ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಗೆಲುವು ಖಚಿತ : ಮಾಜಿ ಶಾಸಕ ಪರಣ್ಣ ಮುನವಳ್ಳಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 26- ಪ್ರಧಾನಮಂತ್ರಿ ನರೆಂದ್ರ ಮೋದಿಯವರ ಜನಪರ ಆಡಳಿತದ ಅಲೆ ದೇಶದಲ್ಲಿ ಇದೆ. ಮತದಾರರುಇ ದೇಶದ ಭದ್ರತೆಗಾಗಿ ಬಿಜೆಪಿ ಅಭ್ಯರ್ಥಿ ಡಾ/ಬಸವರಾಜ ಕ್ಯಾವಟರ ಗೆಲ್ಲಿಸುವುದು ಖಚಿತ ಎಂದು ನಿಕಟಪೂರ್ವ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಜಬ್ಬಲಗುಡ್ಡ, ಬೂದಗುಂಪ, ಹಲೇಕುಮ್ಮಟ್ಟ, ನಾಗೇಶನಹಳ್ಳಿ, ಚಂದ್ರಗಿರಿ ತಾಂಡ, ಬಿಳೇಭಾವಿ, ಕುಕನಪಳ್ಳಿ, ಅಬ್ಬಿಗೇರಿ, ಕೆಂಚನದೋಣಿ, ಕಲ್ಲ ತಾವರಗೇರಿ, ಹಾಲಳ್ಳಿ, ದನಕದೊಡ್ಡಿ, ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ ಪರ ಮತಯಾಚಿಸಿ ಮಾತನಾಡಿ ಪ್ರತಿಯೋಬ್ಬ ಬಿಜೆಪಿ ಕಾರ್ಯಕರ್ತ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರ ಯೋಜನೆಗಳ ಬಗ್ಗೆ ವಿವರಿಸಿ ಬಿಜೆಪಿ ಮತ ಹಾಕಿಸಲು ಮುಂದಾಗೋಣ ಎಂದರು.
ಈ ಸಂದರ್ಭದಲ್ಲಿ ವಿರುಪಾಕ್ಷಪ್ಪ ಸಿಂಘನಾಳ, ಚೆನ್ನಪ್ಪಮಳಗಿ, ರಾಜು ನಾಯಕ, ವಿರಭದ್ರಪ್ಪ ನಾಯಕ, ಹನುಮಂತಪ್ಪ ನಾಯಕ, ಮನೋಹರಗೌಡ ಹೇರೂರ, ರುದ್ರೇಶ ಡ್ಯಾಗಿ, ಹುಸೆನಪ್ಪ ಸ್ವಾಮಿ ಮಾದಿಗ, ಹೆಚ್.ಎಂ.ಸಿದ್ದರಾಮಸ್ವಾಮಿ, ಪ್ರಶಾಂತ ಕುಲಕರ್ಣೀ, ಹನುಮಂತ ಸರಿಗಮ, ವಿಜಯರೆಡ್ಡಿ, ವಿರುಪಾಕ್ಷಕಿ ದನಕನದೋಡ್ಡಿ ಮುಂತಾದವರು ಉಪಸ್ಥಿತರಿದ್ದರು.
