WhatsApp Image 2024-06-11 at 1.31.05 PM

ಹೊತ್ತಿ ಉರಿದ ಬೆಂಕಿ ನಾಲ್ಕು ಹುಲ್ಲು ಬಣವೆಗಳು ಭಸ್ಮ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 11- ತಾಲೂಕು ಕೆ ಸೂಗೂರು ಗ್ರಾಮದ ಆರೋಗ್ಯ ಉಪ ಕೇಂದ್ರದ ಹಳೆ ಕಟ್ಟಡದ ಹಿಂಭಾಗದಲ್ಲಿ ದನ ಕರುಗಳಿಗಾಗಿ ಸಂಗ್ರಹಿಸಲಾಗಿದೆ ತಮ್ಮ ಸ್ವಂತದ ಜಾಗದಲ್ಲಿ ಭತ್ತದ ಹುಲ್ಲು ಮತ್ತು ಜೋಳದ ದಂಟಿನ ಬಣವೆಗಳಿಗೆ ಬೆಂಕಿಹೊತ್ತಿ ಉರಿಯಿತು ನಾಲ್ಕು ಬಣವೆಗಳು ಸಂಪೂರ್ಣವಾಗಿ ಭಸ್ಮಗೊಂಡು ಅಪಾರ ನಷ್ಟವಾಯಿತು.

ಕೆ ಸೂಗೂರು ಗ್ರಾಮದ ರೈತರದ ಸಿದ್ಧನಗೌಡ ಬಿ ಶಂಕರಗೌಡ ಜಗದೀಶ ಗೌಡ ತಮ್ಮನ ರೆಡ್ಡಿ ಗೌಡ ಅವರು ಸೇರಿ ಹಾಕಿದ ಎರಡು ಜೋಳದ ದಂಟು ಹಾಗೂ ಭತ್ತದ ಹುಲ್ಲಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ ಕೂಡಲೇ ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಿದ್ದಾರೆ ಗ್ರಾಮಸ್ಥರೆಲ್ಲ ಸೇರಿ ನಂದಿಸಲು ಮುಂದಾಗಿದ್ದಾರೆ.

ಅಗ್ನಿಶಾಮಕ ದಳದ ಠಾಣಾಧಿಕಾರಿ ಆರ್ ಎಲ್ ಪೂಜಾರಿ ಅಗ್ನಿಶಾಮಕ ಪ್ರಮುಖ್ ಯು ವೆಂಕಟೇಶ್ ಸಿಬ್ಬಂದಿಗಳಾದ ಸಚಿನ್ ಕುಮಾರ್ ರಾಜಭಕ್ಷಿ ಮಂಜುನಾಥ ಶರಣಬಸಪ್ಪ ಹಾಗೂ ಹಲವಾರು ಗ್ರಾಮಸ್ಥರು ಹರಸಾಹಾಸ ಪಟ್ಟು ಬೆಂಕಿಯನ್ನು ನಂದಿಸಿದರು ರೈತ ಸಿದ್ದನಗೌಡ ಮಾತನಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೂರದ ಊರುಗಳಿಂದ ಭತ್ತದ ಹುಲ್ಲು ತರಲಾಗಿತ್ತು 30 ಎಕರೆಯಷ್ಟು ಜೋಳದ ದಂತೂ 20 ಎಕರೆಯಷ್ಟು ಭತ್ತದ ಹುಲ್ಲು ಸಂಗ್ರಹಿಸಲಾಗಿತ್ತು ಜಾನುವಾರುಗಳಿಗೆ ಮೇವು ಇಲ್ಲದಂತಾಗಿದ್ದು ಏನು ಮಾಡುವದು ತೋಚದಂತಾಗಿದೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.

ಗ್ರಾಮಸ್ಥರಾದ ದಳಪತಿ ಲಕ್ಷ್ಮಣ ಅಂಬಣ್ಣ ನವರ್ ಸಿದ್ದಪ್ಪ ಪೂಜಾರಿ ಬೆಟ್ಟಪ್ಪ ನಾಗಪ್ಪ ಕೊಂಚಿಗೇರಿ ಫಕೀರಪ್ಪ ನಷ್ಟಗೊಳ ಗಾದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!