ಗಾಳಿ ಮಳೆಗೆ ಅಪಾರ ಬಾಳೆ ಬೆಳೆ ಮತ್ತು ಮನೆಗಳ ಮೇಲಚ್ಚಾವಣಿ ನಾಶ : ಶಾಸಕ ಗವಿಯಪ್ಪ ಸ್ಥಳಕ್ಕೆ ಭೇಟಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 12- ಮೂರು ದಿನದ ಹಿಂದೆ ಬುಧವಾರ ರಾತ್ರಿ ಸುರಿದಿದ್ದ ಮಳೆಗೆ ಅಪಾರ ಬೆಳೆ ನಾಶವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ರೈತರಿಗೆ ಕಹಿ ಪೆಟ್ಟು ಬಿದ್ದಿದೆ ಶನಿವಾರ ರಾತ್ರಿ ಸುರಿದ ಗಾಳಿ – ಮಳೆಗೆ ನಗರದ ಹೊರಹೊಲಯದ ಗ್ರಾಮ ಗಳಾದ ಬಸವನದುರ್ಗ, ಹಿಪ್ಪಿತೇರಿ,ನರಸಾಪುರ,ನಾಗೇನಳ್ಳಿ, ಹೊಸೂರು, ಕಳ್ಳಿ ರಾಂಪುರ,ಬೆಳಗೋಡು,88 ಮುದ್ಲಾಪುರ, ಚಿತ್ತಾವಾಡಿಗಿ ಮಗಾಣಿಗಳಲ್ಲಿ ಬಾಳೆ ಬೆಳೆ ನಾಶ ವಾಗಿದ್ದು ಮತ್ತು ವಿವಿಧ ಕಡೆಗಳಲ್ಲಿ ಮನೆಗಳ ಮೇಲಚ್ಚಾವಣಿ (ಶೀಟುಗಳು) ಹಾರಿಹೋಗಿದ್ದು ರೈತರಿಗೆ ಮತ್ತು ನಾಗರಿಕರಿಗೆ ತುಂಬಲಾರದ ನಷ್ಟ ಉಂಟಾಗಿದೆ. ಈ ವಿಷಯ ಶಾಸಕರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಅಧಿಕಾರಿಗಳೊಂದಿಗೆ ನಾಶವಾಗಿರುವ ಬೆಳೆಗಳನ್ನು ವೀಕ್ಷಿಸಿದರು.
ಶಾಸಕರಾದ ಹೆಚ್ ಆರ್ ಗವಿಯಪ್ಪನವರು ಬೆಳೆ ಹಾನಿಗೊಳಗಾದ ಪ್ರತಿಯೊಂದು ಹೊಲಗಳಿಗೂ ಭೇಟಿ ನೀಡಿ ರೈತರೊಂದಿಗೆ ಮಾತನಾಡಿ ಸಂಕಟದಲ್ಲಿದ್ದ ರೈತರಿಗೆ ಧೈರ್ಯ ತುಂಬಿ ಸರ್ಕಾರದಿಂದ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಭೇಟಿವೇಳೆ ತೀವ್ರ ಹಾನಿಗೋಳಗಾದ ಮನೆ ಸದಸ್ಯರಿಗೆ ಧನ ಸಹಾಯ ಮಾಡಿದರು ಮತ್ತು ಮನೆಯ ಸೀಟು ಹಾರಿ ಹೋಗಿರುವ ಮನೆಗಳಿಗೆ ಸೀಟು ಕೊಡಿಸುವುದಾಗಿ ತಿಳಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂಧರ್ಭದಲ್ಲಿ ಶಾಸಕರು ದ್ವಿಚಕ್ರ ವಾಹನದಲ್ಲೇ ಸಂಚರಿಸಿ ನಷ್ಟ ಹೊಂದಿದ ಹೊಲಗಳಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದವರು ಕೆಲವೇ ದಿನಗಳ ಹಿಂದೆ ಬಾಳೆ ಬೆಳೆ ಧರೆಗುರುಳಿ ಸಾವಿರಾರು ಎಕರೆ ಬೆಳೆ ನಾಶವಾಗಿ ರೈತರು ಸಂಕಷ್ಟದಲ್ಲಿದ್ದರು ಪುನಃ ನಿನ್ನೆ ರಾತ್ರಿ ಗಾಳಿ ಸಮೇತ ಮಲೆಯಾಗಿದ್ದರಿಂದ ಮತ್ತೆ ಬೆಳೆ ನಾಶವಾಗಿದೆ. ಇನ್ನೇನು ಫಲ ಕೊಡುವಂತ ಸಂದರ್ಭದಲ್ಲಿ ಈ ರೀತಿ ಆಗಿದೆ. ಇಲಾಖೆಯಿಂದ ಹೆಕ್ಟರ್ ಗೆ 26,000 ಸಾವಿರ ಪರಿಹಾರ ಕೊಡಲು ಅವಕಾಶವಿದೆ ಆ ಪ್ರಯತ್ನಮಾಡುತ್ತಾ ಇನ್ನು ಹೆಚ್ಚಿನದಾಗಿ ರೈತರಿಗೆ ಹೊರೆಯಾಗದಂತೆ ಬೇರೆ ಇಲಾಖೆಯೊಂದಿಗೆ ಮಾತನಾಡಿ ಎನ್ ಆರ್ ಜಿ ಕೆಳಗೆ ನಾಶವಾದಂತ ಬೆಳೆಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ನಾಶವಾದ ಬೆಳೆಗಳನ್ನು ಸಮೀಕ್ಷೆ ಮಾಡಿ ಫಲಾನುಭವಿಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸುವ ಕೆಲಸವನ್ನು ಮಾಡುತ್ತೇನೆ ಎಂದರು.
ಬೆಳೆ ಹಾನಿಗೊಳಗಾದ ವಿವರ : ಹೊಸೂರು 126 ಎಕರೆ, ನರಸಾಪುರ 20.15 ಎ. ಸೆಂಟ್ಸ್, ಕಳ್ಳಿರಾಂಪುರ 8.96 ಎ. ಸೆಂಟ್ಸ್, ಬೆಳಗೋಡು 7ಎಕರೆ, 88 ಮುದ್ಲಾಪುರ 2.70 ಎ. ಸೆಂಟ್ಸ್, ಚಿತ್ತವಾಡಿ 34.33ಎ.ಸೆಂಟ್ಸ್, ನಾಗೇನಹಳ್ಳಿ 1.64ಎ.ಸೆಂಟ್ಸ್, ಬಸವನದುರ್ಗ 00, ಒಟ್ಟು 195ರೈತರ 200.78 ಎ. ಹಾನಿಯಾಗಿದ್ದು ಬೆಳೆ ಸಮೀಕ್ಷೆ ಯಿಂದ ತಿಳಿದು ಬಂದಿದೆ.
ಈ ಸಂಧರ್ಭದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ರಮೇಶ್, ಪಿಡಿಒ ಗಂಗಾಧರ , ಗ್ರಾಮ ಲೆಕ್ಕಧಿಕಾರಿ ಗುರುಬಾಸಾವರಾಜ್, ರೈತರರು ಮತ್ತು ಗ್ರಾಮಸ್ಥರು ಇದ್ದರು.
