IMG-20240512-WA0074

ಡಾ.ಗಡ್ಡಿ ದಿವಾಕರ್ ವಿರಚಿತ ಮೌನ ಮಿಡಿದ ಮಾತು ಕವನ ಸಂಕಲನ ಬಿಡುಗಡೆ

ಕರುನಾಡ ಬೆಳಗು ಸುದ್ದಿ 

ಬಳ್ಳಾರಿ, 12- ನಮ್ಮ ಸುತ್ತಮುತ್ತಲಿನ ಘಟನೆಗಳು ಮತ್ತು ಅನುಭವಗಳು ಕೃತಿ ರಚನೆಗೆ ಕಾರಣವಾಗುತ್ತವೆ, ಮತ್ತು ಅತ್ಯಂತ ಮುಖ್ಯ ಸಂಗತಿಯೆಂದರೆ ಸಾಹಿತ್ಯ ರಚನೆಗೆ ಇಂತ ನೈಜ ಘಟನೆಗಳೇ ಕಾರಣವಾಗುತ್ತವೆ, ಕಾರಂತರಿಗೆ ಕಲೆ, ತೇಜಸ್ವಿಗೆ ಪರಿಸರ, ಬೇಂದ್ರೆಗೆ ಸಮಾಜ ಸೇರಿದಂತೆ ಅವರವರ ಭಾವಕ್ಕೆ ತಕ್ಕಂತೆ ಅವರವರ ಸಾಹಿತ್ಯ ರಚನೆಗೊಂಡಿದೆ, ಪುಸ್ತಕಗಳ ಮೂಲಕ ಸಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿ ಬದಲಾವಣೆ ಸಾಧ್ಯ ಎಂದು ಡಾ. ವೈ.ಸಿ ಯೋಗಾನಂದರೆಡ್ಡಿ ಅಭಿಪ್ರಾಯಪಟ್ಟರು.

ಅವರು ಇಂದು ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಸಂಗಂ ಸಂಸ್ಥೆಯಿಂದ ಹಮ್ಮಿಕೊಂಡ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕೃತಿಯ ಕತೃ ಡಾ. ಗಡ್ಡಿ ದಿವಾಕರ್ ಮಾತನಾಡಿ, ನನಗೆ ಸಾಹಿತ್ಯ ರಚನೆಯಲ್ಲಿ ಆಸಕ್ತಿಯಿರಲಿಲ್ಲ, ನನಗೆ ಫೆಸ್ ಬುಕ್ ಮತ್ತು ವಾಟ್ಸಾಪ್ ನಲ್ಲಿ ಟೈಂ ಪಾಸ್ ಗಾಗಿ ಬರೆಯುತ್ತಿದ್ದೆ, ಸಂಗಂ ಕಲ್ಪನೆಯ ಡಾ. ಅರವಿಂದ್ ಪಟೆಲ್ ಇದನ್ನು ಕೃತಿ ಮಾಡೋಣ ಪುಸ್ತಕವಾಗಿ ಪ್ರಕಟಿಸುವ ಎಂದು ನನಗೆ ಧೈರ್ಯ ತುಂಬಿದರು, ಅದರಂತೆ ನಾನು ಈ ದಿನ ಕೃತಿ ಕರ್ಥನಾಗಿ ಇದನ್ನು ಬಿಡುಗಡೆಗೊಳಿಸುತ್ತಿದ್ದೇನೆ, ಇದಕ್ಕೇಲ್ಲಾ ಕಾರಣ ಸಂಗಂ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಐದು ಪುಸ್ತಕಗಳಿಗೆ ಸಂಗಂ ಕಥಾ ಪುರಸ್ಕಾರವನ್ನು ನೀಡಲಾಯಿತು, ನಂತರ ಸಮಕಾಲಿನ ಸಣ್ಣ ಕಥೆಗಳ ಕುರಿತು ಸಂವಾದವನ್ನು ಬಳ್ಳಾರಿಯ ಮೂಲದವರಾದ ಕನ್ನಡದ ಖ್ಯಾತ ಕಾದಂಬರಿಕಾರರು ಹಾಗೂ ಹಿರಿಯ ಲೇಖಕರಾದ ಕೇಶವ ಮಳಗಿ ನಡೆಸಿಕೊಟ್ಟರು.

ಸಂವಾದದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳ ಕತೆಗಾರರಾದ ದಯಾನಂದ, ಸ್ವಾಮಿಪೊನ್ನಾಚಿ, ಸಂಪತ್ ಸಿರಿಮನೆ, ಅನುಪಮಾ ಪ್ರಸಾದ್, ಅನಿಲ್ ಗುನ್ನಾಪುರ ಭಾಗವಹಿಸಿದ್ದರು, ಲೇಖಕ ಟಿ. ಎಸ್ . ಗೊರವರ ಉಪಸ್ಥಿತರಿದ್ದರು.

ಮದ್ಯಾಹ್ನ ನಂತರ ಆಯ್ದೆ ಕೃತಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಆಯ್ಕೆ ಸಮಿತಿಗೆ ಒಟ್ಟು 88 ಕೃತಿಗಳು ಬಂದಿದ್ದವು ಅದರಲ್ಲಿ ಮೊದಲು 25 ಕೃತಿಗಳನ್ನು ಮತ್ತು ನಂತರ ಹತ್ತು ಕೃತಿಗಳನ್ನು ತದನಂತರ ಐದು ಕೃತಿಗಳನ್ನು ಆಯ್ಕೆ ಸಮಿತಿ ಆರಿಸಿದ ಕೃತಿಗಳಿಗೆ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.

ಎಸ್.ಆರ್.ಐ.ಸಿ ಯ ಮಾಜಿ ಅಧ್ಯಕ್ಷರಾದ ಎಸ್. ಪನ್ನರಾಜ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು, ಪ್ರಶಸ್ತಿಯ ವಿವರಗಳನ್ನು ಸಾಹಿತಿ ಕೇಶವ ಮಳಗಿ ಘೋಷಿಸಿದರು, ನ್ಯಾಷನಲ್ ಬುಕ್ ಆಫ್ ಟ್ರಸ್ಟ್ ನ ಪ್ರಾಂತೀಯ ಅಧಿಕಾರಿಗಳಾದ ಡಾ.ಪತ್ತಿಪಾಕ ಮೋಹನ್ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಸಂಗಮ ಸಾಹಿತ್ಯ ಪುರಸ್ಕಾರ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ್ ಪಟೇಲ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ನಿಷ್ಠಿ ರುದ್ರಪ್ಪ, ತಿಪ್ರೆರುದ್ರ ಸಂಡೂರು, ಚಾಂದ್ ಭಾಷಾ, ಎಂ ಪಂಪಾಪತಿ ಸಿರುಗುಪ್ಪ, ಕತೆಗಾರ ವೆಂಕಟೇಶ್ ಉಪ್ಪಾರ್, ವಿ.ಬಿ ಮಲ್ಲಪ್ಪ, ಬಂಡಾಯ ಸಾಹಿತಿ ಅಬ್ದುಲ್ ಹೈ ಸೇರಿದಂತೆ ಮುಂತಾದವರು ಭಾಗವಹಿದ್ದರು.

ಈ ಕಾರ್ಯಕ್ರಮದಲ್ಲಿ ಸಂಗಂ ಅರವಿಂದ್ ಪಟೆಲ್, ಅರಿವು ಸಂಘಟನೆಯ ಪನ್ನರಾಜ್, ಕಾಲೇಜಿನ ಪ್ರಾಂಶುಪಾಲ ಸತೀಶ್ ಹಿರೇಮಠ್, ಸೇರಿದಂತೆ ಹಲವರಿದ್ದರು.

ಕಾರ್ಯಕ್ರಮವನ್ನು ದಸ್ತಗಿರ್ ಸಾಬ್ ದಿನ್ನಿ ನಿರೂಪಿಸಿದರು ಹಂದಿಹಾಳ್ ಶಿವಲಿಂಗಪ್ಪ ಪ್ರಸ್ತಾವಿಕ ಮಾತುಗಳನ್ನಾಡಿದರು. ಲೇಖಕ ದಿವಾಕರ್ ನಾರಾಯಣ್ ಕೃತಿ ಪರಿಚಯ ಮಾಡಿದರು.

Leave a Reply

Your email address will not be published. Required fields are marked *

error: Content is protected !!