4

ಮಕ್ಕಳ ಸ್ವಾವಲಂಬಿ ಶಕ್ತಿ ಜಾಗೃತಿ ಮುಖ್ಯ : ಕೆ.ಪಿ.ಜಯ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 28- ಸ್ನೇಹ ಸಂಸ್ಥೆಯು, ಬಾಲ್ಯ ವಿವಾಹ, ದೇವದಾಸಿ ಪದ್ಧತಿಗೆ ಒಳಗಾಗದಂತೆ ಮಕ್ಕಳನ್ನು ಸಶಕ್ತರನ್ನಾಗಿ ಮಾಡಲು ದಲಿತ ಸಮುದಾಯಗಳಲ್ಲಿ ಕಿಶೋರಿ ಸಂಘಗಳನ್ನು ಮಾಡಲಾಗಿದ್ದು ಜೀವನೋಪಾಯಕ್ಕೆ ಉಚಿತ ತರಬೇತಿ ನೀಡಿ ಮಕ್ಕಳಲ್ಲಿ ಸ್ವಾವಲಂಬಿ ಶಕ್ತಿ ಜಾಗೃತಿಗೊಳಿಸುವುದೇ ಮುಖ್ಯಗುರಿಯಾಗಿದೆ ಎಂದು ಕೆ.ಪಿ.ಜಯ ಹೇಳಿದರು.

ನಗರದ ಎಂಎನ್‌ಎ ಸರಕಾರಿ ಬಾಲಕಿಯರ ಶಾಲಾ ಸಭಾ ಭವನದಲ್ಲಿ ದೇವದಾಸಿ ಮಕ್ಕಳು ಹಾಗು ದಲಿತ ಬಡ ಮಕ್ಕಳಿಗೆ ಉಚಿತ ಬಟ್ಟೆ, ಪುಸ್ತಕ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಉಚಿತ ತರಬೇತಿ ಮೂಲಕ ಜೀನ್ಸ್ ಮತ್ತು ಫ್ಯಾಶನ್ ಡಿಸೈನ್ ಹೊಲಿಗೆ ತರಬೇತಿ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ ದೇವದಾಸಿ ಪದ್ಧತಿಯನ್ನು ಮುಕ್ತಗೊಳಿಸುವ ಮೂಲಕ ಮಕ್ಕಳಿಗೆ ಸ್ವಾವಲಂಬನೆ ಬದುಕನ್ನು ನಡೆಸಲು ಮುಂದಾಗಬೇಕು ಎಂದರು.

ಹಿAದುಳಿದ ಒಕ್ಕೂಟ ಶ್ರೀದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರು ಹಾಗು ಟಿಎಪಿಸಿಎಂಎಸ್ ನೂತನ ನಿರ್ದೇಶಕ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಹಿಂದುಳಿದ ಮಕ್ಕಳು ತುಂಬಾ ಕಾಳಜಿಯಿಂದ ವಿದ್ಯಾಬ್ಯಾಸ ಮಾಡಬೇಕು, ಸರಕಾರ ಅನೇಕ ಸೌಲಭ್ಯ ನೀಡುತ್ತಿದೆ ಅಲ್ಲದೆ, ಎನ್‌ಜಿಒಗಳು ಉತ್ತಮ ಸಹಕಾರ ನೀಡುವ ಮುಖೇನ ಬೇಕು ಬೇಡಗಳಿಗೆ ಸ್ಪಂದಿಸುತ್ತಿದ್ದು, ನನ್ನ ಸ್ವಂತ ಹಣದಿಂದ ಪ್ರತಿ ಬಾರಿ ಐದು ಸಾವಿರ ಮಕ್ಕಳಿಗೆ ಉಚಿತ ನೋಟ್ ಬುಕ್ ನೀಡಲಾಗುತ್ತಿದ್ದು, ಅಗತ್ಯ ಬಿದ್ದರೆ ಮಕ್ಕಳಿಗೆ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕಾ ಘಟಕದ ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ಸ್ನೇಹ ಸಂಸ್ಥೆಗಳು ಕೀಳರಿಮೆ ಹೊಂದದೆ ಮುನ್ನುಗ್ಗುವ ಛಲ ಬೆಳೆಸಿಕೊಳ್ಳಿ ಎಂದರು.

ಸ್ನೇಹ ಸಂಸ್ಥೆಯ ಪ್ರಾಜೆಕ್ಟ್ ಕೋರ್ಡಿನೇಟರ್ ಆದ ಪ್ರತಿಭಾ ಹಿರೇಮಠ್, ಕಿಶೋರಿಯ ಸಂಘದ ಪ್ರತಿನಿಧಿ ಕುಮಾರಿ ಪ್ರಿಯಾಂಕ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!