ಬಾರಿ ಮಳೆ ರಸ್ತೆಗಳು ಜಲಾವೃತ : ಜನ ಜೀವನ ಅಯೋಮಯ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 13- ನಗರದ ಮುಖ್ಯ ರಸ್ತೆಹಾಗು ಓಣಿ(ಗಲ್ಲಿ) ಮೂರು ತಾಸಿಗೂ ಹೆಚ್ಚು ಸುರಿದ ಮಳೆಗೆ ರಸ್ತಗಳು ಜಲಾವೃತ ಜನ ಜೀವನ ಅಸ್ತವ್ಯಸ್ಥವಾಗಿತ್ತು.
ಮಧ್ಯಾಹ್ನ ಮೂರುಗಂಟೆಯಿAದ ಸತತ ಸುರಿದ ಮಳೆಗೆ ರಸ್ತೇಗಳು ನೀರಿನಿಂದ ಜನರು ಚಲಾಸಲಾರದ ಸ್ಥಿತಿ ನಿರ್ಮಾಣವಾಗಿತ್ತು.
1ಲಕ್ಷಕ್ಕೂ ಅಧಿಕ ಜನರು ವಾಸಿಸುವ ಭತ್ತದ ನಗರಿ ಗಂಗಾವತಿಯಲ್ಲಿ ನಗರಸಭೆಯಿಂದ ಸುಸ್ಥಿರವಾದ ಚರಂಡಿಗಳು ನಿರ್ಮಾಣವಾಗಬೇಕಾಗಿದೆ.
ನಗರದ ೩೫ ವಾರ್ಡುಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಚರಂಡಿಗಳು ಇರುವದರಿಂದ ಇಂತಹ ಸ್ಥಿತಿಗಳು ನಿರ್ಮಾಣವಾಗಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದಾರೆ.
ಇನ್ನೂ ನಗರದ 20ವಾರ್ಡಿನಲ್ಲಿ ಎಲ್ಲಮ್ಮನಗುಡಿ ಸಮಿಪದ ಜಹಾಗಿರದಾರ ಗಲ್ಲಿಯಲ್ಲಿ ಮಳೆ ಬಂದರೆ ಜನರೆ ಸ್ಥೀತಿ ಗಂಭಿರ ಹಳ್ಳ ಹರಿದಂತೆ ಚರಂಡಿ ನೀರುಗಳು ರಸ್ತೆಯ ಮೇಲೆ ಹರಿದು ಅನೇಕ ಜನರು ಚಂರAಡಿಗಳಲ್ಲಿ ಬಿದ್ದಿರುವ ನಿರ್ದಶನಗಳು ಇವೆ.
ನಗರಸಭೆ ಸದಸ್ಯರುಗಳು ಎಚ್ಚೇತ್ತು ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಸಜ್ಜಿತವಾದ ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಂಭೋಣವಾಗಿದೆ.
