WhatsApp Image 2024-06-08 at 7.19.57 PM

ರಾಮೋಜಿ ರಾವ್ ರವರು ಚಲನಚಿತ್ರಗಳಲ್ಲಿ ಹೊಸತನ ಸೃಷ್ಟಿಸಿದ್ದರು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 8- ಇಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ವತಿಯಿಂದ ಈನಾಡು ಗ್ರೂಪ್ ಸಂಸ್ಥೆ ಛೇರ್ಮನ್ ಶ್ರೀ ರಾಮೋಜಿರಾವುರವರು ಸಂತಾಪ ಸಭೆಯನ್ನು ರಾಘವ ಕಲಾ ಮಂದಿರದಲ್ಲಿ ಸಂಜೆ 6 ಗಂಟಗೆ ಸಂತಾಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂತಾಪ ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್ ಪ್ರಕಾಶ್, ಮಾತನಾಡುತ್ತಾ ರಾಮೋಜಿ ರಾವ್ ಅವರು ಚಲನಚಿತ್ರ ಮತ್ತು ಮಾಧ್ಯಮ ಗಳ ಜೊತೆಗೆ ಹಲವಾರು ಕ್ಷೇತ್ರಗಳಲ್ಲಿ ಅತಿಹೆಚ್ಚಿನ ಸೇವೆ ಸಲ್ಲಿಸಿ ಹೊಸತನ ಸೃಷ್ಟಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್ ಪದಾಧಿಕಾರಿಗಳು, ಚೆಲ್ಲಾ ಅಮರೇಂದ್ರ ನಾಥ ಚೌದರಿ, ಎನ್ ಬಸವರಾಜ್ ಅವರ ಸಾಧನೆಗಳನ್ನು ಸ್ಮರಿಸಿದರು.

ಸಂತಾಪ ಸಭೆಯಲ್ಲಿ ಸಂಸ್ಥೆಯ ಗೌರವಧ್ಯಕ್ಷ ಕೆ ಚನ್ನಪ್ಪ, ಅಧ್ಯಕ್ಷರಾದ ಕೆ ಕೊಟೆಶ್ವರ ರಾವ್, ಕೆ ಚಂದ್ರಶೇಖರ್,ಕೆ ಕೃಷ್ಣ, ಭೀಮನೇನಿ ಭಾಸ್ಕರ್, ರಮಣಪ್ಪ ಭಜಂತ್ರಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!