WhatsApp Image 2024-03-19 at 5.00.31 PM

ಸರ್ಕಾರದ ಐದು ಯೋಜನೆಗಳನ್ನು ಬಿಜೆಪಿ ಟೀಕಿಸಿಲ್ಲ, ಸಮರ್ಪಕವಾಗಿ ಜಾರಿಗೆ ತನ್ನಿ ಎಂದಿದ್ದೇವೆ : ರಘು ಕೌಟಿಲ್ಯ

ಕರುನಾಡ ಬೆಳಗು ಸುದ್ದಿ

ವಿಜಯನಗರ,19- ಇಂದು ಹಿಂದುಳಿದ ವರ್ಗಗಳ ಸಾಮಾಜಿಕ ಸಮ್ಮೇಳನ ಕುರಿತು ಪಟೇಲ್ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿಯ ಓಬಿಸಿ ಘಟಕದ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯ ಅವರು ಸಮಾವೇಶ ಕುರಿತು ಮಾತನಾಡಿ, ಹಿಂದುಳಿದ ವರ್ಗಗಳಲ್ಲಿರುವ 209 ಜಾತಿಗಳನ್ನ ಮತ್ತು 800 ಉಪಜಾತಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ರಾಜಕೀಯ, ಸಾಮಾಜಿಕ ಜಾಗೃತಿ, ಮತ್ತು ಸಾಮಾಜಿಕ ಭದ್ರತೆಯ ಅಭಯವನ್ನು ನೀಡುವಂತ ಮೊದಲ ಉದ್ದೇಶವಾಗಿದೆ. ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದ ನಂತರ ಬಲಿಷ್ಠ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ಸ್ವಾವಲಂಬಿ ಭಾರತದ ನಿರ್ಮಾಣದ ಪರಿಕಲ್ಪನೆಯ ಅಡಿಯಲ್ಲಿ ಕೊಟ್ಟಿರುವ ಎಲ್ಲಾ ಯೋಜನೆಗಳು ಕೂಡ ಹಿಂದುಳಿದ, ಅತಿ ಹಿಂದುಳಿದ ಶ್ರಮಿಕ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಕೊಟ್ಟಿರುವಂತದ್ದು ಎಂದು ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾತನಾಡಿದರು.

ಇಂದು ವಿದೇಶಿ ಉತ್ಪನ್ನಗಳು ದೇಶದ ತುಂಬೆಲ್ಲ ಹರಡಿ ಹೋಗಿದೆ. ಅವುಗಳನ್ನೆಲ್ಲ ಹಿಮ್ಮೆಟ್ಟಿಸಬೇಕೆಂದರೆ ವಿಶ್ವಕರ್ಮ ಯೋಜನೆ, ಮುದ್ರಾ ಯೋಜನೆ , ಮೇಕ್ ಇನ್ ಇಂಡಿಯಾ ಯೋಜನೆಗಳ ಮೂಲಕ ನಾವು ನಮ್ಮ ಜನರಿಗೆ ಉದ್ಯೋಗ ಕೊಡುವುದಲ್ಲ ಉದ್ಯೋಗದ ರಾತರನ್ನಾಗಿಸಿ ಈ ದೇಶದ ಉತ್ಪನ್ನ ಕ್ಷೇತ್ರದ ಸಂಪನ್ಮೂಲವನ್ನು ಹೆಚ್ಚಿಸುವ ಮೂಲಕ ಸ್ವಾವಲಂಬಿ ಭಾರತವನ್ನು ಕಟ್ಟಬೇಕೆನ್ನುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಹೊರಟಿದ್ದಾರೆ ಅದರ ಜಾಗೃತಿ ಕೂಡ ಈ ಸಮ್ಮೇಳನದ ಹಿನ್ನೆಲೆಯಲ್ಲಿದೆ ಎಂದರು.

ಮತ ಬ್ಯಾಂಕ್ ಆಧಾರಿತ ಕಾಂಗ್ರೆಸ್, ವೋಟ್ ಎಕ್ಸ್ಚೇಂಜ್ ಮಾಡುವಂತ ಯೋಜನೆಗಳು ದೇಶ ಮತ್ತು ಬದುಕು ಕಟ್ಟಿಕೊಡುವಂತ ಯೋಜನೆಗಳು ಇವರಲ್ಲಿಲ್ಲ. ಕಾಂಗ್ರೆಸ್ ಸರ್ಕಾರ ಒಂದೇ ಒಂದು ಹಿಂದುಳಿದ ಸಮುದಾಯಕ್ಕೆ ಕಾರ್ಯಕ್ರಮ ಕೊಟ್ಟಿಲ್ಲ.
ಅಲ್ಲಿಂದ ಹೆಸರು ಹೇಳಿಕೊಂಡು ಬಂದಂತಹ ಸಿದ್ದರಾಮಯ್ಯನವರು ಹಿಂದುಳಿದ ದಲಿತ ವರ್ಗಗಳನ್ನು ಸಂಪೂರ್ಣವಾಗಿ ಪರಿಗಣಿಸಿದ್ದಾರೆ. ದಲಿತರ ಕಲ್ಯಾಣಕ್ಕಾಗಿ ಇಟ್ಟಿರುವ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ.

ಹಿಂದುಳಿದ ವರ್ಗದ ನಿಗಮವನ್ನು ದೇವರಾಜ್ ಅರಸು ನಿಗಮ ಎಂದು ಮರುನಾಮಕರಣ ಮಾಡಿ ಅದರಲ್ಲಿ ಕಸುಬು ಆಧಾರಿತ ಹಲವಾರು ನಿಗಮಗಳನ್ನು ಸ್ಥಾಪಿಸಲಾಯಿತು. ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಸಲುವಾಗಿ ಮತ್ತು ಸಾವಲಂಬಿ ಬದುಕನ್ನು ರೂಪಿಸಿಕೊಳ್ಳುವುದಕ್ಕಾಗಿ ನಿಗಮಗಳನ್ನು ಸ್ಥಾಪಿಸಲಾಗಿದೆ. ದುರಂತ ಎಂದರೆ ಈ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗಮಗಳಿಗೆ ಕಾಂಗ್ರೆಸ್ ಸರ್ಕಾರ ಒಂದೇ ಒಂದು ರೂಪಾಯಿ ಕೊಡದೇ ನಿಗಮಗಳ ಬಾಗಿಲು ಜಡಿಯಲು ಹೊರಟಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ನಿಗಮಗಳಿಗೆ ಬಿಜೆಪಿ ಸರ್ಕಾರ ಕೊಟ್ಟಷ್ಟು ಅದರ ಅರ್ಧದಷ್ಟು ಮಾತ್ರ ಕಾಂಗ್ರೆಸ್ ಸರ್ಕಾರ ಕೊಡುತ್ತಿದೆ. ಹಿಂದುಳಿದ ವರ್ಗದ ಅಭಿವೃದ್ಧಿಪಡಿಸಲು ಯಾವ ನೈತಿಕತೆ ಇದೆ ಸಿದ್ದರಾಮಯ್ಯನವರಿಗೆ ಇಲ್ಲ. ಈ ಒಂದು ವರ್ಷದಲ್ಲಿ ಇಡೀ ಹಿಂದುಳಿದ ವರ್ಗದ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿ ಯಾವುದೇ ಯೋಜನೆಗಳನ್ನು ಕೊಡದೆ, ಬರಗಾಲದ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಧಾವಿಸದೆ. ರೈತರಿಗೆ ಬರಗಾಲ ಬಂದಾಗ ಇತರ ಸಮುದಾಯಗಳಿಗೂ ಅದರ ಛಾಯೆ ತಾಕೇತಾಕುತ್ತೆ. ಇವತ್ತು ಕಸುಬು ಆಧಾರಿತ ಸಮುದಾಯಗಳ ಬದುಕು ನಿಕೃಷ್ಟವಾಗಿದೆ. ಸಾಮಾಜಿಕ ಅಭದ್ರತೆಯನ್ನು ಎದುರಿಸುತ್ತಿವೆ. ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಹೌದ್ಯೋಗಿಕ ಅವಕಾಶ ರಾಜಕೀಯ ಅವಕಾಶ ಸಾಮಾಜಿಕ ಸುಭದ್ರತೆ ಇವೆಲ್ಲವೂ ಬೇಕೇಂದರೆ ಮತ್ತೊಮ್ಮೆ ಮೋದಿಗೆ ಬೆಂಬಲವನ್ನು ಕೊಡುತ್ತಾರೆ ಎನ್ನುವ ವಿಶ್ವವನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಐದು ಯೋಜನೆಗಳನ್ನು ಬಿಜೆಪಿ ಟೀಕಿಸುತ್ತಿದೆಯಾಕೆ ಅವರು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಂತೆ ಯೋಜನೆಗಳನ್ನು ನೀಡುತ್ತಿದ್ದಾರೆ ನೀವ್ಯಾಕೆ ಅದನ್ನು ಪ್ರೀತಿಸುತ್ತಿದ್ದೀರಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದವರು, ಯೋಜನೆಗಳನ್ನು ಟೀಕಿಸಿಲ್ಲ ಸಮರ್ಪಕವಾಗಿ ಜಾರಿಗೆ ತನ್ನಿ ಎಂದಿದ್ದೇವೆ. ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗುತ್ತಿದೆ ಎಂದು ಹೇಳಿದ್ದೇವೆ ಎಂದರು.

ಚನ್ನಬಸವನಗೌಡ ಪಾಟೀಲ್ ಜಿಲ್ಲಾಧ್ಯಕ್ಷರು, ಬಂಗಾರು ಹನುಮಂತು ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರು, ಅಯ್ಯಳಿ ತಿಮ್ಮಪ್ಪ ಎಸ್ ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷರು, ವೆಂಕಟೇಶ್ ಒಬಿಸಿ ಘಟಕ ರಾಜ್ಯ ಕಾರ್ಯದರ್ಶಿ, ಚಂದ್ರಶೇಖರ ಪಾಟೀಲ್ ಹಲಗೇರಿ, ಪೂಜಪ್ಪ, ಈ .ಟಿ.ಲಿಂಗರಾಜು, ಕೆಎಸ್ ರಾಘವೇಂದ್ರ ಅಶೋಕ್ ಜಿರೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!