ಅಧಿಕಾರಕ್ಕೆ ಬರೋ ಎಲ್ಲಾ ಪಕ್ಷಗಳ ಕೂಡ ಬಂಡವಾಳಶಾಹಿಗಳ ಏಜೆಂಟ್ಸ್ : ಶರಣು ಗಡ್ಡಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 28- ತಾಲೂಕಿನ ನಗರ ಮತ್ತು ವಿವಿಧ ಹಳ್ಳಿಗಳಲ್ಲಿ ಜೀಪ್ ಜಾಥ ನಡೆಸಿದ ಸಂದರ್ಭದಲ್ಲಿ ಸಭೆಯಲ್ಲಿ ಮಾತನಾಡಿ ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಶರಣು ಗಡ್ಡಿ ಮತ ಹಾಕಲು ಮನವಿ ಮಾಡಿದರು.
ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ಜೀಪ್ ಜಾಥ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಸದಸ್ಯರಾದ ಶರಣು ಪಾಟೀಲ್ ಮಾತನಾಡಿ
ಇವತ್ತು ಅಧಿಕಾರಕ್ಕೆ ಬರೋ ಎಲ್ಲಾ ಪಕ್ಷಗಳ ಕೂಡ ಬಂಡವಾಳಶಾಹಿಗಳ ಎಂಜೇಂಟ್ ರು ಸ್ವಾತಂತ್ರ ಬಂದು 72 ವರ್ಷ ಆದ್ರೂ ನಮ್ಮ ದೇಶದಲ್ಲಿ ಬೆಳೆದಿರೋದು ಬರೀ ಶ್ರೀಮಂತರೇ ಎಂಬುದು ನಮ್ಮ ಪಕ್ಷದ ನಿಲುವು ಹಾಗಾಗಿ ಇಂತ ಪಕ್ಷಗಳನ್ನು ಸೋಲಿಸಿ ಎಸ್.ಯು.ಸಿ.ಐ (ಕಮ್ಯುನಿಸ್ಟ್ ) ಪಕ್ಷವನ್ನು ಗೆಲ್ಲಿಸಬೇಕು ಎಂದರು.
ನಂತರ ಅಲ್ಲಿ ನೆರದಿದ್ದ ಯುವಕರು ಮತ್ತು ರೈತ ಕಾರ್ಮಿಕರನ್ನು ಉದ್ದೇಶಿಸಿ ಅಭ್ಯರ್ಥಿ ಶರಣು ಗಡ್ಡಿಯವರು ಮಾತನಾಡಿ ನಮ್ಮ ದೇಶದಲ್ಲಿ ಉದ್ಯೋಗ ಹರಿಸಿ ಬರುತ್ತಿರುವ ನಿರುದ್ಯೋಗಿ ಯುವಜನರಿಗೆ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಭರ್ತಿಯಾಗುತ್ತಿಲ್ಲ. ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಪೊಲೀಸ್ ಹುದ್ದೆಗೆ 60,000 ಪೋಸ್ಟ್ಗಳಿಗೆ 48 ಲಕ್ಷ ಅರ್ಜಿಗಳು ಬಂದಿವೆ ರೈಲ್ವೆ ಇಲಾಖೆಯಲ್ಲಿ 90,000 ಹುದ್ದೆಗಳಿಗೆ 2.5 ಕೋಟಿ ಅರ್ಜಿಗಳು ಬಂದಿವೆ ಆದ್ರೆ ಬರೀ ಪರೀಕ್ಷಾ ಶುಲ್ಕವಷ್ಟೇ ಬರಿಸುವ ದುಡ್ಡಲ್ಲೇ ಸರ್ಕಾರಕ್ಕೆ ದುಡ್ಡು ಹೋಗುತ್ತೆ,ಆದ್ರೆ ಉದ್ಯೋಗಗಳು ಎಲ್ಲರೂ ಸಿಗ್ತಾವಂದ್ರೆ ಇಲ್ಲ ಹಾಗಾಗಿ ಇವತ್ತು ಇಂತಹ ನಿರುದ್ಯೋಗದ ಸಮಸ್ಯೆಗಳ ವಿರುದ್ಧ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷ ನಿರಂತರ ಜನ ಹೋರಾಟವನ್ನು ಕಟ್ಟುತ್ತಾ ಈ ಪಾರ್ಲಿಮೆಂಟರಿ(ಲೋಕಸಭಾ ) ಚುನಾವಣೆಯನ್ನು ಹೋರಾಟದ ಭಾಗ ಎಂದು ಭಾವಿಸಿದೆ.
ಈ ಲೋಕಸಭಾ ಚುನಾವಣೆಯಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಈ ಚುನಾವಣೆ ಸಂದರ್ಭದಲ್ಲಿ ಧ್ವನಿ ಎತ್ತುತ್ತಿದೆ. ಕಾರ್ಮಿಕರ, ದುಡಿಯುವರ, ಬಡವರ ಪಕ್ಷ ವನ್ನು ಎಲ್ಲ ವರ್ಗದ ಜನ ಬೆಂಬಲಿಸಿ, ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ ಶರಣು ಪಾಟೀಲ್, ರಮೇಶ್ ವಂಕಲಕುಂಟಿ, ಗಂಗರಾಜ ಅಳ್ಳಳ್ಳಿ, ದೇವರಾಜ್ ಹೊಸಮನಿ , ಮಲ್ಲಪ್ಪ, ಶಾರದಾ, ಸುರೇಶ್ ಹಾಗೂ ಗಡ್ಡಿಯ ಗ್ರಾಮಸ್ಥರು ಉಪಸ್ಥಿತರಿದ್ದರು.
