WhatsApp Image 2024-06-14 at 4.25.46 PM

ಸಾರ್ವಜನಿಕ ಶಾಂತಿ ಪಾಲನಾ ಸಭೆ ಈದ್ ಉಲ್ ಅಜ್ ಹಾ ಬಕ್ರೀದ್ ಶಾಂತಿ ಪ್ರೀತಿ ವಿಶ್ವಾಸ ಸೌಹಾರ್ದದಿಂದ ಆಚರಿಸಿ :ಡಿವೈಎಸ್ ಪಿ ವೆಂಕಟೇಶ್

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 14- ತ್ಯಾಗ ಬಲಿದಾನದ ಸಂಕೇತ ಈದ್ ಉಲ್ ಅಜ್ ಹಾ ಬಕ್ರೀದ್ ಭಾವೈಕ್ಯತೆ ಶಾಂತಿ ಪ್ರೀತಿ ವಿಶ್ವಾಸ ಸೌಹಾರ್ದತೆಯಿಂದ ಸಮಾಜದ ಎಲ್ಲಾ ಬಾಂಧವರು ಆಚರಿಸಬೇಕು ಎಂದು ಡಿ ವೈ ಎಸ್ ಪಿ ವೆಂಕಟೇಶ್ ಉಗಿಬಂಡಿ ಅವರು ಹೇಳಿದರು.

ಸಿರುಗುಪ್ಪ ನಗರದ ಪೊಲೀಸ್ ಠಾಣಾ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲಾ ಪೊಲೀಸ್ ವಿಭಾಗ ಸಿರುಗುಪ್ಪ ಉಪ ವಿಭಾಗ ಸಹಯೋಗದಲ್ಲಿ ಏರ್ಪಡಿಸಿದ ತ್ಯಾಗ ಬಲಿದಾನದ ಸಂಕೇತ ಈದ್ ಉಲ್ ಅಜ್ ಹಾ ಬಕ್ರೀದ್ ಹಬ್ಬದ ಸಾರ್ವಜನಿಕ ಶಾಂತಿ ಪಾಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಿರುಗುಪ್ಪ ತಾಲೂಕು ಶಾಂತಿಗೆ ಹೆಸರಾಗಿದೆ ಎಲ್ಲರೂ ಭಾವೈಕ್ಯದಿಂದ ಭೇದಭಾವ ಮಾಡದೆ ಪ್ರತಿವರ್ಷದ ಪ್ರಕಾರ ಈ ಬಾರಿಯೂ ಬಕ್ರೀದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವುದರ ಜೊತೆಗೆ ಕಾನೂನು ಪಾಲನೆ ಮಾಡಿ ನಾವೆಲ್ಲ ಪರಸ್ಪರ ಸ್ನೇಹ ಪ್ರೀತಿಯಿಂದ ಬಕ್ರೀದ್ ಆಚರಿಸಬೇಕು ಇದರಿಂದ ಶಾಂತಿ ಸಹಬಾಳ್ವೆ ಸಾಧ್ಯ ಸಮಾಜದ ಬಾಂಧವರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿ ಸರ್ವರಿಗೂ ಬಕ್ರೀದ್ ಹಬ್ಬದ ಶುಭಾಶಯ ಹಾರೈಸಿದರು.

ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ವೈ ಎಸ್ ಹನುಮಂತಪ್ಪ ಅವರು ಸರ್ವರಿಗೂ ಸ್ವಾಗತ ಬಯಸಿ ಮಾತನಾಡುತ್ತಾ ನಮ್ಮಲ್ಲಿ ಮಾನವೀಯ ಗುಣಗಳನ್ನು ಮೂಡಿಸಲು ಹಾಗೂ ಭ್ರಾತೃತ್ವದ ಭಾವನೆ ಎಲ್ಲರಲ್ಲೂ ಮೂಡಲು ಶಾಂತಿ ಪ್ರೀತಿ, ವಿಶ್ವಾಸ ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸೋಣ ಸಮಾಜದ ಬಾಂಧವರು ಪೊಲೀಸರಿಗೆ ಸಹಕಾರ ನೀಡಬೇಕು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಸರ್ವ ಧರ್ಮ ಸಮಾನತೆ ಇಂದ ಅವರವರ ಆಚಾರ ವಿಚಾರಕ್ಕೆ ಧಕ್ಕೆ ಬಾರದಂತೆ ಬಕ್ರೀದ್ ಹಬ್ಬವನ್ನು ಸರ್ಕಾರದ ನಿಯಮಾನುಸಾರ ಮುಂಜಾಗ್ರತೆ ವಹಿಸಿ ಪ್ರಾಣಿಗಳ ವಧೆ ಖುರ್ಬಾನಿ ಕೊಡಿರಿ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯವನ್ನು ಅವರು ಕೋರಿದರು ಮತ್ತು ವಂದಿಸಿದರು.

ತೆಕ್ಕಲಕೋಟೆ ಸಿಪಿಐ ಸುಂದರೇಶ್ ಕ್ರೈಂ ಇನ್ಸ್ಪೆಕ್ಟರ್ ಹೊನ್ನಪ್ಪ ಪಿಎಸ್ಐ ತಿಮ್ಮಣ್ಣ ನಾಯಕ ಹಚ್ಚೋಳ್ಳಿ ಪಿಎಸ್ಐ ಪರುಶರಾಮ ತೆಕ್ಕಲಕೋಟೆ ಪಿಎಸ್ಐ ಸಿರಿಗೇರಿ ಪಿಎಸ್ಐ ಆರೋಗ್ಯ ಇಲಾಖೆಯ ಅಧಿಕಾರಿ ಯಲ್ಲಪ್ಪ ಮುಖಂಡರಾದ ಖತೀಬ್ ಜಹೀರುದ್ದೀನ್ ಬಾಬು ಹಾಜಿ ಹಂಡಿ ಹುಸೇನ್ ಭಾಷಾ ಹಾಜಿ ಎ ಅಬ್ದುಲ್ ನಬಿ ಡಾ, ಮೊಹಮ್ಮದ್ ಅಲಿ ಮೋದಿ ನ್ ಮೀರ್ ಹುಸೇನ್ ಅಡ್ವಕೇಟ್ ಎ ಎಸ್ ಅಮೀರ್ ಬಾಷಾ ಎಲ್ ಮೊಹಮ್ಮದ್ ಆಜಾಮ್ ಚೌದ್ರಿ ಹಾರುನ್ ಮೊಹಮ್ಮದ್ ಕೆ ಅಲಿ ವಿವಿಧ ಸಮುದಾಯದ ಪ್ರಮುಖರು ಪೊಲೀಸ್ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!