ಭತ್ತದ ನಗರಿ ನಗರಸಭೆಗೆ ಅಧ್ಯಕ್ಷರಿಲ್ಲದ ವರ್ಷ : ಅಭಿವೃದ್ದಿ ಶೂನ್ಯ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 13- ಭತ್ತದ ನಗರಿಯಲ್ಲಿ ೧ಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದು ೩೫ವಾರ್ಡುಗಳ ನಗರಸಭೆ ಸರಕಾರದ ಮೀಸಲಾತಿ ಗೊಂದಲದಿAದಾಗಿ ಒಂದು ವರ್ಷ ಗತಿಸಿದರೂ ಅಧ್ಯಕ್ಷರಿಲ್ಲದಂತಾಗಿದೆ.
1-5-2023 ರವರೆಗೆ ಮಾಲಾಶ್ರೀ ಸಂದಿಪ ನಗರಸಭೆ ಅಧ್ಯಕ್ಷರಾಗಿದ್ದರು. ನಂತರ ಇಲ್ಲಿಯವರೆಗೆ 1ವರ್ಷ 1ತಿಂಗಳು 13 ದಿನವಾದರೂ ನಗರಸಭೆ ಅಧ್ಯಕ್ಷರಾಗಲು ಮೋಕ್ಷ ಇಲ್ಲದಂತಾಗಿದೆ. ಕಾಂಗ್ರೇಸ ಸದಸ್ಯ ನಗರಸಭೆ ಮಾಜಿ ಅಧ್ಯಕ್ಷ ಶ್ಯಾಮಿದಮನಿಯಾರ ಮಾತನಾಡಿ ರಾಜ್ಯದಲ್ಲಿ ನಗರಸಭೆ ಹಾಗೂ ಪುರಸಭೆ ಅಧ್ಯಕ್ಷರಗಳ ಮಿಸಲಾತಿಗಾಗಿ ನ್ಯಾಯಾಲಯ ಮೇಟ್ಟಲು ಏರಿರುವದರಿಂದ ಜಿಲ್ಲಾಡಳಿತ ಆಡಳಿತಾತ್ಮಕ ಅಧಿಕಾರಿಯಾಗಿ ನಗರಸಭೆ ಪೌರಾಯಕ್ತರು ನಿರ್ವಹಿಸುತ್ತಿದ್ದಾರೆ. ಗಂಗಾವತಿ ಶಾಸಕ ಜನಾರ್ಧನರೆಡ್ಡಿಯವರು ಅಭಿವೃದ್ದಿಗಾಗಿ ಗಮನಹರಿಸಬೇಕು ಎಂದರು.
ಕಾಂಗ್ರೇಸ ಸದಸ್ಯ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮನೋಹರ ಸ್ವಾಮಿ ಮುದೇನೂರ ಮಾತನಾಡಿ ನಗರಸಭೆಗೆ ಅಧ್ಯಕ್ಷರಿಲ್ಲದೇ ಒಂದು ವರ್ಷದಿಂದ ನಾವುಗಳು ಸದಸ್ಯರು ಇದ್ದರೂ ಇಲ್ಲದ ಹಾಗೇ ಆಗಿದೆ. ಅಭಿವೃದ್ದಿ ಮರಿಚಿಕೆಯಾಗಿದೆ. ಅಧಿಕಾರಿಗಳು ಆಡಿದ್ದೆ ಆಟ ಮಾಡಿದ್ದೆ ಮಾಟ ಎನ್ನುವಂತೆ ಆಗಿದೆ.
ಬಿಜೆಪಿ ನಗರಸಭೆ ಸದಸ್ಯ ಗಂಗಾವತಿ ಶಾಸಕರ ಆಪ್ತ ವಲಯದ ಸದಸ್ಯ ರಮೇಶ ಚೌಡಕಿ ತಿಳಿಸಿ ಈಹಿಂದೆ ನಾವು ೧೬ಕ್ಕೂ ಹೆಚ್ಚು ಸದಸ್ಯರು ಜನಾರ್ಧನರೆಡ್ಡಿಯವರ ಕೆಆರ್ ಪಿಪಿ ಪಕ್ಷದಲ್ಲಿ ಸೇರಿ ಅಭಿವೃದ್ದಿಗಾಗಿ ಶಾಸಕರ ಕೈ ಬಲಪಡಿಸಿದ್ದವು. ಈಗ ಬಿಜೆಪಿಯಲ್ಲಿ ವಿಲಿನವಾಗಿದ್ದರಿಂದ ಬಹುಮತಕ್ಕೆ ಬೇಕಾದ 19 ಕ್ಕೂ ಹೆಚು 25 ಸದಸ್ಯರುಗಳು ಬಿಜೆಪಿ ನಗರಸಭೆ ಸದಸ್ಯರುಗಳು ಇದ್ದವೆ. ಈಗಾಗಲೇ ಶಾಸಕ ಗಾಲಿಜನಾರ್ಧನರೆಡ್ಡಿಯವರು ರಾಣಾಪ್ರತಾಪ ವೃತ್ತದಿಂದ ಕನಕದಾಸ ವೃತ್ತ ಅಭಿವೃದಿ ಕಾರ್ಯ ಕೈಗೊಂಡಿದ್ದಾರೆ.
ಸಂಸದರ ಚುನಾವಣೆ ಮುಗಿದು ನೀತಿ ಸಂಹಿತೆ ಮುಗಿದಿದೆ ಅಭಿವೃದ್ದಿ ಕೆಲಸಗಳಿಗೆ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ನಿಲ ನಕ್ಷೆ ತಯಾರು ಗೋಳಿಸಿದ್ದಾರೆ.ಕೆಲಸಗಳು ಪ್ರಾರಂಭವಾಗುತ್ತವೆ ಎಂದರು.
ನಗರಸಭೆ ಮಾಜಿ ಸದಸ್ಯ ರಾಚಪ್ಪ ಸಿದ್ದಾಪೂರ ಮಾತನಾಡಿ ಮೋದಲು 17 ಕಾಂಗ್ರೇಸ ನಗರಸಭೆ ಸದಸ್ಯರು, 14 ಬಿಜೆಪಿ ಸದಸ್ಯರು ,2ಜೆಡಿಎಸ್ ಸದಸ್ಯರು ಓರ್ವ ಪಕ್ಷೇತರ ಸದಸ್ಯರು ಒಟ್ಟು ೩೫ ನಗರಸಭೆ ಸದಸ್ಯರು ಇದ್ದರು.
ಕೆಆರ್ ಪಿಪಿ ಪಕ್ಷದಿಂದ ಗಾಲಿ ಜನಾರ್ಧನರೆಡ್ಡಿಯವರು ಶಾಸಕರಾಗಿ ಆಯ್ಕೆಯಾದ ಮೇಲೆ ೪ಜನ ಬಿಜೆಪಿ ಸದ್ಯಸರು,೨ಜೆಡಿಎಸ್ ಪಕ್ಷದ ಸದಸ್ಯರು ಓರ್ವ ಪಕ್ಷೇತರ ಸದಸ್ಯ ೭ಜನ ಕಾಂಗ್ರೇಸ ಸದಸ್ಯರು ಶಾಸಕ ಗಾಲಿ ಜನಾರ್ಧನರೆಡ್ಡಿಯವರ ಪಾಳೆಯಕ್ಕೆ ಸೇರಿದ್ದರು.
ಈಗ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಬಿಜೆಪಿ ಪಕ್ಷ ಸೇರಿದ್ದರಿಂದ ಅವರೊಂದಿಗೆ ಇದ್ದ ಎಲ್ಲಾ ಸದಸ್ಯರು ಬಿಜೆಪಿ ಸೇರಿದ್ದಾರೆ.
ಹಿಗಾಗಿ ಬಿಜೆಪಿ ೧೦ಜನ ಸದಸ್ಯರು ಸೇರಿ ೨೫ಕ್ಕೂ ಹೆಚ್ಚು ಸದಸ್ಯರುಗಳು ಬಿಜೆಪಿಯಲ್ಲಿ ಇದ್ದಾರೆ ಬಹುಮತ ವಿದ್ದರೂ ಅಧ್ಯಕ್ಷರ ಮಿಸಲಾತಿಯ ಮೇಲೆ ಅವಲಿಂಬಿತವಾಗಿದೆ ಎಂದರು.
ಒಟ್ಟಾರೆ ನಗರಸಭೆ ಶೀಘ್ರದಲ್ಲಿ ಯೇ ಅಧಕ್ಷರ ನೇಮಕದ ಆಯ್ಕೇಯ ಪ್ರಕಿಯೆಗೆ ಸರಕಾರ ಮುಂದಾದರೆ ಅಭಿವೃದ್ದಿ ಕಾರ್ಯಗಳು ಕಾರ್ಯತತ್ಪರತೆ ಪಡೆಯಲು ಸಾಧ್ಯವಾಗುತ್ತವೆ.
ನಗರಸಭೆ ಎಲ್ಲಾ ವಾರ್ಡುಗಳಿಗೆ-ಅಭಿವೃದ್ದಿಗಾಗಿ ಅನುದಾನ : ಈಗಾಗಲೇ 14ನೇ ಹಣಕಾಸು ಯೋಜನೆಯಡಿ ೩೫ವಾರ್ಡುಗಳಲ್ಲಿ ಅಭಿವೃದ್ದಿಗಾಗಿ ೮೫ ಲಕ್ಷ ಅನುದಾನದಲ್ಲಿ ೮೦ಲಕ್ಷ ಟೆಂಡರ ಆಗಿದೆ. ಸಂಸದರ ಚುನಾವಣೆ ಹಾಗೂ ನೀತಿ ಸಂಹಿತೆಗಾಗಿ ತಡವಾಗಿರುತ್ತದೆ ಎಂದು ನಗರಸಭೆ ಪೌರಾಯುಕ್ತ ಆರ್ ವಿರುಪಾಕ್ಷಮೂರ್ತಿ ತಿಳಿಸಿದರು.
ಬರುವ ದಿನದಲ್ಲಿ ೧೫ನೇ ಹಣಕಾಸು ಯೋಜನೆಯಡಿ ವಾರ್ಡುಗಳ ಅಭಿವೃದ್ದಿ ೪ಕೋಟಿ ಮಂಜೂರಾತಿ ದೋರತಿದೆ. ಟೆಂಡರ ಪ್ರಕಿಯೇ ಮುಗಿದಿದೆ ಕೆಲಸಗಳು ಪ್ರಾರಂಭವಾಗುತ್ತವೆ.
ಮುಂಬರುವ ದಿನದಲ್ಲಿ ೪ಕೋಟಿ ಅನುದಾನ ಅಭಿವೃದ್ದಿಗಾಗಿ ಪ್ರಸ್ತಾವನೆ ಮಂಜೂರಾತಿ ಕಳುಹಿಸಲಾಗಿದೆ.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಾರ್ಡುಗಳ ಅಭಿವೃದ್ದಿಗಾಗಿ ಸನ್ನದ್ದರಾಗಿದ್ದವೆ. ಅಭಿವೃದ್ದಿ ಮರಿಚಿಕೆ ಯಾಗಿಲ್ಲ ಎಂದರು.
