ಪ್ರಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ತಪಾಸಣೆ ಮಾರಕ ರೋಗ ತಡೆಗೆ ಲಸಿಕೆ ಹಾಕಿಸಿ : ಡಿಹೆಚ್ಓ ವೈ ರಮೇಶ್ ಬಾಬು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 13- ತಾಲೂಕು ತಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ವೈ ರಮೇಶ್ ಬಾಬು ಅವರು ಭೇಟಿ ನೀಡಿ ಮಗುವಿನ ತಪಾಸಣೆ ನಡೆಸಿದರು.
ಹೆರಿಗೆ ನಂತರ ಮಗುವಿನ ಆರೋಗ್ಯಕ್ಕಾಗಿ 6 ತಿಂಗಳವರೆಗೆ ತಾಯಿ ಹಾಲು ಹೊರತುಪಡಿಸಿ ಬೇರೆ ಏನನ್ನು ನೀಡಬಾರದು ಎಂದು ಅವರು ಹೇಳಿದರು.
ಬಾಣಂತಿಯರ ಆರೋಗ್ಯ ವಿಚಾರಿಸಿದ ಅವರು ಮಾತನಾಡಿ ನವಜಾತ ಶಿಶುವಿಗೆ ದಿನಕ್ಕೆ 10, 12 ಬಾರಿ ಅಥವಾ ಅತ್ತಾಗಲೆಲ್ಲಾ ಹಾಲುಣಿಸಬೇಕು ಬೆಚ್ಚಗಿಡುವುಕ್ಕೆ ಆದ್ಯತೆ ನೀಡಿ ಆದರೆ ಪ್ರಸ್ತುತ ಹೆಚ್ಚು ಬಿಸಿಲು ಇರುವುದರಿಂದ ಸ್ವಚ್ಛ ತೆಳುವಾದ ಹತ್ತಿ ಬಟ್ಟೆಯನ್ನು ಮಾತ್ರ ಹೊದಿಸಬೇಕು ಹೊಕ್ಕಳು ಬಳ್ಳಿಗೆ ಏನನ್ನು ಹಚ್ಚಬಾರದು ತಾಯಿ ಹಾಲಿನ ಉತ್ಪತ್ತಿ ಹೆಚ್ಚಾಗಲು ಪೌಷ್ಟಿಕ ಆಹಾರದ ಜೊತೆಗೆ ಸಾಕಷ್ಟು ನೀರು ಕುಡಿಯಬೇಕು ಅಲ್ಲದೆ ಪಾಲಕರು ಮಗುವಿಗೆ ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳನ್ನು ತಡೆಗಟ್ಟಲು ಮುಖ್ಯವಾಗಿ 12 ಮಾರಕ ರೋಗಗಳು ಮತ್ತು ಅವುಗಳ ವಿರುದ್ಧ ನೀಡುವ ಲಸಿಕೆಗಳನ್ನು ವಯಸ್ಸಿಗೆ ಅನುಸಾರ ಹಾಕಿಸಬೇಕು ಎಂದರು.
ಶಂಕಿತ ದಡಾರ ಪ್ರಕರಣಗಳು ಇತ್ತೀಚಿಗೆ ಕಂಡು ಬರುತ್ತಿದ್ದು ಮಗುವಿಗೆ 9 ತಿಂಗಳು ತುಂಬಿದ ನಂತರ ಹಾಗೂ 1.5 ವರ್ಷ ವಯಸ್ಸಿನ ಅವಧಿಯಲ್ಲಿ ದಡಾರ -ರುಬೆಲ್ಲಾ ಲಸಿಕೆ ತಪ್ಪದೇ ಹಾಕಿಸಬೇಕು ಎಂದರು.
ಶುಶ್ರೂಷಣಾಧಿಕಾರಿ ಕೆ ಬಳ್ಳಾರೆಪ್ಪ, ಆಶಾಲತಾ, ಮಲ್ಲೇಶ್ವರಿ, ಸುಜಾತ, ಶಾಂತವ್ವ ಇತರರು ಇದ್ದರು.
