ಬೆಲೆ ಕಟ್ಟಲಾಗದ ಆಸ್ತಿ ಎಂದರೆ ಅಮ್ಮ -ಜರೀನಾ ಬೇಗಂ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 13- ಹುಟ್ಟಿದೆ ಅಮ್ಮನ ಗರ್ಭದಿಂದ ಬೆಳೆಯುತ್ತಾ ಬಂದೆ ಅಮ್ಮನ ಮಡಿಲಿನಿಂದ ತುತ್ತಿಟ್ಟು ಉಣಿಸುತ್ತ ಬೆಳೆಸಿದಳು ಪ್ರೀತಿಯಿಂದ ನಾ ನಕ್ಕಾಗ ನಕ್ಕಳು ನಾ ಅತ್ತಾಗ ಅತ್ತಳು ಪ್ರತಿಕ್ಷಣಾನು ನನಗಾಗಿ ಜೀವಿಸುತ್ತಾ ಬಂದಳು ನನ್ನ ಅಮ್ಮ ತೀರಿಸಲಾಗದು ಅವಳ ಋಣವನ್ನು ಏಳೇಳು ಜನ್ಮಕ್ಕೂ ಇವಳ ಮಡಿಲೇ ನನಗೆ ಸಿಗಲವ್ವ ಅಮ್ಮ ಎಂದು ಜರೀನಾ ಬೇಗಂ ಅಬ್ದುಲ್ ನಬಿ ಅವರು ಅಭಿಪ್ರಾಯ ಪಟ್ಟರು.
ಸಿರುಗುಪ್ಪ ನಗರದ ಸೌದಾಗರ್ ಮೊಹಲ್ಲಾ ಇಬ್ರಾಹಿಂ ಮಂಜೀಲ್ ನಲ್ಲಿ ಅಂತರರಾಷ್ಟ್ರೀಯ ಅಮ್ಮಂದಿರ ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ ಅಮ್ಮ ಎಂಬುದು ಕೇವಲ ಎರಡಕ್ಷರದ ಪದವಾದರೂ ಅದು ಸಾಗರದಷ್ಟು ಭಾವನೆಗಳನ್ನು ಮೆಲುಕು ಹಾಕುವ ಶಬ್ದ ಅಮ್ಮನ ಪ್ರೀತಿ ಆಕಾಶದಲ್ಲಿ ಇರುವ ನಕ್ಷತ್ರಕ್ಕೆ ಸಮಾನ ಎಣಿಸಲು ಎಂದಿಗೂ ಸಾಧ್ಯವಿಲ್ಲ ಅಮ್ಮನ ಋಣವನ್ನು ಸಾವಿರ ಜನ್ಮದಲ್ಲಿಯೂ ತೀರಿಸಲು ಸಾಧ್ಯವಿಲ್ಲ ಆಕೆ 9 ತಿಂಗಳು ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುತ್ತಾಳೆ ತನ್ನ ಎಲ್ಲಾ ನೋವುಗಳನ್ನು ತನ್ನ ಮಗು ಎಂಬುವುದಕ್ಕಾಗಿ ಸಹಿಸಿಕೊಂಡು ಮರೆಯುತ್ತಾಳೆ ತನ್ನ ಜೀವನವನ್ನು ಪಳಕ್ಕಿಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುತ್ತಾಳೆ ಬಾಲ್ಯದಲ್ಲಿ ನಾವು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯುವಾಗ ಆಕೆಯು ಖುಷಿಪಡುತ್ತಾಳೆ ಸದಾ ತನ್ನ ಮಕ್ಕಳ ಒಳಿತಿಗಾಗಿ ಚಿಂತಿಸುತ್ತಾಳೆ.
ಅಮ್ಮನ ಪ್ರೀತಿ ಮಮಕಾರವನ್ನು ಯಾರಿಂದಲೂ ಪಡೆಯಲು ಸಾಧ್ಯವಿಲ್ಲ ತನಗಾಗಿ ಏನನ್ನು ಬಯಸದೆ ತನ್ನ ಮಕ್ಕಳಿಗಾಗಿ ದುಡಿಯುವವಳು ರುಚಿಕರವಾದ ಅಡುಗೆ ಮಾಡಿ ಕೊನೆಯ ಉಳಿದದ್ದನ್ನು ತಿನ್ನುವವಳು ನಿಸ್ವಾರ್ಥ ಪ್ರೀತಿ ತ್ಯಾಗದ ಸ್ವರೂಪ ಅಮ್ಮ ಅಮ್ಮ ಎಂದ ತಕ್ಷಣ ಮೈ ರೋಮಾಂಚನಗೊಳ್ಳುತ್ತದೆ ಕಾಣದ ಅಲ್ಲಾಹನಿಗಾಗಿ ಇನ್ನೆಲ್ಲೋ ಹುಡುಕುವ ಬದಲು ಅಮ್ಮನಲ್ಲೆ ದೇವರನ್ನು ಕಾಣಬಹುದು ಬೆಲೆ ಕಟ್ಟಲಾಗದ ಮಾಣಿಕ್ಯ ಅಮ್ಮ ಎಂದು ವಿವರಿಸಿ ಅವರು ಮಾತನಾಡಿ ಒಂದಂತೂ ಸತ್ಯ ನಾವು ಪ್ರೀತಿಸಿ ನಮ್ಮನ್ನು ಪ್ರೀತಿಸುವ ಜೀವಗಳು ಸಾವಿರಾರು ಸಿಗಬಹುದು ನಮಗೆ ಆದರೆ ನಾವು ಪ್ರೀತಿಸದಿದ್ದರೂ ನಮ್ಮನ್ನು ಪ್ರೀತಿಸುವ ಜೀವ ಅಂದರೆ ಅದು ಅಮ್ಮ ಮಾತ್ರ ಅಮ್ಮ ತ್ಯಾಗ ಮಮತೆ ಕರುಣೆ ತಾಳ್ಮೆಯ ಪ್ರತಿರೂಪವೇ ಅಮ್ಮ ಎಂದು ಹೇಳಿದರು.
