ಪರಿಸರ ಸಂರಕ್ಷಣೆಗೆ ಗಿಡ ನೆಟ್ಟು ಆರೋಗ್ಯಕರ ಜೀವನ ಸಾಗಿಸಿ : ಜಗದೀಶ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 6- ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಟ್ಟು ಆರೋಗ್ಯಕರ ಜೀವನ ಸಾಗಿಸಲು ಮುಂದಾಗಬೇಕು ಎಂದು ಗ್ರಂಥ ಪಾಲಕರಾದ ಜಗದೀಶ್ ಅವರು ಅಭಿಪ್ರಾಯಪಟ್ಟರು.
ಸಿರುಗುಪ್ಪ ನಗರದಲ್ಲಿ ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ವಿಶ್ವ ಪರಿಸರ ದಿನ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಪರಿಸರ ಸಮತೋಲ ಕಾಪಾಡಲು ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಅವುಗಳನ್ನು ಪಾಲನೆ ಪೋಷಣೆ ಮಾಡಿ ದೊಡ್ಡ ದೊಡ್ಡ ಮರಗಳಾಗಿ ಬೆಳೆಸುವ ಮೂಲಕ ಗಿಡಗಳನ್ನು ಸಂರಕ್ಷಣೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆ ನೀಡಿದರು.
ವಕೀಲ ರಾದ ವೆಂಕಟೇಶ್ ನಾಯಕ ಹೆಡಗಿನ ಹಾಳ ಅವರು ಮಾತನಾಡಿ ಪ್ರತಿಯೊಬ್ಬರು ಮರ ಗಿಡವನ್ನು ಬೆಳೆಸುವ ಪ್ರಾಮಾಣಿಕ ಪ್ರಜ್ಞೆ ಮೆರೆಯಬೇಕು ಹಾಗೂ ಈ ಆಧುನಿಕತೆ ಬೆಳೆದಂತೆ ಪರಿಸರ ವಿನಾಶದ ಅಂಚೆಗೆ ತಲುಪಿದೆ ಇದರಿಂದ ದಿನ ದಿನಕ್ಕೆ ಮಳೆಯ ಪ್ರಮಾಣ ಕ್ಷಿಣಿಸುತ್ತಿದೆ ಇಂದಿನ ನಾವು ಹಾಗೂ ಈಗಲಾದರೂ ಎಚ್ಚೆತ್ತುಕೊಂಡು ಮರ ಗಿಡಗಳನ್ನು ಕಡಿದು ನಾಶ ಮಾಡುವುದರಿಂದ ಪ್ರಕೃತಿಯಲ್ಲಿ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದಕ್ಕೆ ಮುಂದಾಗಬೇಕು ಎಂದರು.
ರಾಷ್ಟ್ರೀಯ ಸಾಕ್ಷರತಾ ಹಾಗೂ ಜಿಲ್ಲಾ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರಾದ ಎ ಅಬ್ದುಲ್ ನಬಿ ಅವರು ಮಾತನಾಡಿ ಪರಿಸರ ಹಸಿರಾಗಿದ್ದರೆ ಮನುಷ್ಯ ಕುಲದ ಉಸಿರು ಹಸನಾಗುತ್ತದೆ ಜೀವ ಜಗತ್ತು ಉತ್ತಮ ಆಯುಷ್ಯ ಕಾಪಾಡಲು ನಮ್ಮ ಸುತ್ತಮುತ್ತಲಿನ ಪರಿಸರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ನಾವೆಲ್ಲರೂ ನಮ್ಮ ಉಸಿರನ್ನು ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಹಾಗೆ ಗಿಡಮರಗಳನ್ನು ಸಂರಕ್ಷಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಓದುವರಾದ ವೆಂಕಟಚಲ ಶೆಟ್ಟಿ ವೈ ಹನುಮಂತ ರೆಡ್ಡಿ ಓದುಗರು ಗ್ರಂಥಾಲಯದ ಸಿಬ್ಬಂದಿ ವರ್ಗದವರು ಇದ್ದರು.
