ಅನಾಮಧೇಯ ಮೃತದೇಹ ಪತ್ತೆ : ಪ್ರಕರಣ ದಾಖಲು
ಕರುನಾಡ ಬೆಳಗು ಸುದ್ದಿ
ವಿಜಯನಗರ, 6- ಕಂಪ್ಲಿ ಹೊಸಪೇಟೆ ರಸ್ತೆಯಲ್ಲಿನ ಪಂಪಾಪವಿ ವಿದ್ಯಾಫೀಠದ ಪಕ್ಕದಲ್ಲಿನ ಹೊಲದಲ್ಲಿ ಹಾಕಿರುವ ಜಿಯೋ ಟವರ್ ಹತ್ತಿರದ ಕಚ್ಚಾ ರಸ್ತೆ ಪಕ್ಕದಲ್ಲಿ ಸುಮಾರು 40-45 ವರ್ಷದ ಅನಾಮಧೇಯ ಗಂಡಸಿನ ಶವವು ಪತ್ತೆಯಾದ ಬಗ್ಗೆ ಯುಡಿಆರ್ ನಂ 04/2024 ಕಲಂ 174(3) ಸಿ.ಆರ್.ಪಿ.ಸಿ ರೀತ್ಯ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯು 168 ಅಡಿ ಎತ್ತರ ಇದ್ದಾನೆ. ಕಪ್ಪು ಮೈಬಣ್ಣ ಉದ್ದು ಮುಖ ಇರುತ್ತದೆ. ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಬಾದಾಮಿ ಬಣ್ಣ ತುಂಬ ತೋಳಿನ ಅಂಗಿ, ಬಿಳಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಕಪ್ಪು ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಮೃತನು ಜೂನ್ 2ರ ಸಂಜೆ 6 ಗಂಟೆಯ ನಂತರದಿAದ ಜೂನ್ 3ರ ಬೆಳಗ್ಗೆ 6 ಗಂಟೆಯ ಮಧ್ಯೆದ ಅವಧಿಯಲ್ಲಿ ಮಧ್ಯಪಾನ ಮಾಡಿ ಅಥವಾ ಯಾವುದೋ ಅನಾರೋಗ್ಯದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಎಚ್ಚರ ತಪ್ಪಿ ಬಿದ್ದು ಮೃತಪಟ್ಟಂತೆ ಕಂಡು ಬಂದಿದ್ದು ಮೃತ ವ್ಯಕ್ತಿಯು ಅನಾಮಧೇಯ ವ್ಯಕ್ತಿಯಾಗಿದ್ದರಿಂದ ಮೃತನ ಸಾವಿನ ಬಗ್ಗೆ ಅನುಮಾನವಿದ್ದು ಮುಂದಿನ ಕ್ರಮ ಜರುಗಿಸುವಂತೆ ದೂರು ಇರುವುದರಿಂದ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ಕಂಡುಬAದಲ್ಲಿ ದೂರವಾಣಿ ಸಂಖ್ಯೆ: 08394-241240 ಅಥವಾ 08394-224204ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕಮಲಾಪುರ ಪೋಲಿಸ್ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
