
29 ರಂದು ಸಮುದಾಯ ಭವನ ಉದ್ಘಾಟನೆ, ಶ್ರೀ ಈರಣ್ಣ ದೇವರ 108 ಕುಂಭೋತ್ಸವ
ಕರುನಾಡ ಬೆಳಗು ಸುದ್ದಿ
ಗAಗಾವತಿ, 28- ನಗರದ ಶ್ರೀ ಸಿಬಿಎಸ್ ವೃತ್ತದ ಹತ್ತಿರದ ಶ್ರೀ ಈರಣ್ಣ ದೇವರ ಮೂರ್ತಿ ಹಾಗು ಶ್ರೀ ವೀರಭದ್ರೇಶ್ವರ ಮೂರ್ತಿಗಳ ೮ನೇ ವರ್ಷದ ಪ್ರತಿಷ್ಠಾಪನೆ ಹಾಗು ಶ್ರೀ ಈರಣ್ಣ ದೇವರ ೧೦೮ ಕುಂಭೋತ್ಸವ ಮತ್ತು ಸಮುದಾಯ ಭವನದ 1ನೇ ಅಂತಸ್ತಿನ ಕಟ್ಟಡ ಲೋಕರ್ಪಣಾ ಕಾರ್ಯಕ್ರಮವು ಅ.29 ಬೆಳಗ್ಗೆ 7 ಗಂಟೆಗೆ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಓಲಿ ಶರಣಪ್ಪ ಹಾಗು ಕಾರ್ಯಾಧ್ಯಕ್ಷ ವೀರಭದ್ರಪ್ಪ ಸಾಲಗುಂದಿ ತಿಳಿಸಿದ್ದಾರೆ.
ವೇದಿಕೆಯ ದಿವ್ಯ ಸಾನಿಧ್ಯವನ್ನು ಶ್ರೀ ನಾಗಭೂಷಣ ಶಿವಾಚಾರ್ಯರು, ಶ್ರೀ ಭುವೇಶ್ವರ ತಾತಾ ಸುಳೇಕಲ್ ಹಾಗು ಶ್ರೀ ಗವಿಸಿದ್ದಯ್ಯ ತಾತನವರು ಅರಳಹಳ್ಳಿ ಇವರು ವಹಿಸಲಿದ್ದಾರೆ.
ಶಾಸಕ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ವಹಿಸುವರು, ಮಾಜಿ ಸಂಸದ ಶಿವರಾಮಗೌಡ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಜಿ.ವೀರಪ್ಪ, ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ್, ವಾಣಿಜ್ಯೋದ್ಯಮಿಗಳಾದ ವಿರುಪಾಕ್ಷಪ್ಪ ಸಿಂಗನಾಳ್, ಕೆ.ಕಾಳಪ್ಪ, ಭೂದಾನಿ ಹಾಗು ಸಮಿತಿಯ ಗೌರವಧ್ಯಕ್ಷ ಅಂದಣ್ಣ ಅಂಗಡಿ, ಗಂಗಾವತಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಈಶ್ವರ್ ಸವಡಿ, ವಾಸ್ತು ತಜ್ಞ ವಾಸು ಕೊಳಗದ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದರು.