WhatsApp Image 2024-05-24 at 2.30.50 PM

ಸಿರುಗುಪ್ಪ : ಆರಾಧ್ಯ ದೈವ ವರವಿನ ಮಲ್ಲೇಶ್ವರ ಸ್ವಾಮಿ ಅದ್ದೂರಿ ರಥೋತ್ಸವ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 24- ತಾಲೂಕು ತೆಕ್ಕಲಕೋಟೆ ಉಪ್ಪಾರ ಹೊಸಳ್ಳಿ ಹತ್ತಿರದ ಆರಾಧ್ಯ ದೈವ ವರವಿನ ಮಲ್ಲೇಶ್ವರ ಸ್ವಾಮಿ ಜಾತ್ರಾ ರಥೋತ್ಸವ ವೈಭವ ಅದ್ದೂರಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ರಥದ ಮುಂದೆ ಹೋಮ ಹವನ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು ಅರ್ಚಕರಿಂದ ಬಲಿಹರಣ ಕಾರ್ಯಕ್ರಮದ ನಂತರ ಸಕಲ ಮಂಗಳ ವಾದ್ಯಗಳೊಂದಿಗೆ ಹೂವಿನಿಂದ ಅಲಂಕೃತವಾದ ತೇರನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆದರು.

ರಥಕ್ಕೆ ಭಕ್ತರು ಹೂ ಹಣ್ಣು ಎಸೆದು ಕೈ ಮುಗಿದರು ಜಾತ್ರೆಯಲ್ಲಿ ನವ ವಿವಾಹಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಪ್ರದಾಯದಂತೆ ಜಾತ್ರಾ ಉತ್ಸವದಲ್ಲಿ ಕಳಸವನ್ನು ಮತ್ತು ರಥೋತ್ಸವವನ್ನು ಕಣ್ತುಂಬಿ ಕೊಂಡರು ಸಿರುಗುಪ್ಪ ಬಳ್ಳಾರಿ ತೆಕಲಕೋಟೆ ಉಪ್ಪಾರ ಹೊಸಳ್ಳಿ ಬಲಕುಂದಿ ಹಳೆಕೋಟೆ ರಾರಾವಿ ಗಂಗಾವತಿ ಆಂಧ್ರಪ್ರದೇಶದ ತೆಲಂಗಾಣದ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ದರ್ಶನ ಪಡೆದರು.

Leave a Reply

Your email address will not be published. Required fields are marked *

error: Content is protected !!