2c136fae-be38-4577-97e1-318669006cc9

ತೊಗರಿ ಬೆಳೆಯಲ್ಲಿ ಇಳುವರಿ ಹೆಚ್ಚಿಸುವ ಬಗ್ಗೆ ಕೃಷಿ ಇಲಾಖೆಯಿಂದ ಸಲಹೆಗಳು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 13- ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ತೊಗರಿ ಬೆಳೆಯುವ ರೈತರು ಕೆಲವು ಉತ್ಪಾದನಾ ತಾಂತ್ರಿಕತೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ ಪಡೆಯಲು ಸಹಾಯಕವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ ಅವರು ತಿಳಿಸಿದ್ದಾರೆ.

ಅಧಿಕ ಇಳುವರಿ ನೀಡುವ ಬೆಳೆಯ ತಳಿಗಳಾದ ಉಖಉ 152 ಗಳಂತಹ ತಳಿಗಳನ್ನು ಬಿತ್ತನೆ ಮಾಡಬೇಕು. ತೊಗರಿ ಬೆಳೆಗೆ ಇಳುವರಿ ಹೆಚ್ಚಿಸಲು ರೈತರು ಬಿತ್ತನೆಗೆ ಮುಂಚಿತವಾಗಿ ಬೀಜಗಳಲ್ಲಿ ಬರ ನಿರೋಧಕತೆ ಹೆಚ್ಚಿಸಲು ಬೀಜಗಳನ್ನು ಶೇ.2 ರಷ್ಟು ಕ್ಲೋರೈಡ್ ದ್ರಾವಣದಲ್ಲಿ ಒಂದು ತಾಸು ನೆನೆಸಿ, ನಂತರ ನೆರಳಿನಲ್ಲಿ ಕನಿಷ್ಠ 7 ತಾಸು ಒಣಗಿಸಬೇಕು. ನಂತರ ಪ್ರತಿ ಕಿ.ಗ್ರಾಂ. ಬೀಜಕ್ಕೆ 3 ಗ್ರಾಂ. ಶಿಲೀಂಧ್ರ ಮಿಶ್ರಣವಾದ ಕಾರ್ಬಂಡೀಜಿಯA, ಮ್ಯಾಂಕೋಜೆಬ್ ಅಥವಾ ಜೈವಿಕ ಗೊಬ್ಬರವಾದ ಟ್ರೆöÊಕೊಡರ್ಮ, ರೈಜೋಬಿಯಂಗಳಿAದ ಬೀಜೋಪಚಾರ ಮಾಡಿಕೊಳ್ಳಬೇಕು.

ಯಾಂತ್ರೀಕೃತ ಬಿತ್ತನೆಯನ್ವಯ 90/30 ಸೆಂ.ಮೀ. ನಲ್ಲಿ ಬೆಳೆ ಅಂತರ ಕಾಪಾಡಬೇಕು. ಮಧ್ಯಮ ಅವಧಿ ತಳಿಗಳಿಗೆ 150/20 ಸೆಂ.ಮೀ. ದೀರ್ಘಾವಧಿ ತಳಿಗಳಿಗೆ 180/30 ಅಂತರದಲ್ಲಿ ಬಿತ್ತನೆ ಮಾಡಬೇಕು. ಹೆಚ್ಚಿನ ಸಸಿಗಳನ್ನು ಕಿತ್ತು ಹಾಕಬೇಕು.

ಬೆಳವಣಿಗೆ ಹಂತದಲ್ಲಿ ಅಂದರೆ ಬೆಳೆಯ 45-55 ನೇ ದಿನಗಳಲ್ಲಿ ತಪ್ಪದೆ ಕುಡಿ ಚಿವುಟುವುದರಿಂದ ಹೆಚ್ಚಿನ ಪ್ರಮಾಣದ ಇಳುವರಿ ಪಡೆಯಲು ಸಹಾಯಕವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!