1

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ : ಡಿಎಚ್‌ಒ ಡಾ.ಲಿಂಗರಾಜು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 7- ಪರಿಸರ ಸಂರಕ್ಷಣೆಯಲ್ಲಿ ಜನಸಮುದಾಯದ ಪಾತ್ರವನ್ನು ತಿಳಿಸಿ, ಜಾಗೃತಿಗೊಳಿಸಲು ಜಿಲ್ಲೆಯಾದ್ಯಂತ ವ್ಯಾಪಕ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ ಅವರು ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 05 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜನಸಮುದಾಯವನ್ನು ಜಾಗೃತಿಗೊಳಿಸಲು ಅರೋಗ್ಯ ಸಂಸ್ಥೆಗಳ ಆವರಣಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ನಿರ್ದೇಶನದನ್ವಯ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಆರೋಗ್ಯ ಸಂಸ್ಥೆಗಳ ಆವರಣಗಳಲ್ಲಿ ಉತ್ತಮ ಗಾಳಿಯನ್ನು ನೀಡುವಂತಹ ಹಾಗೂ ಔಷಧಿ ಗುಣವಿರುವ ಗಿಡಮರಗಳನ್ನು ನೆಟ್ಟು, ಬೆಳೆಸಿ ಹಾಗೂ ನಿರ್ವಹಿಸುವ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಭೂಮಿಯ ಹಸಿರು ಹೊದಿಕೆ ಏರಿಕೆಯಾಗುವುದಲ್ಲದೇ ಶುದ್ಧ ಗಾಳಿ, ತಂಪಾದ ವಾತಾವರಣವು ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಾಗುವುದು ಎಂದು ಅವರು ತಿಳಿಸಿದರು.

ರಾಷ್ಟಿçÃಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ||. ವೆಂಕಟೇಶ್ ಕೆ. ಅವರು ಮಾತನಾಡಿ, ಹವಾಮಾನ ಬದಲಾವಣೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಪರಿಸರ ಸಂರಕ್ಷಣೆಯೊAದೇ ಪರಿಹಾರ ಮಾರ್ಗ. ಪ್ರತಿವ಼ರ್ಷ ಜೂನ್-05 ರಂದು ವಿಶ್ವ ಪರಿಸರ ದಿನವನ್ನು ಆಚರಿಸಿ ಧ್ಯೇಯವಾಕ್ಯದ ಅನುಸಾರ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲಾಗುವುದು. ಈ ವರ್ಷದ ದ್ಯೇಯವಾಕ್ಯ: ಭೂಮಿ ಮರುಸ್ಫಾಪನೆ, ಮರು ಭೂಮೀಕರಣ ಹಾಗೂ ಬರ ಸ್ಥಿತಿಸ್ಥಾಪಕತ್ವ ಎಂಬುದಾಗಿದ್ದು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಧ್ಯೇಯವಾಕ್ಯದ ಅನುಸಾರ ವಿವಿಧ ಚಟುವಟಿಕೆಗಳ ಮೂಲಕ ಭೂಮಿಯ ಸಹಜಸ್ಥಿತಿಯನ್ನು ಮರುಸ್ಥಾಪಿಸಿ, ಮರು ಭೂಮೀಕರಣ ಮತ್ತು ಬರಸ್ಥಿತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದು ಸದ್ಯ ಅತಿ ಅವಶ್ಯಕ ಹಾಗೂ ಸಮಯೋಚಿತವಾಗಿದೆ ಎಂದರು.

ಜಿಲ್ಲಾ ವಿ.ಬಿ.ಡಿ ಸಲಹೆಗಾರರಾದ ರಮೇಶ್. ಕೆ ಅವರು ಮಾತನಾಡಿ, ಪ್ರತಿವರ್ಷ ಜೂನ್-05 ಅನ್ನು ಜಾಗತಿಕವಾಗಿ ಆಚರಿಸಲಾಗುತ್ತಿದ್ದು, ಪರಿಸರ ಸಂರಕ್ಷಣೆ ವಿಷಯಕ್ಕೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅದರಲ್ಲೂ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯ ನಾಶ ಮಣ್ಣಿನ ಜೀವವೈವಿಧ್ಯದ ನಾಶದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಒಂದು ನಿರ್ದಿಷ್ಟ ಧ್ಯೇಯವಾಕ್ಯದೊಂದಿಗೆ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ವರದಿಯ ಅನುಸಾರ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿಯ ಶೇ.40 ರಷ್ಟು ಕ್ಷೀಣಿಸುತ್ತಿದೆ. ಇದು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಬರಗಾಲಗಳ ಸಂಖ್ಯೆ ಮತ್ತು ಮರುಭೂಮಿಗಳ ಸಂಖ್ಯೆ ಮತ್ತು ಅವಧಿಯು 2000 ರಿಂದ 29 ಪ್ರತಿಶತದಷ್ಟು ಹೆಚ್ಚಾಗಿದೆ. ಯಾವುದೇ ತುರ್ತು ಪರಿಸರ ಸಂರಕ್ಷಣೆ ಕಾರ್ಯ ಸಮರೋಪಾದಿಯಲ್ಲಿ ನಡೆಯದಿದ್ದರೆ 2050 ರ ವೇಳೆಗೆ ವಿಶ್ವದ ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರಬಹುದು ಎಂದರು.

ನಮ್ಮ ಭೂಮಿ -ನಮ್ಮ ಭವಿಷ್ಯ. ಭೂಮಿ ಮಾನವರ ಸಮೇತ ಸಕಲ ಜೀವಿಗಳಿಗೆ ಇರುವ ಏಕೈಕ ಮನೆ. ಹುಟ್ಟಿನಿಂದ ಸಾಯುವವರೆಗೂ ಬದುಕಲು ಅವಶ್ಯವಿರುವ ಆಮ್ಲಜನಕ, ನೀರು ಹಾಗೂ ಇನ್ನಿತರೆ ಸಂಪನ್ಮೂಲಗಳನ್ನು/ಸೌಕರ್ಯಗಳನ್ನು ಒದಗಿಸಿ ಪೋಷಿಸುತ್ತದೆ. ಆದರೆ ಮನುಷ್ಯ ಪ್ರಕೃತಿ/ಪರಿಸರಕ್ಕೆ ವಿರುದ್ದವಾಗಿ ವಿಪರೀತ ಕೈಗಾರೀಕರಣ, ಅರಣ್ಯನಾಶ, ಸಿಮೆಂಟಿನ ನಗರೀಕರಣ, ಪರಿಸರ ಮಾಲಿನ್ಯದಂತಹ ಚಟುವಟಿಕೆಗಳಲ್ಲಿ ತೊಡಗುವುದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ದುಷ್ಪರಿಣಾಮಗಳಿಗೆ ಕಾರಣವಾಗುತ್ತಾನೆ. ಮತ್ತು ಇದರ ಪರಿಣಾಮ ನೇರವಾಗಿ ಮಾನವಕುಲದ ಮೇಲಾಗಿ, ವಾತಾವರಣದ ತಾಪಮಾನ ಏರಿಕೆ, ಬರಗಾಲಗಳ ಸಂಖ್ಯೆ ಏರಿಕೆ, ಮರುಭೂಮಿಗಳ ನಿರ್ಮಾಣ, ಮಳೆಗಾಲದ ಅವಧಿ ಏರುಪೇರಾಗುವುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರೀಕರು ಈಗಿನಿಂದಲೇ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಭಾಗಿಯಾಗಬೇಕು. ನಮ್ಮ ಭೂಮಿ ನಮ್ಮ ಭವಿಷ್ಯ. ಈ ಭೂಮಿಯನ್ನು ನಮ್ಮ ಮುಂದಿನ ಪೀಳಿಗೆಗಾಗಿ ಉಳಿಸಲು ಕಂಕಣಬದ್ದರಾಗಿ ರಾಜ್ಯದ ಸುಮಾರು 7 ಕೋಟಿ ಜನಸಂಖ್ಯೆಯಲ್ಲಿ ಪ್ರತಿಯೊಬ್ಬರೂ ಒಂದೊAದು ಗಿಡ-ಮರಗಳನ್ನು ಬೆಳೆಸಿ, ಪೋಷಿಸಿದಲ್ಲಿ ಕರ್ನಾಟಕದಾದ್ಯಂತ ಸಮೃದ್ಧ ಮರಗಿಡಗಳು ಬೆಳೆದು, ವಾತಾವರಣದ ತಾಪಮಾನ ಕಡಿಮೆಯಾಗುತ್ತದೆ. ಶುದ್ದ ಗಾಳಿ ಹಾಗೂ ತಂಪಾದ ವಾತಾವರಣ ಲಭ್ಯವಾಗುವುದು. ಮುಂದುವರೆದು, ಗಿಡಮರಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುವುದರಿಂದ ಮಣ್ಣಿನ ಸವಕಳಿ ತಡೆಗಟ್ಟಬಹುದು ಹಾಗೂ ಅಂತರ್ಜಲದ ಮಟ್ಟವು ಏರಿಕೆಯಾಗಿ ಉತ್ತಮ ಪರಿಸರ ನಿರ್ಮಾಣಗೊಳ್ಳುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ರವೀಂದ್ರನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ನಂದಕುಮಾರ್, ಜಿಲ್ಲಾ ಕುಷ್ಟರೋಗ ನಿಯತ್ರಣಾಧಿಕಾರಿಗಳಾದ ಡಾ|| ಪ್ರಕಾಶ್. ಎಚ್.ಎಸ್, ಡಾ|| ಶಶಿಧರ ಹಾಗೂ ಕೊಪ್ಪಳ ತಾಲೂಕ ಆರೋಗ್ಯಾಧಿಕಾರಿಗಳಾದ ಡಾ|| ರಾಮಾಂಜನೇಯ ಸೇರಿದಂತೆ ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!