ಜಿಟಿ ಜಿಟಿ ಮಳೆ ಬಿತ್ತನೆ ಕಾರ್ಯ, ಜನವರಿಯಿಂದ ಜೂನ್ ವರೆಗೆ 93.9 ಮಿಲಿಮೀಟರ್ ಮಳೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 13- ತಾಲೂಕಿನಲ್ಲಿ ಜನವರಿಯಿಂದ ಜೂನ್ ವರೆಗೆ 155.6 ಮಿಲಿ ಮೀಟರ್ ಮಳೆ ಬರಬೇಕಾಗಿತ್ತು ಆದರೆ 93.9 ಮಿಲಿ ಮೀಟರ್ ಮಳೆ ಬಂದಿದೆ ಶೇ. 34 ರಷ್ಟು ಮಳೆ ಕಡಿಮೆಯಾಗಿದೆ ಕಳೆದ ಮೂರು ದಿನಗಳಿಂದ ಸಿರುಗುಪ್ಪ ತಾಲೂಕಿನಲ್ಲಿ ಮೋಡ ಮುಸುಕಿದ ವಾತಾವರಣವಿದೆ ಮಂಗಳವಾರ ಮತ್ತು ಬುಧವಾರ ಅಲ್ಲಲ್ಲಿ ಮಳೆಯಾಗಿದೆ ಗುರುವಾರ ಬೆಳಗಿನ ದಿಂದ ತಾಲೂಕಿನ ಕೆಲವು ಭಾಗಗಳಲ್ಲಿ ತುಂತುರು ಮಳೆ, ಸುರಿದರೆ ಕೆಲವು ಭಾಗಗಳಲ್ಲಿ ಜೋರಾದ ಮಳೆ ಸುರಿದಿದೆ.
ಇದರಿಂದಾಗಿ ರೈತರು ಬೆಳೆದ ಬೆಳೆಗಳು ಬೆಳೆಯಲು ಅನುಕೂಲವಾಗಿದೆ ಇಲ್ಲಿಯವರೆಗೆ ಸಿರುಗುಪ್ಪ ತಾಲೂಕಿನಲ್ಲಿ 180 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ 90 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಬೆಳೆ ಬಿತ್ತನೆಯಾಗಿದೆ ಕೆಲವು ಕಡೆ ಭಾನುವಾರವು ರೈತರು ಹತ್ತಿ ಮತ್ತು ಸೂರ್ಯಕಾಂತಿ ಸಜ್ಜೆ ಬೆಳೆಯ ಬೀಜವನ್ನು ನಾಟಿ ಮಾಡುವ ಕಾರ್ಯದಲ್ಲಿ ತೊಡಗಿರುವದು ಕಂಡು ಬಂತು ಆದರೆ ಕಳೆದ ಎರಡು ದಿನಗಳಿಂದ ಉತ್ತಮ ಮಳೆ ಯಾಗುತ್ತಿರುವುದರಿಂದ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿರುವುದಿಲ್ಲ ಕೃಷಿ ಇಲಾಖೆಯ ಪ್ರಕಾರ 155.6 ಮಿಲಿಮೀಟರ್ ಮಳೆಯಾಗ ಬೇಕಾಗಿತ್ತು ಆದರೆ 93.9 ಮಿಲಿ ಮೀಟರ್ ಮಳೆಯಾಗಿದೆ ಶೇ. 34 ರಷ್ಟು ಮಳೆಯ ಕೊರತೆ ಉಂಟಾಗಿದೆ.
ಮಳೆ ಕೊರತೆ ನಡುವೆಯೂ ರೈತರು ವಿವಿಧ ಬೆಳೆಗಳನ್ನು ಬೆಳೆಯಲು ಬೇಕಾದ ಬೀಜಗಳನ್ನು ಸಂಗ್ರಹ ಮಾಡಿಟ್ಟು ಕೊಂಡಿದ್ದು ಮಳೆ ಬಿಡುವು ಕೊಟ್ಟರೆ ಬೀಜ ಬಿತ್ತನೆ ಕಾರ್ಯ ಸಿರುಗುಪ್ಪ ತಾಲೂಕಿನದ್ಯಂತ ಜೋರಾಗಿ ನಡೆಯಲಿದೆ.
ಸಿರುಗುಪ್ಪ ನಗರದಲ್ಲಿ ಬೆಳಗಿನ ಜಾವದಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಶಾಲೆಗೆ ತೆರಳುವ ಮಕ್ಕಳು ಮತ್ತು ಸರ್ಕಾರಿ ಕಚೇರಿಗಳಿಗೆ ಬರುವ ಅಧಿಕಾರಿಗಳಿಗೆ ಹಾಗೂ ಬೀದಿ ಬದಿಯಲ್ಲಿ ಹೂ ಹಣ್ಣು ತರಕಾರಿ ಮತ್ತಿತರ ಮಾರಾಟ ಮಾಡುವ ವ್ಯಾಪಾರಿಗಳಿಗೂ ಅನಾನುಕೂಲವಾಗಿತ್ತು.
ಸಿರುಗುಪ್ಪ ತಾಲೂಕಿನಾದ್ಯಂತ ಮಳೆ ಸುರಿದ ಸಿರುಗುಪ್ಪ ತೆಕ್ಕಲಕೋಟೆ ಹನ್ನೆರಡು ತೆಕ್ಕಲಕೋಟೆ ಸಿರಿಗೇರಿ 13.1 ಮಣ್ಣೂರು ಸೂಗೂರು 9.2 ಹಚ್ಚೋಳ್ಳಿ 16.4 ರಾವಿಹಾಳು 34.2 ಕರೂರು 22.4 ಕೆ ಬೆಳಗಲ್ 22.4 ಮಿಲಿ ಮೀಟರ್ ಮಳೆಯಾಗಿದೆ ತಾಲೂಕು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ಮಾಹಿತಿ ಪ್ರಕಟಿಸಿದ್ದಾರೆ ಎಂದು ಜನ ಅಭಿಪ್ರಾಯ ಮುಖಂಡ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿಯವರು ತಿಳಿಸಿದ್ದಾರೆ.
