WhatsApp Image 2024-04-25 at 4.01.18 PM

ವಿದ್ಯಾರ್ಥಿಗಳ ಬೇಡಿಕೆಗಳ ಬಲಿಸ್ಕಾರಕ್ಕಾಗಿ ಮನವಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 25- ಬಳ್ಳಾರಿ ಲೋಕಸಭಾ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾದ ಎಂ ದೇವದಾಸ್ ಅವರನ್ನು ಎಐಡಿಎಸ್ಓ ವಿದ್ಯಾರ್ಥಿಗಳ ವತಿಯಿಂದ ಬೇಡಿಕೆಯ ಪ್ರಣಾಳಿಕೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಐಡಿಎಸ್ಓ, ಉಪಾಧ್ಯಕ್ಷರು ಉಮಾ ಮಾತನಾಡುತ್ತಾ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಎಲ್ಲಾ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದರು.

ಕೂಡ ವಿದ್ಯಾರ್ಥಿಗಳ ಸಮಸ್ಯೆಗಳು ಪರಿಷ್ಕಾರ ಆಗುತ್ತಿಲ್ಲ ಎಂದರು. ಎಲ್ಲಾ ಪಕ್ಷಗಳು ಖಾಸಗಿಕರಣ ಮಾಡಿ ಬಡವರಿಗೆ ಶಿಕ್ಷಣ ಇಲ್ಲ ಅನ್ನುವಂತೆ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್ ನಲ್ಲಿ 10% ಮತ್ತು ರಾಜ್ಯ ಬಜೆಟ್ ನಲ್ಲಿ 30ರಷ್ಟು ಮೀಸಲಿಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ದೊರೆಯಬೇಕು, ವಿದ್ಯಾರ್ಥಿ ವೇತನ ಸರಿಯಾದ ಸಮಯಕ್ಕೆ ನೀಡಬೇಕು ಮತ್ತು ಮುಖ್ಯವಾಗಿ ಬಡವರಿಂದ ಶಿಕ್ಷಣ ಕಸದುಕೊಳ್ಳುವ ರಾಷ್ಟ್ರೀಯ ಶಿಕ್ಷಣ ನೀತಿ ( ಎನ್‌ಇಪಿ 20 20) ಅನ್ನು ಹಿಂಪಡೆಯಬೇಕು ಎಂದು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಎಐಡಿಎಸ್ಓ ರಾಜ್ಯ ಸೆಕ್ರೆಟರಿ ಯೇಟ್,ಸದಸ್ಯರು, ರವಿಕಿರಣ್, ಕ ಬೇಜಾನ್ ಜೀ ಅನುಪಮಾ ಕಚೇರಿ ಕಾರ್ಯದರ್ಶಿದೆ ಹರಿಕ ಮತ್ತು ಸದಸ್ಯರಾದ ಇಂದ್ರ ನಾಗಲಿಂಗ ರಾಮಾಂಜನಿ ಮಹೇಶ್ ಯೇಸುದಾಸ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!