಂ: 8123890903, ಬಳ್ಳಾರಿ/ವಿಜಯನಗರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಫಾಲಾಕ್ಷ ಟಿ. ಮೊ.ಸಂ: 8861128848, 8310969813 ಹಾಗೂ ಚಿತ್ತವಾಡಿಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ನೋಡಲ್ ಅಧಿಕಾರಿಗಳಾದ ನಾಗರಾಜ್ ಹವಾಲ್ದಾರ್ ಮೊ.ಸಂ: 8197123522 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
