WhatsApp Image 2024-06-21 at 4.45.40 PM

ಬಳ್ಳಾರಿಯ ನೂತನ ಮೇಯರ್ ಮತ್ತು ಉಪಮೇಯರಗಳ ಆಯ್ಕೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 21- ಅಂತೂ ಇಂತೂ ಬಳ್ಳಾರಿಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಇಂದು ಮುಗಿಯಿತು. ಮೇಯರ್ ಆಗಿ ಕಾಂಗ್ರೆಸ್ ಪಕ್ಷದ 18ನೇ ವಾರ್ಡಿನ ಕಾರ್ಪೊರೇಟರ್ ಮುಲ್ಲಂಗಿ ನಂದೀಶ್, ಉಪಮೇಯರಾಗಿ 26ನೇ ವಾರ್ಡಿನ ಡಿ ಸುಖಂ ಅವರು ಎಂದು ಮಹಾನಗರ ಪಾಲಿಕೆಯಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತ, ಕೃಷ್ಣ ಭಾಜಪೇಯಿ ಅವರು ಸರ್ಕಾರದ ಆದೇಶ ಅಂತೆ ಚುನಾವಣೆಯಲ್ಲಿ ನಡೆಸಿ ಆಯ್ಕೆ ಬಗ್ಗೆ ಘೋಷಣೆ ಮಾಡಿದರು. ದೇವಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ನಂದೀಶ್ ಅವರಿಗೆ 30 ಮತಗಳು ಬಂದರೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶ್ರೀನಿವಾಸ್ ಮೋದ್ಕಾರ್ ಅವರಿಗೆ 14 ಮತಗಳು ಬಂದಿದ್ದವು. ಅದೇ ರೀತಿ ಉಪಮೇಯದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಡಿ ಸುಕುಮಾರ್ ಅವರು 30 ಮತ ಪಡೆದರೆ ಬಿಜೆಪಿಯ ಚೇತನ ಅವರು 14 ಮತಪಡೆದರು.

ಮತದಾನದಲ್ಲಿ ಪಾಲಿಕೆ ಸದಸ್ಯರು ರಾಜ್ಯಸಭಾ ಸದಸ್ಯ ಡಾಕ್ಟರ್ ಸೈಯದ್ ನಾಸಿರ್ ಹುಸೇನ್, ಲೋಕಸಭಾ ಸದಸ್ಯ ಈ ತುಕಾರಾಂ, ಗ್ರಾಮೀಣ ಶಾಸಕ ಬಿ ನಾಗೇಂದ್ರ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ ಎಂ ಸತೀಶ್ ಅವರುಗಳು ಪಾಲ್ಗೊಂಡಿದ್ದರು. ಚುನಾವಣೆ ನಂತರ ಮಿಡಿಯ ಜೊತೆಗೆ ಮಾತನಾಡಿದ ಕಾಂಗ್ರೆಸ್ನ ಮಾಜಿ ಸಚಿವ ಗ್ರಾಮೀಣ ಶಾಸಕ ಬಿ ನಾಗೇಂದ್ರ, ನಮ್ಮಲ್ಲಿ ಯಾವುದೇ ಭಿನ್ನಮತ, ಅಭಿಪ್ರಾಯ ಭೇದ ಇಲ್ಲದಿರುವುದರಿಂದ ಚುನಾವಣೆ ಸಲುವತರವಾಗಿದೆ ಎಂದು. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!