WhatsApp Image 2024-06-15 at 6.11.29 PM

ವೈದ್ಯಕೀಯ ಮೆಡಿಕಲ್ ಕಾಲೇಜ್ ನಲ್ಲಿ ಆಯೋಜಿಸಿ: ವಿಶ್ವ ರಕ್ತ ದಾನಿಗಳ ದಿನಾಚರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 15- ಈ ಸೃಷ್ಟಿಯ ಜೀವ ಸಂಕುಲಕ್ಕೆ & ವೈದ್ಯಕೀಯ ಕ್ಷೇತ್ರಕ್ಕೆ ರಕ್ತದ ಗುಂಪನ್ನು ಕಂಡು ಹಿಡಿದು ಮಹತ್ತರ ಕೊಡುಗೆ ನೀಡಿದ ಆಸ್ಟ್ರೇಲಿಯಾ ದೇಶದ ಜೀವ ಶಾಸ್ತ್ರಜ್ಞ ವಿಜ್ಞಾನಿ ಕಾಲ್೯ ಸ್ಟ್ಯೇನರ್ ಜನ್ಮ ದಿನದಂದು ವಿಶ್ವ ರಕ್ತದಾನಿಗಳ ದಿನಾಚರಣೆಯ ಕಾಯ೯ ಕ್ರಮವನ್ನು ಕೊಪ್ಪಳದ ವೈದ್ಯಕೀಯ ಕಾಲೇಜ್ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದರು.

ಜೀವ ಶಾಸ್ತ್ರಜ್ಞ ಕಾಲ್೯ ಲ್ಯಾಂಡ್ಸ್ಟೇನರ್ 1901ರಲ್ಲಿ ರಕ್ತದ ಗುಂಪುಗಳನ್ನು ಕಂಡು ಹಿಡಿದ ಪ್ರಯುಕ್ತ ವೈದ್ಯಕೀಯ ಲೋಕದಲ್ಲಿ ರೋಗಿಗೆ ರಕ್ತದ ಕೊರತೆ ಇದ್ದಾಗ ರಕ್ತವನ್ನು ನೀಡಿ ಜೀವ ಉಳಿಸುವ ಕಾರ್ಯ ಇಂದಿಗೂ ಸರಾಗವಾಗಿ ನಡೆಯುತ್ತಿದೆ, ಈ ಕಾರಣಕ್ಕೆ ಇವರಿಗೆ ನೊಬೆಲ್ ಪಾರಿತೋಷಕ ನೀಡಲಾಗಿದೆ, ಹೀಗಾಗಿ ಅವರ ಜನ್ಮದಿನವಾದ ಜೂನ 14 ರಂದು ಪ್ರತಿ ವಷ೯ ಇವರ ಹುಟ್ಟು ಹಬ್ಬದ ಪ್ರಯುಕ್ತ ವಿಶ್ವರಕ್ತ ದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ನಿಟ್ಟಿನಲ್ಲಿ ರಕ್ತ ದಾನವೆಂಬ ಮಹತ್ಕಾರ್ಯವನ್ನು ಸಂಘಟಿಸುವ ಹಾಗೂ ರಕ್ತವನ್ನು ದಾನ ಮಾಡುತ್ತಿರುವ ಅನೇಕರಿಗೆ ಅಭಿನಂದನೆ ಮತ್ತು ಗೌರವ ವ್ಯಕ್ತ ಪಡಿಸುವ ಸುದಿನವಿದು, ಇಂತಹ ಸುದಿನದಂದು ನಮ್ಮ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರೋಗ ನಿದಾನ ಶಾಸ್ತ್ರ ವಿಭಾಗ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ರಕ್ತ ದಾನದ ಬಗ್ಗೆ ಅರಿವು ಜಾಗೃತಿ ಮೂಡಿಸುವದರ ಜೊತೆಗೆ ರಕ್ತದಾನ ಶಿಬಿರದ ಸಮಾರಂಭವನ್ನು ಆಯೋಜಿಸಲಾಗಿತ್ತು ಈ ಶಿಬಿರದಲ್ಲಿ ಸುಮಾರು 40 ಕಿಮ್ಸ್ ನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ರಕ್ತ ರಕ್ತದಾನ ಮಾಡಿ ಪ್ರೇರಣೆಯಾದರು.

ಈ ಒಂದು ಸಮಾರಂಭದಲ್ಲಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ, ವಿದ್ಯಾರ್ಥಿಗಳು, ರೋಗ ನಿದಾನ ಶಾಸ್ತ್ರ ವಿಭಾಗದ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!