20-gvt1

ಮಹಿಳಾ ಕಾರ್ಯಕರ್ತರಿಂದ ಸಚಿವ ತಂಗಡಗಿ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 21- ನಗರದ ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ ಬಿಜೆಪಿ ಪಕ್ಷದವತಯಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಸ್ತಾರೊಖೋ ಮೂಲಕ ಮಾಡುವದರ ಮಪ್ರತಿಭಟಿಸಲಾಯಿತು.ಹಾಗೂ ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ರಾಜ್ಯ ಸರಕಾರ ದಿಡಿರ್ ಪೇಟ್ರೋಲ್ ಬೆಲೆ ಹಾಗೂ ಡಿಸೆಲ್ ಬೆಲೆ ಏರಿಸಿ ಜನರ ಮೇಲೆ ಆರ್ಥಿಕ ಹೋರೆ ಏರಿಸಿದೆ. ತಕ್ಷಣವೇ ಬೆಲೆಇಳಿಸಬೇಕು. ಬೇರೆ ನಿಗಮಗಳಲ್ಲಿ ಮೀಸಲು ಇಟ್ಟಿರುವ ನಿಧಿಗಳನ್ನೂ ಕೂಡಾ ದುರ್ಬಳಕೆ ಮಾಡುತ್ತಿದೆ ಎಂದರು.

ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಜಿಲ್ಲಾ ಮಾಜಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ,ಬಿಜೆಪಿ ಗ್ರಾಮೀಣ ಅಧ್ಯಕ್ಷ ಚನ್ನಪ್ಪ ಮಳಗಿ ವಕೀಲ,ರಾಜ್ಯ ಎಸ್.ಟಿ ಮೋರ್ಚಾ ಸದಸ್ಯ ವೀರಭದ್ರಪ್ಪ ನಾಯಕ ವಡರಟ್ಟಿ,ಮುಖಂಡ ಮನೋಹರಗೌಡ ಹೇರೂರ ಮಾತನಾಡಿದರು.

ಮಹಿಳಾ ಮುಖಂಡರಾದ ಲಲಿತ ಬೋವಿ ಮಾತನಾಡಿ ಶಾಸಕ ಗಾಲಿ ಜನಾರ್ಧನರೆಡ್ಡಿ ವಿರುದ್ದ ಮಾತನಾಡುವ ನೈತಿಕತೆ ಸಚಿವ ಶೀವರಾಜ ತಂಗಡಗಿ ಇಲ್ಲ.ಮುಂಬರುವ ದಿನದಲ್ಲಿ ತಂಗಡಗಿಯವರು ಎಚ್ಚರಿದಿಂದ ಇರಬೇಕು ಎಂದರು.

ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಚನ್ನಪ್ಪ ಮಳಗಿ ವಕೀಲರು, ರಾಜ್ಯ ಎಸ್.ಟಿ ಮೋರ್ಚಾ ಸದಸ್ಯ ವೀರಭದ್ರಪ್ಪ ನಾಯಕ ವಡರಟ್ಟಿ,ಹನುಮಂತಪ್ಪ ನಾಯಕ ಜೋಗದ, ಜಿಪಂ ಮಾಜಿ ಸದಸ್ಯ ಸಿದ್ದರಾಮ ಸ್ವಾಮಿ ನಗರಸಭೆ ಸದಸ್ಯರಾದ ನವೀನ ಮಾಲಿಪಾಟೀಲ, ಪರಶುರಾಮ ಮಡ್ಡೇರ, ವಾಸುದೇವ ನವಲಿ, ರಮೇಶ ಚೌಡ್ಕಿ ಅಜಯ್ ಬಿಚ್ಚಾಲಿ, ಮೌಲಾಸಾಬ, ಮುಖಂಡರಾದ ಯಮನೂರ ಚೌಡ್ಕಿ, ಆನಂದಗೌಡ, ಸಿದ್ಧರಾಮ ಸ್ವಾಮಿ, ರುದ್ರೇಶ ಡ್ಯಾಗಿ ವೀರೇಶ ಬಲಕುಂದಿ, ರಾಚಪ್ಪ ಸಿದ್ದಾಪುರ, ದುರುಗಪ್ಪ ದಳಪತಿ ನಾಯಕ, ಮಲ್ಲೇಶಪ್ಪ ಹೊಸಮಲಿ, ಚೌಡ್ಕಿ ಹನುಮಂತಪ್ಪ, ಚಂದ್ರು ಹಿರೂರು, ಶ್ರೀಮತಿ ರೇಖಾರಾಯಬಾಗಿ, ಶ್ರೀಮತಿ ಶೋಭಾ ರಾಯ್ಜರ್, ಶ್ರೀಮತಿ ಭಾರತಿ ಆಗಲೂರು, ಶ್ರೀಮತಿ ರಾಜೇಶ್ವರಿ ಸುರೇಶ, ಪಂಪಣ್ಣ ನಾಯಕ, ಹುಸೇನಪ್ಪ ಸ್ವಾಮಿ ಮಾದಿಗ, ಶಿವಪ್ಪ ಮಾದಿಗ, ರುದ್ರೇಶ ಡ್ಯಾಗಿ, ಪ್ರಧಾನ ಕಾರ್ಯದರ್ಶಿಗಳಾದ ಸಂಗಯ್ಯ ಸ್ವಾಮಿ, ಶ್ರೀನಿವಾಸ ಧೂಳಾ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!