WhatsApp Image 2024-04-22 at 6.19.40 PM

ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 22- ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ವಿಜನಗರ ಜಿಲ್ಲೆಯ ಬಿಜೆಪಿ ಪಕ್ಷದಿಂದ ಮತ್ತು ವೀರಶೈವ ಲಿಂಗಾಯತ ಸಮಾಜದ ಮತ್ತು ಇತರೆ ಸಂಘಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ತಹಸೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.

ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀರಾಮುಲು ಪ್ರತಿಭಟನೆಯಲ್ಲಿ ಭಾಗಿಯಾಗಿ ತಹಸಿಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ ನೇಹಾ ಹಿರೇಮಠದ ಹತ್ಯೆಯನ್ನು ಬಿಜೆಪಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕರ್ನಾಟಕವನ್ನೇ ಜಂಗಲ್ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ.

ನೆಹಾ ಹಿರೇಮಠ ಅವರ ಸಾವಿಗೆ ನ್ಯಾಯ ಸಿಗಬೇಕೆಂದು ಎಲ್ಲಾ ಸಮುದಾಯದವರು ಒಕ್ಕೊರಲಿನಿಂದ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.

ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ನಾವು ಸಹ ಒತ್ತಾಯವನ್ನು ಮಾಡುತ್ತಿದ್ದೇವೆ. ರಾಜ್ಯದ್ಯಂತ ಸರಣಿ ದೌರ್ಜನ್ಯಗಳು,ಕೊಲೆಗಳ ಮತ್ತು ದಬ್ಬಾಳಿಕೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ರೀತಿಯ ಘಟನೆಗಳು ನಡೆಯುತ್ತಿವೆ.

ರಾಜ್ಯದಲ್ಲಿ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದಲ್ಲಿ ಎಲ್ಲಾ ಮಂತ್ರಿಗಳು ರಾಜೀನಾಮೆಯನ್ನು ನೀಡಿ ಮುಂದೆ ಇನ್ಯಾರೋ ಬಂದು ರಾಜ್ಯವನ್ನು ಆಳುತ್ತಾರೆ ಎಂದು ರಾಜೀನಾಮೆಗೆ ಅಗ್ರಹಿಸಿದರು.

ವೀರಶೈವ ಲಿಂಗಾಯತ ಸಮಾಜ ಸಂಘದ ಮುಖಂಡರೊಬ್ಬರು ಮಾತನಾಡಿ ನಾವು ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ. ಭಾರತವು ಜಾತ್ಯಾತೀತ ರಾಷ್ಟ್ರ, ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಾಗಿದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ನಾವು ಬದುಕುತ್ತಿದ್ದೇವೆ . ಈ ರಾಜಕೀಯ ನಾಯಕರು ಜಾತಿ ಎಂಬ ಹೆಸರಿನಿಂದ ವಿಷ ಬೀಜವನ್ನು ಬಿತ್ತುತ್ತಿದ್ದಾರೆ ಫಯಾಜ್ ಎಂಬ ಕೆಟ್ಟ ಮನಸ್ಸಿನ ಯುವಕ ಕಾಲೇಜಿನ ಆವರಣದಲ್ಲಿ ನೇಹಾಳನ್ನು 9 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ
ಈ ಘಟನೆಯನ್ನು ಅಲ್ಲಿನ ಪ್ರತ್ಯಕ್ಷ ದರ್ಶಿಗಳು ಮತ್ತು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು ಇದರ ಆಧಾರದಮೇಲೆ ಆತನನ್ನು ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿ ಗಲ್ಲಿಗೇರಿಸಬೇಕು.

ರಾಜ್ಯದಲ್ಲಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಭದ್ರತೆ ಇಲ್ಲದಂತಾಗಿದೆ ನಾವು ನಮ್ಮ ಮಕ್ಕಳನ್ನು ಶಿಕ್ಷಣ ಕೊಡಿಸಲು ಶಾಲೆಗಳಿಗೆ ಕಳಿಸಬೇಕೊ ಅಥವಾ ಮನೆಯಲ್ಲೇ ಉಳಿಸಿಕೊಳ್ಳಬೇಕೋ ಎನ್ನುವಂತ ಗೊಂದಲ ಸೃಷ್ಟಿಯಾಗಿದೆ. ಹಾಗಾಗಿ ಹೆಣ್ಣು ಮಕ್ಕಳು ಶಿಕ್ಷಣ ಕಲಿಯಲು ಸರ್ಕಾರ ಧೈರ್ಯ ತುಂಬಬೇಕಿದೆ ಹೆಣ್ಣು ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದು ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಚೆನ್ನ ಬಸವನಗೌಡ ಪಾಟೀಲ್, ಬಂಗಾರು ಹನುಮಂತ, ಶಂಕರ್ ಮೇಟಿ, ಸಿದ್ದಾರ್ಥ್ ಸಿಂಗ್, ಬಲ್ಲಾಹುನ್ಸಿ ರಾಮಣ್ಣ, ಮಹಿಳಾ ಮೋರ್ಚಾ ಅಧ್ಯಕ್ಷೆ ಆರುಂಡಿ ಸುವರ್ಣ,ಉಪಾಧ್ಯಕ್ಷೆ ರೇಖಾರಾಣಿ, ದೀನ ಮಂಜುನಾಥ, ಭಾರತಿ ಪಾಟೀಲ್ , ಮೀರಾಬಾಯಿ, ಪ್ರಿಯಾಂಕ ಜೈನ್ ಸಮಾಜ ಸೇವಕರು, ಮಂಡಲ ಅಧ್ಯಕ್ಷೆ ಕವಿತಾ,ಉಮಾ ಪಕ್ಷದ ಕಾರ್ಯಕರ್ತರು ವೀರಶೈವ ಲಿಂಗಾಯತ ಸಮಾಜ ಸಂಘದ ಮಧುರ ಚೆನ್ನ ಶಾಸ್ತ್ರಿ, ಪಂಪಾಪತಿ, ಮಹಿಳಾ ಶಕ್ತಿ ಸಂಘದವರು, ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!