ನಗರಸಭೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ (2)

ನಗರಸಭೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,7- ಭಗತ್ ಸಿಂಗ್ ಸ್ಕೌಟ್ ಘಟಕ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ನಗರಸಭೆ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗವಿಶ್ರೀ ನಗರದ ಒಂದನೇ ಕ್ರಾಸ್‌ನಲ್ಲಿರುವ ಗವಿಶ್ರೀ ಉದ್ಯಾನವನದಲ್ಲಿ ನೂರಾರು ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ವಾರ್ಡಿನ ಸದಸ್ಯರಾದ ಶಿವಗಂಗಾ ಭೂಮಕ್ಕನವರ್ ಕಾರ್ಯಕ್ರಮ ಉದ್ಘಾಟಿಸಿದರು. ನಗರ ಸಭೆಯ ಎಇಇ ಮಧುರ, ಹಿರಿಯ ಕವಿಗಳಾದ ಮಹಾಂತೇಶ್ ಮಲ್ಲನಗೌಡ, ಶಿವಣ್ಣ ಗುಳಗಣ್ಣವರ್, ಸಂಗಪ್ಪ ಗಾಳಿ, ಶಿವ ರೆಡ್ಡಿ ಭೂಮಕ್ಕನವರ್, ಶಂಕರಗೌಡ ಹಿರೇಗೌಡ, ನಗರಸಭೆಯ ಸದಸ್ಯರಾದ ಗುರುರಾಜ ಹಲಗೇರಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಾದ ಜಗದೀಶ್, ಸಾವಿತ್ರಿ ಮಂಜುನಾಥ್ ಗೌಡ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೆ ಭಗತ್ ಸಿಂಗ್ ಸ್ಕೌಟ್ ಘಟಕದ ಲೀಡರ್ ಟ್ರೆöÊನರ್ ಜಯರಾಜ್ ಬೂಸದ್ ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!