ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ಸಂಸ್ಥೆ ಮುಖಾಂತರ ಬಳಸಿಕೊಳ್ಳಿ : ಸತೀಶ್ ಶೆಟ್ಟಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 27- ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನೂತನ CSC ಸೇವಾಕೆಂದ್ರವನ್ನು ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ರವರು ಧರ್ಮಸ್ಥಳದ ಯೋಜನೆ ಅತಿ ಹೆಚ್ಚು ಜನರನ್ನು ತಲುಪಿರುವ ಕಾರಣ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಕೆಲವೊಂದು ಸೇವೆಗಳನ್ನು ಸಂಸ್ಥೆಗೆ ನೀಡಲಾಗಿದೆ, ಗ್ರಾಮದ ಜನರು ಈ ಸೇವೆಗಳನ್ನು ಪಡೆದುಕೊಳ್ಳಬೇಕು ಮತ್ತು ಪಡೆದ ಸೇವೆಗೆ ರಸೀದಿಯನ್ನು ಪಡೆದುಕೊಳ್ಳಬೇಕು, ಪೂಜ್ಯ ಖಾವಂದರ ಮತ್ತು ಸಂಸ್ಥೆಯ ಉದ್ದೇಶ ಜನಸಾಮಾನ್ಯರ ಬದುಕಿಗೆ ಆಸರೆಯಾಗುವುದಾಗಿದೆ ಎಂದು ತಿಳಿಸಿದರು, ನೂತನ ಕೇಂದ್ರಕ್ಕೆ ಕಲ್ಲಹಳ್ಳಿ ಗ್ರಾಮದ VLE ಯವರನ್ನೆ ಆಯ್ಕೆ ಮಾಡಿದ್ದು ಅವರಿಂದ ಸೇವೆಗಳನ್ನು ಪಡೆದು ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿ ತಿಳಿಸಿದರು.
ಮಾನ್ಯ ಯೋಜನಾಧಿಕಾರಿಗಳಾದ ಮಾರುತಿ , ಗ್ರಾಮದ ಮುಕಂಡರಾದ ರಾಮು ನಾಯಕ್, ಸುಬ್ರಾಯಮೂರ್ತಿ, JVK ರೇಖಾ ಮೇಡಂ, TNO ಮಂಜುನಾಥ್, ಸೇವಪ್ರತಿನಿಧಿಗಳಾದ ರೇಣುಕಾ, ಭಾಗ್ಯ, VLE ಶ್ವೇತಾ ಉಪಸ್ಥಿತರಿದ್ದರು.
