WhatsApp Image 2024-06-18 at 6.11.05 PM

ನೀರು ಕುಡಿಯಲು ಹೋಗಿ ಬಾಲಕ ವಸಂತ ಕೃಷಿ ಹೊಂಡದಲ್ಲಿ ಬಿದ್ದು ಸಾವು

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 18- ತಾಲೂಕು ಸಿರಿಗೇರಿ ಗ್ರಾಮದಲ್ಲಿ ಸೋಮವಾರ 10 ವರ್ಷದ ಬಾಲಕ ವಸಂತ ಎಂಬ ತನ್ನ ಅಜ್ಜಿಯೊಂದಿಗೆ ಹೊಲಕ್ಕೆ ಹೋಗಿದ್ದು ಊಟದ ನಂತರ ನೀರು ಕುಡಿಯಲು ಕೃಷಿ ಹೊಂಡಕ್ಕೆ ತೆರಳಿ ನೀರು ಕುಡಿಯುವ ವೇಳೆ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ.

ವಯಸ್ಸಾದ ಅಜ್ಜಿ ಅಲ್ಲೇ ಇದ್ದರೂ ಅಸಹಾಯಕಳಾಗಿದ್ದಾಳೆ ಆದರೆ ಎಲ್ಲರನ್ನೂ ಕೂಗಿ ಕರೆದು ತಿಳಿಸಿದಾಗ ಗ್ರಾಮಸ್ಥರು ಹರಸಾಹಸ ಪಟ್ಟು ರಕ್ಷಣೆಗಾಗಿ ನೀರಿನ ಹೋಂಡಾದಲ್ಲಿ ಹಾರಿ ಹುಡುಕಿ ಬಾಲಕನನ್ನು ಹೊರ ತೆಗೆದರು ನಂತರ ಅವರು ಪ್ರಯತ್ನ ಪಟ್ಟು ವೈದ್ಯರ ಶಿಫಾರಸಿನ ಮೇರೆಗೆ ಬಳ್ಳಾರಿ ವಿಮ್ಸ್ ಗೆ ಕರೆದೊಯ್ಯುವ ವೇಳೆ ಬಾಲಕ ಮೃತ ಪಟ್ಟಿರುತ್ತಾನೆ.

ಈ ಸಂಬಂಧವಾಗಿ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಟಿ ಎಸ್ ಐ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!