WhatsApp Image 2024-04-27 at 1.33.21 PM

ನರೇಂದ್ರ ಮೋದಿಯವರು ಆಡಳಿತ ನೋಡಿ ವಿಶ್ವವೇ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ : ಮಾಜಿ ಸಚಿವ ಹಾಲಪ್ಪ ಆಚಾರ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,27 ಭಾರತ ಸೈನಿಕರ ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿ ಬದಲಾವಣೆಗಳಾಗಿವೆ. ಉದಾಹರಣೆಗೆ ಇತ್ತೀಚೆಗೆ ಸ್ವದೇಶಿ ಬುಲೆಟ್ ಪ್ರೂಪ್ ಜಾಕೆಟ್ ಕೂಡಾ ಒಂದು ಮತ್ತೊಮ್ಮೆ ಭಾರತ ದೇಶವನ್ನು ಸುಭದ್ರವಾಗಿ ಸುರಕ್ಷಿತವಾಗಿ ಮುನ್ನಡಸಲು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ನರೇಂದ್ರ ಮೋದಿಯವರು ಆಡಳಿತ ನೋಡಿ ವಿಶ್ವವೇ ಮೆಚ್ಚು ವ್ಯಕ್ತಪಡಿಸಿವೆ ಎಂದರು ಈ ಹಿಂದೆ ಕಾಂಗ್ರೆಸ್ ಪಕ್ಷದವರು 60 ವರ್ಷ ಆಡಳಿತ ಮಾಡಿದು ತಮ್ಮ ಕುಟುಂಬ ರಾಜಕಾರಣ ಮಾಡಿ. ಅತಿ ಹೆಚ್ಚು ಲಕ್ಷ ಲಕ್ಷ ಕೋಟಿ ಬ್ರಷ್ಟಚಾರ ಮಾಡಿ ದೇಶವನ್ನು ದಿವಾಳಿ ಮಾಡಿದವರು ಕಾಂಗ್ರೇಸ ನವರು ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಡ್ರೆಸ್ ಇಲ್ಲದಂತಾಗಿದೆ ಅವರ ಸರಕಾರ ಅಧಿಕಾರಕ್ಕೆ ಬರುವದಿಲ್ಲ ಅವರು ವಿರೋಧ ಪಕ್ಷ ನಾಯಕರು ಸಹ ಆಗುವದಿಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ತಾಲೂಕಿನ ಕರಮುಡಿ ಬಳೂಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹಿರಂಗ ಪ್ರಚಾರ ಸಭೆ. ಲೋಕಸಭಾ ಅಭ್ಯರ್ಥಿ ಪರ ಮತಯಾಚನೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಹಿಂದೆ ನಮ್ಮ ದೇಶ 14 ಸ್ಥಾನದಲ್ಲಿ ಇತ್ತು ನರೇಂದ್ರ ಮೋದಿಯವರು ಬಂದ ನಂತರ ನಮ್ಮ ದೇಶ 5 ಸ್ಥಾನದಲ್ಲಿದೆ ಕೇಂದ್ರ ಸರಕಾರದಿಂದ ಸಣ್ಣ ಹಿಡುವಳಿ ರೈತರಿಗೆ ವರ್ಷಕ್ಕೆ,, 6 ಸಾವಿರ ಮತ್ತು ರಾಜ್ಯ ಬಿಜೆಪಿ ಸರಕಾರ ದಿಂದ 4 ಸಾವಿರ ರೂಪಾಯಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಬಿಜೆಪಿ ಪಕ್ಷ ರೈತರ ಹಿತ ಕಾಪಾಡಲಾಗಿತ್ತು ಆದರೆ ಕಾಂಗ್ರೆಸ್ ರಾಜ್ಯ ಸರಕಾರ ಈ ಯೋಜನೆ ನಿಲ್ಲಿಸಿದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ರೈತ ವಿರೋಧಿ ಸರಕಾರ ವಾಗಿದೆ ಎಂದರು.

ದೇಶದಲ್ಲಿ ನರೇಂದ್ರ ಮೋದಿಯವರು 10 ವಷ೯ದ ಸುಭದ್ರ ಆಡಳಿತ ನೋಡಿ ಇಡೀ ಪ್ರಪಂಚವೇ ನಮ್ಮ ಭಾರತ ದೇಶದ ಕಡೇ ತಿರುಗಿ ನೋಡುವಂತೆ ಮಾಡಿದ್ದಾರೆ ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ದೇಶದ ಭದ್ರತೆಗಾಗಿ ಮೋದಿಜೀ ಅವರ ಕೈ ಬಲಪಡಿಸಬೇಕು ನರೇಂದ್ರ ಮೋದಿಯವರು ನಮ್ಮ ದೇಶದ ಗೌರವವನ್ನು ಹಿಮಾಲಯ ಪರ್ವತಗಳ ಎತ್ತರಕ್ಕೆ ಏರಿಸಿದ್ದಾರೆ ಕಾಂಗ್ರೇಸ್ ನವರು ರೈತರಿಗೆ ಉಪಯೋಗವಾಗುವಂತ ಯಾವ ಯೋಜನೆಗಳನ್ನು ಜಾರಿಗೊಳಿಸಲಿಲ್ಲ ತಾಲೂಕಿನ ಯಾವುದೇ ಕೆರೆಗಳ ಜೀರ್ಣೋದ್ಧಾರ ಮಾಡಲಿಲ್ಲ. ಹಲವಾರು ವರ್ಷಗಳ ಕಾಲ ರಾಜಕಾರಣ ಮಾಡಿದರು ಕ್ಷೇತ್ರದ ಕೆರೆಗಳಿಗೆ ನೀರು ತರಲಾಗಲಿಲ್ಲ ನಿಮ್ಮ ಆಶೀರ್ವಾದದಿಂದ ನಾನು ಶಾಸಕನಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೆನೆ ಇದು ನಮ್ಮ ಬಿಜೆಪಿ ಪಕ್ಷ ಬದ್ದತೆ ನಾವೂ ಕೃಷ್ಣಾ,ಬಿ,ಸ್ಕೀಂ,ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದಾಗ ನೀವು ಇದು ಅಡಿಗಲ್ಲು ಅಲ್ಲ ಅದು ಅಡ್ಡಗಲ್ಲು ಎಂದು ಹೇಳಿದವರು.

ಯಲಬುರ್ಗಾ ಎತ್ತರ ಪ್ರದೇಶದಲ್ಲಿ ಇದೆ ಸತ್ಯ ಹರಿಶ್ಚಂದ್ರ ಬಂದರು ನೀರು ಬರುವದಿಲ್ಲ ಎಂದು ಹೇಳಿದವರು ಕಾಂಗ್ರೇಸ್ ನವರಿಗೆ ನಾಚೀಕೆ ಯಾಗಬೇಕು ನಾನು ಶಾಸಕರಾದ ಮೇಲೆ ಕೃಷ್ಣ ಯ ನೀರು ತಂದು ಕೆರೆಗಳಿಗೆ ನೀರು ತಂದು ಭೂ ತಾಯಿ ಒಡಲಿಗೆ ಹಾಕಿದ್ದೇನೆ ಕಾಂಗ್ರೇಸ್ ನವರ ಅಧಿಕಾರದ ಅವಧಿಯಲ್ಲಿ ತಾಲೂಕಿನ ಯಾವ ಕೆರೆಗಳು ಜೀರ್ಣೋದ್ಧಾರವಾಗಲಿಲ್ಲ ಕಾಂಗ್ರೇಸ್ ನವರು ರೈತರಿಗೆ ಅನುಕೂಲ ವಾಗುವಂತ ಕೆಲಸ ಏನು ಮಾಡಲಿಲ್ಲ ದೇಶದ ಅಭಿವೃದ್ಧಿ ಗೋಸ್ಕರ ಪ್ರಧಾನಿ ನರೇಂದ್ರ ಮೋದಿಯ ಆಡಳಿತ ದಕ್ಷತೆಯನ್ನು ನೋಡಿ ಅವರ ಕೈ ಬಲಪಡಿಸಲು ಬಿಜೆಪಿ ಪಕ್ಷದ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕು.

ಭಾರತವನ್ನು ಡಿಜಿಟಲ್ ಕರಣ ಮಾಡುವುದು ಅಸಾಧ್ಯ ಎಂದು ಹಿಂದಿನ ಕೇಂದ್ರ ಕಾಂಗ್ರೆಸ್ ಸರಕಾರದ ಸಚಿವ ಚಿದಂಬರಂ ಅವರು ಮಾತನಾಡಿದ್ದರು ಆದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಇಂದು ಸಾಧ್ಯಮಾಡಿ ತೋರಿಸಿದ್ದಾರೆ. ಈಗ ಪ್ರತಿಯೊಬ್ಬ ಭಾರತೀಯರು ಇಂದು ಡಿಜಿಟಲ್ ಕರಣಕ್ಕೆ ಹೊಂದಿಕೊಂಡು ಬದಲಾವಣೆಮಧ್ಯವರ್ತಿಗಳ ಹಾವಳಿ ಇಲ್ಲದೆ ನೆರವಾಗಿ ಫಲಾನುಭವಿಗಳ ಕಾತಿಗೆ ಯೋಜನೆ ಹಣ ರವಾನಿಯಾಗುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸೇರುತ್ತದೆ ಎಂದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಬಸವರಾಜ ಕೆ ಶರಣಪ್ಪ ಮಾತನಾಡಿ ಭಾರತ ರಕ್ಷಣಾ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳ ಬದಲಾವಣೆಯಾಗಿವೆ ಇತ್ತೀಚಿಗೆ ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ಉದಾರಣೆ ಕೂಡ ಒಂದು ಆತ್ಮ ನಿರ್ಬರ ಭಾರತ ಎಂಬ ಘೋಷಣೆ ಕೇವಲ ಮಾತಾಗಿ ಉಳಿಯಲಿ ಇಂದು ಕಾರ್ಯ ರೂಪದಲ್ಲಿ ಅನುಷ್ಠಾನಗೊಳಿಸಲಾಗಿದೆ ಇಂದು ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿ ಮತ್ತೊಮ್ಮೆ ನಮ್ಮ ದೇಶ ಸುಭದ್ರವಾಗಿ ಮುನ್ನಡೆಯಲು ಬಿಜೆಪಿ ಪಕ್ಷಕ್ಕೆ ಮತ ಹಾಕಿ ಎಂದರು ಬಯಸುತ್ತಿದ್ದಾನೆ ಸಣ್ಣಪುಟ್ಟ ವ್ಯಾಪಾರಸ್ಥರು ಸಹ ಮೊಬೈಲ್ ಮೂಲಕವೇ ಪ್ರತಿ ವ್ಯವಹಾರವನ್ನು ಸರಳಗೊಳಿಸುವ ಮೂಲಕ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೆರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಯೋಜನೆಗಳ ಹಣ ರೈತರ ಖಾತೆಗೆ ಜಮ್ಮಾ ಆಗುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲುತ್ತದೆ ಎಂದು ಮಾಜಿ ಸಚಿವರು ಹೇಳಿದರು.

ನಂತರ ಸಿ. ಎಚ್ ಪೋಲೀಸ್ ಪಾಟೀಲ ಶಂಕುತಲಾದೇವಿ ಮಾಲಿ ಪಾಟೀಲ ಸೋಮನಗೌಡ. ಮಲ್ಲನಗೌಡ ಕೋನನಗೌಡ್ರ ಅವರು ಮಾತನಾಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರ ಕಮಲದ ಗುರುತಿಗೆ ಮತ ಹಾಕುವ ಮೂಲಕ ಕೂಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಅವರು ಬಂಡಿಹಾಳ, ತೂಂಡಿಹಾಳ, ಸಂಕನೂರು ಗ್ರಾಮಗಳಲ್ಲಿ ಹಳ್ಳಗಳಿಗೆ ಬ್ರಿಜ್ ಇಲ್ಲದಿರುವದು ದುರಂತ ಈ ಹಿಂದೆ ಮಳೆಯಾದರೆ ಹಳ್ಳದಲ್ಲಿ ಸಾಕಷ್ಟು ಜನರು ನೀರು ಪಾಲಾಗಿ ಮೃತ ಪಟ್ಟಿದ್ದಾರೆ ಈ ಗ್ರಾಮಕ್ಕೆ ಬ್ರಜ್ ಮಾಡಿಸಬೇಕು ಎನ್ನುವುದು ಕಾಂಗ್ರೆಸ್ ನವರು ಗೂತ್ತಾಗಲಿಲ್ಲ ನಂತರ ಶಾಸಕರಾದ ಹಾಲಪ್ಪ ಆಚಾರ ಈ ಮೂರು ಗ್ರಾಮಗಳ ಹಳ್ಳಗಳಿಗೆ ಬ್ರಜ್ ಮಾಡಿ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಕ್ಷೇತ್ರದ ಕೆರೆಗಳಿಗೆ ತುಂಬಿ ಸುವದಕ್ಕಾಗಿ ಶ್ರಮ ವಹಿಸಿದ್ದಾರೆ ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಕ್ಷ ಪ್ರಮಾಣಿಕ ಉತ್ತಮ ಆಡಳಿತ ನೋಡಿ ಬಿಜೆಪಿ ಪಕ್ಷಕ್ಕೆ ಮತ ಕೊಡಬೇಕು ದೇಶ. ಸುಭದ್ರವಾಗಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಬೇಕು ಎಂದರು.

ಮತದಾರರು ದೇಶದ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳನ್ನು ನಂಬ ಬೇಡರಿ ಎಂದು ಹೇಳಿದರು.

ನಿಮ್ಮ ಮತ ದೇಶಕ್ಕೆ ಹಿತ. ಲೋಕಸಭಾ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರ ಪರ ಮತಯಾಚನೆ ಮಾಡಿ ಬಿಜೆಪಿ ಪಕ್ಷಕ್ಕೆ ಮತ ನೀಡಿ. ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರ ಗೆಲುವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಸಲಿಂಗಪ್ಪ ಭೋತೆ, ಸಿಎಚ್ ಪೋಲಿಸ್ ಪಾಟೀಲ, ಮಲ್ಲನಗೌಡ ಕೋನನಗೌಡ್ರ, ಶರಣಪ್ಪ ಗುಂಗಾಡಿ, ವೀರಣ್ಣ ಹುಬ್ಬಳ್ಳಿ, ರತ್ನನ್ ದೇಸಾಯಿ, ಶಿವಕುಮಾರ ನಾಗಲಾಪೂರಮಠ, ಸಂಗಪ್ಪ ಬಂಡಿ, ಶಂಕುತಲಾದೇವಿ ಮಾಲಿ ಪಾಟೀಲ, ಕವಿತಾ ಉಳ್ಳಾಗಡ್ಡಿ, ಗೌತಮಿ ಜೋಷಿ, ಇಂದಿರಾ ಉಳ್ಳಾಗಡ್ಡಿ, ಬಸವರಾಜ ಉಳ್ಳಾಗಡ್ಡಿ, ವಿರೇಶ ಮಾನಶೆಟ್ಟಿ, ಸೋಮನಗೌಡ ಸೇರಿದಂತೆ ಮತ್ತು ಇತರರು ಭಾಗವಹಿಸಿದರು

Leave a Reply

Your email address will not be published. Required fields are marked *

error: Content is protected !!