WhatsApp Image 2024-06-15 at 6.10.30 PM

ರಂಗಭೂಮಿಯ ಸಿದ್ಧಾಂತಗಳನ್ನು ಸೈದ್ಧಾಂತಿಕವಾಗಿ ರೂಪಿಸಬೇಕು : ಭರಮಣ್ಣ ಬೆಟಗೇರಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 15- ಎಲ್ಲಾ ಭಾಷೆಗಿಂತ ಮಿಗಿಲಾದದ್ದು ಕಲೆಯಾಗಿದೆ.ರಂಗಭೂಮಿಯ ಸಿದ್ಧಾಂತಗಳನ್ನು ಸೈದ್ಧಾಂತಿಕವಾಗಿ ರೂಪಿಸಬೇಕು ಎಂದು ನಿನಾಸಂ ರಂಗತರಬೇತುದಾರರಾದ ಭರಮಣ್ಣ ಬೆಟಗೇರಿ ಹೇಳಿದರು.

ಪಟ್ಟಣದ ಎಸ್.ಎ.ನಿಂಗೋಜಿ ಬಿ.ಇಡಿ.ಕಾಲೇಜಿನಲ್ಲಿ ಆಯೋಜಿಸಿದ “ಶಿಕ್ಷಣದಲ್ಲಿ ರಂಗಭೂಮಿ” ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಅವರು ನಾಟಕದ ಪಾತ್ರಗಳಿಗೆ ಜೀವಕೊಡಬೇಕಾದರೆ ಏಕಾಗ್ರತೆ ˌ ತಲ್ಲಿನತೆ ಹಾಗೂ ಆ ಕಲಾವಿದನಿಗೆ ಆತ್ಮವಿಶ್ವಾಸ ಮುಖ್ಯವಾಗಿ ಇರಬೇಕಾಗುತ್ತದೆ ಎಂದರು.

ಮಾತನ್ನು ಕಂಠಪಾಠಮಾಡಿ ಹೇಳುವದಲ್ಲ. ತನ್ನ ಎದುರು ಇರುವ ಪಾತ್ರದಾರಿ ಹೇಗೆ ಸಂಭಾಷಿಸುತ್ತಾನೆ ಎನ್ನುವದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ನಾಟಕದಲ್ಲಿ ಎಲ್ಲಾ ಪಾತ್ರಗಳು ಪ್ರಮುಖವಾಗುತ್ತವೆ ಎಂದರು.ಆದ್ದರಿಂದ ಎಲ್ಲರೂ ಪಾತ್ರಗಳಿಗೆ ಜೀವ ತುಂಬುವ ಕೆಲಸಆಗಬೇಕು ಎಂದರು. ಶಿಕ್ಷಕರಾಗುವವರಿಗೆ ಎಲ್ಲಾ ಜ್ಞಾನ ಇರಬೇಕು ಭಾವಿ ಸತ್ಪ್ರಜೆಗಳನ್ನು ನಿರ್ಮಿಸುವವರು ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಬೊಧಿಸ ಬೇಕಾಗುತ್ತದೆ.

ಸಂಸ್ಕ್ರತಿಯಿಂದ ಸಂಸ್ಕಾರ ಬರುವುದು ಆದ್ದರಿಂದ ಒಳ್ಳೆ ಸಂಸ್ಕಾರವಂತರನ್ನು ಹುಟ್ಟುಹಾಕುವ ಕೆಲಸ ಪಾಲಕರು ಹಾಗೂ ಶಿಕ್ಷಕರು ಮಾಡಬೇಕು ಎಂದರು.

ನಿಂಗೋಜಿ ಮನೆತನ ಸಮಾಜ ಸೇವೆ ˌ ಹೋರಾಟ ˌ ಹಾಗೂ ಶಿಕ್ಷಣದ ಬಗ್ಗೆ ಮಹತ್ವವನ್ನು ನೀಡುವ ಮನೆತನವಾಗಿದೆ ಎಂದರು.

ಗದುಗಿನ ಸಂಪನ್ಮೂಲ ವ್ಯಕ್ತಿ ರವಿ ಹುಚ್ಚಣ್ಣನವರ ಹಣಕಾಸು ವ್ಯವಹಾರಗಳನ್ನು ಹೇಗೆ ನಿರ್ವಹಿಸಬೇಕು ಎಂಬುವದರ ಬಗ್ಗೆ ವಿವರಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಟ್ರಸ್ಟಿಗಳಾದ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಟ್ರಸ್ಟಿನ ಅಧ್ಯಕ್ಷ ನ್ಯಾಯವಾದಿ ಶಶಿಕಾಂತ ನಿಂಗೋಜಿ ಉಪನ್ಯಾಸಕರಾದ ವೀರೇಶ ಪತ್ತಾರ ˌ ರವಿ ನಿಂಗೋಜಿ ಇನ್ನೀತರರು ಇದ್ದರು.

ನಜುಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾತಿ ಕುಂಬಾರ ಪ್ರಾರ್ಥಿಸಿದರು. ಭಾಗ್ಯಶ್ರೀ ಸ್ವಾಗತಿಸಿದರು. ಅಕ್ಷತಾ ಅತಿಥಿಗಳನ್ನು ಪರಿಚಯಿಸಿದರು. ನಿಹಾರಿಕಾ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!