ಗಂಗಾವತಿ : ಜಗಜ್ಯೋತಿ ಬಸವಣ್ಣನವರ ಜಯಂತಿ ಆಚರಣೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 10- ಬಸ್ ನಿಲ್ದಾಣದ ಬಳಿಯ ಜಗಜ್ಯೋತಿ ಬಸವೇಶ್ವರರ ಪುತ್ತಳಿಗೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸುವ ಮೂಲಕ ಭಕ್ತಿಯಿಂದ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿ ಅಣ್ಣ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅವರ ಆದರ್ಶ, ವಚನಗಳನ್ನು ತಿಳಿದು ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಮೂಲಕ ಎಲ್ಲರೂ ಅವರ ಹಾದಿಯಲ್ಲೇ ಸಾಗಬೇಕೆಂದು ತಿಳಿಸಿದೆನು.
ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಸಮಾಜದ ಮುಖಂಡರಾದ ಮಹಾಲಿಂಗಪ್ಪ , ಆರ್.ಪಿ.ರೆಡ್ಡಿ, ವಿರೂಪಾಕ್ಷಪ್ಪ ಸಿಂಗನಾಳ್, ತಿಪ್ಪೇರುದ್ರಸ್ವಾಮಿ, ರಮೇಶ್ ವಕೀಲರು, ಜಿ ಶ್ರೀಧರ್, ಆನಂದ್ ಅಕ್ಕಿ, ಸಿದ್ದರಾಮಯ್ಯ ಸ್ವಾಮಿ, ಮನೋಹರ ಗೌಡ, ಮಂಜುನಾಥ್ ಮಸ್ಕಿ, ಹೊಸಕೇರಾ ಶಂಕರಗೌಡ, ಯಮನೂರ್ ಚೌಡ್ಕಿ, ವಿಶ್ವನಾಥ್ ಮಾಲಿ ಪಾಟೀಲ್, ಹಾಗೂ ಅನೇಕ ಮುಖಂಡರು, ಸಮಾಜದ ಹಿರಿಯರು, ಉಪಸ್ಥಿತರಿದ್ದರು.
