IMG-20240512-WA0066

ನೀರಿನ‌ ಜಾಗೃತಿಗಾಗಿ ನಿರ್ಮಿಸಿರುವ “ನೀರಿನ ಗಂಡ” ಕಿರು ಚಿತ್ರ ಗವಿಶ್ರೀಗಳಿಂದ ಬಿಡುಗಡೆ

ಕರುನಾಡ ಬೆಳಗು ಸುದ್ದಿ 

ಕೊಪ್ಪಳ, 12- ಕಾನಹೊಸಹಳ್ಳಿಯ ಪರಿಸರಾಸಕ್ತ ಸಂಚಲನ ತಂಡದಿಂದ ಇಲ್ಲಿನ ಗವಿಮಠದಲ್ಲಿ ನೀರಿನ‌ ಜಾಗೃತಿಗಾಗಿ ನಿರ್ಮಿಸಿರುವ ‘ನೀರಿನ ಗಂಡ’ ಎನ್ನುವ ಮೂಕಿ ಕಿರುಚಿತ್ರವನ್ನು ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಭಾನುವಾರ ಬಿಡುಗಡೆಗೊಳಿಸಿದರು.

ಪ್ರಸ್ತುತ ದಿನಗಳಲ್ಲಿ ಮಾನವನ ನಿರ್ಲಕ್ಷ್ಯ ಹಾಗೂ ದುರಾಸೆಯಿಂದ ಉಂಟಾಗಿರುವ ನೀರಿನ ಬವಣೆ ಮತ್ತು ಅಂತರ್ಜಲ ಕುಸಿತ ಸೇರಿದಂತೆ ಹನಿ‌ ನೀರಿಗೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿರುವ ಕುರಿತು ಕೈಗೊಳ್ಳಬೇಕಾದ ಕ್ರಮಗಳು ಕುರಿತು ಕಿರುಚಿತ್ರ ರಚನೆಯಾಗಿದೆ.

ಕೆಂಚಮಲ್ಲನಹಳ್ಳಿಯ ಸಾಫ್ಟವೇರ್ ಎಂಜಿನಿಯರ್ ಪೂರ್ಣಚಂದ್ರ ತೇಜಸ್ವಿಯವರು ಕಥೆಯನ್ನು ನಿರ್ದೇಶನ ಮಾಡಿದ್ದು, ಹಿರೇಕುಂಬಳಗುಂಟೆಯ ನಾಗರಾಜ್ ಗೌಡ, ದಯಾನಂದ್ ಸಜ್ಜನ್, ಅಜಯ್ ಬಿ.ಟಿ.ಗುದ್ದಿ, ವಿನೋದ್ ಕೆ.ಎಸ್, ಸಿದ್ದೇಶ್ ಗೌಡ, ಮಾಸ್ಟರ್ ಸುಭೀಕ್ಷ, ಶ್ರೀಕಂಠ ಸ್ವಾಮಿ, ಶೃತಿ ಸತೀಶ್ ಅಭಿನಯಿಸಿದ್ದು, ಭರತ್ ಸಜ್ಜನ್, ಮಹಾಂತೇಶ್, ಕೊಟ್ರೇಶ್ ತಂಡದಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!