WhatsApp Image 2024-05-21 at 4.00.30 PM

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ 

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 21- ನಗರದ ಬಳ್ಳಾರಿ ರಸ್ತೆ ಜಿಎಸ್ ಲಾಡ್ಜ್ ಸಭಾಭವನದಲ್ಲಿ ಹಮ್ಮಿಕೊಂಡ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಸಕ ಬಿ ಎಂ ನಾಗರಾಜ ಅವರು ಮಾತನಾಡಿ ದೇಶದಲ್ಲಿ ಐಟಿ ಉದ್ಯಮ ದೂರ ಸಂಪರ್ಕ ಕ್ರಾಂತಿ ಮಾಡಿದ ಖ್ಯಾತಿ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಅವರ ಆಡಳಿತ ಶೈಲಿ ಬಡಜನರ ಕಾಳಜಿ ನಮಗೆಲ್ಲ ಪ್ರೇರಣೆ ರಾಜೀವ್ ಗಾಂಧಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ನವ ಭಾರತದ ನಿರ್ಮಾತೃಗಳಾಗಿ ಜಗತ್ತಿನಲ್ಲಿ ಆಕರ್ಷಕ ವ್ಯಕ್ತಿತ್ವ ಹೊಂದಿದ ಭಾರತ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆ 18 ವಯಸ್ಸಿನವರಿಗೆ ಮತದಾನದ ಹಕ್ಕು ನವೋದಯ ಶಾಲೆಗಳ ನಿರ್ಮಾಣ ಕಂಪ್ಯೂಟರ್ ಟೆಲಿ ಕಮ್ಯುನಿಕೇಷನ್ ನಲ್ಲಿ ಅವರ ಕ್ರಾಂತಿ ದೇಶದ ಯುವ ಜನತೆ ನೆನಪಿಸಿಕೊಳ್ಳುವಂತಹ ಸೇವೆ ಅವರದಾಗಿತ್ತು ಎಂದು ಶಾಸಕ ನಾಗರಾಜ ಅವರು ವಿವರಿಸಿ ಮಾತನಾಡಿದರು.

ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ಕಾಂಗ್ರೆಸ್ ಮುಖಂಡರಾದ ಬಿ ಎಂ ಸತೀಶ್ ಮಾಜಿ ಶಾಸಕ ಎಂ ದೊಡ್ಡನಗೌಡ ಅವರ ಸುಪುತ್ರ ಎಂ ಡಿ ಮರಿರಾಜ ಗೌಡ ಕೊಡ್ಲೆ ಮಲ್ಲಿಕಾರ್ಜುನ ಹಾಜಿ ಅಬ್ದುಲ್ ನಬಿ ನಗರಸಭೆ ಸದಸ್ಯರಾದ ಹೆಚ್ ಗಣೇಶ ಮಾಜಿ ಸದಸ್ಯ ಮಿಂತಿ ಟಿ ಮೊಹಮ್ಮದ್ ಶಫಿ ವಕೀಲರಾದ ಬಿ ವೆಂಕಟೇಶ್ ವಕೀಲರಾದ ಯಶವಂತ ವೆಂಕಟೇಶ್ ನಾಯಕ ಗೊರವರ ಶ್ರೀನಿವಾಸ ಪವನ್ ದೇಸಾಯಿ ಮತ್ತು ಮಹಿಳೆಯರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು

Leave a Reply

Your email address will not be published. Required fields are marked *

error: Content is protected !!