9be928d2-3327-47c3-9b7c-66ceb0f3a41a

ಗಿಣಿಗೇರಾ : ಅಮೃತ ಸರೋವರ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 22- ಅಂತರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯತಿ ಹಾಗೂ ಕೆರೆ ಅಭಿವದ್ಧಿ ಸಮಿತಿ ವತಿಯಿಂದ ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಜೂನ್21ರಂದು ಯೋಗಭ್ಯಾಸ ಮತ್ತು ಪ್ರಾಣಾಯಮ ಅಭ್ಯಾಸ ನಡೆಯಿತು.

ಕಾರ್ಯಕ್ರಮದ ಕುರಿತು ತಾಲೂಕ ಪಂಚಾಯತಿಯ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ ಅವರು ಮಾತನಾಡಿ, ಪ್ರಸ್ತುತ ದಿನದಲ್ಲಿ ಆಹಾರ ಪದ್ಧತಿ ಬಹು ಮುಖ್ಯವಾದದ್ದು. ಆಹಾರ ಪದ್ದತಿಯನ್ನು ನಾವು ಬದಲಾವಣೆ ಮಾಡಿಕೊಳ್ಳುವದು ಸೂಕ್ತ. ಬದಲಾವಣೆ ಮಾಡಿಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವದು ಖಂಡಿತವಾಗಿದೆ. ಆಧುನಿಕ ಜಗತ್ತಿನಲ್ಲಿರುವ ನಾವುಗಳು ಪ್ರತಿನಿತ್ಯ ಬದುಕಿನಲ್ಲಿ ಒತ್ತಡ ಜೀವನ ಸಾಗಿಸುತ್ತಿದ್ದೆ. ಈ ಹಿನ್ನೆಲೆಯಲ್ಲಿ ಪ್ರತಿ ದಿನ ನಾವುಗಳು ಆರೋಗ್ಯದಿಂದ ಇರಬೇಕಾದರೆ, ದಿನದ 24 ಗಂಟೆಗಳಲ್ಲಿ ಒಂದು ಗಂಟೆಯಾದರು ಯೋಗ ಮತ್ತು ಪ್ರಾಣಾಯಮವನ್ನು ರೂಢಿಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಋಷಿಮುನಿಗಳು ಯೋಗ ಮತ್ತು ಪ್ರಾಣಾಯಮದಿಂದ ಆರೋಗ್ಯವನ್ನು ಗೆಲ್ಲುವದಕ್ಕೆ ಸಾಧ್ಯ ಎಂಬುದನ್ನು ಮನಗಂಡು ಸಾಧನೆಗೈದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಗ್ರಾಮದ ಕೆರೆಗಳು ಜೀವಂತ ಆಗರಗಳು ಎನ್ನುವ ಪದಕ್ಕೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಅಮೃತ ಸರೋವರ ದಡದಲ್ಲಿ ಯೋಗ ಮತ್ತು ಪ್ರಾಣಾಯಮ ಶಿಬಿರಗಳನ್ನು ಆಯೋಜಿಸಲು ನಿರ್ದೇಶನ ನೀಡಿರುವದು ಕೆರೆಯ ಮಹತ್ವಕ್ಕೆ ಆದ್ಯತೆ ನೀಡಿದೆ. ಯೋಗ ಮತ್ತು ಪ್ರಾಣಾಯಮಕ್ಕೆ ಯಾವುದೇ ರೀತಿಯ ವಯಸ್ಸಿನ ಇತಿ ಮಿತಿ ಇರುವದಿಲ್ಲ. ಆದರೆ ಕ್ರಮಬದ್ದವಾಗಿ ಯೋಗಭ್ಯಾಸ ರೂಢಿಸಿಕೊಳ್ಳಬೇಕೆಂದರು. ಹಿರಿಯರು ಯೋಗಕ್ರಮಬದ್ದವಾದ ಆಹಾರದಿಂದ ಕ್ರಮಬದ್ದವಾದ ಜೀವನ ಸಾಗಿಸಲು ಸಾಧ್ಯವೆಂದರು.

ಕಾಮನೂರು ಆಯುಷ್ ಆಸ್ಪತ್ರೆಯ ಯೋಗ ವಿಭಾಗದ ಡಾ||ಕಳಕೇಶ್ ಮಾತನಾಡಿ ಯೋಗದಿಂದ ಅನೇಕ ಮಹತ್ ಸಾಧನೆಗಳನ್ನು ಮಾಡಬಹುದಾಗಿದೆ. ಮನಸ್ಸು ಮತ್ತು ದೇಹ ಆರೋಗ್ಯ ಇರಬೇಕಾದಲ್ಲಿ ನಾವುಗಳು ಕ್ರಮಬದ್ದವಾಗಿ ಯೋಗಭ್ಯಾಸ ರೂಢಿಸಿಕೊಂಡು ನಮ್ಮ ಮನೆಯಲ್ಲಿರುವ ಸದಸ್ಯರಿಗೆ, ಸುತ್ತ-ಮುತ್ತಲಿನವರಿಗೆ ಅದರ ಮಹತ್ವ ಬಗ್ಗೆ ತಿಳಿ ಹೇಳಬೇಕೆಂದರು.

ಕಾರ್ಯಕ್ರಮದಲ್ಲಿ ಯೋಗದ ಅಭ್ಯಾಸ ಮತ್ತು ಪ್ರಾಣಾಯಮ ಭಂಗಿಗಳನ್ನು ಡಾ ಕಳಕೇಶ್, ದೈಹಿಕ ಶಿಕ್ಷಕರಾದ ಬಸನಗೌಡ, ಗೊವಿಂದಶೆಟ್ಟರ ಮಾಹಿತಿ ನೀಡಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುಳಾದೇವಿ ಹೂಗಾರ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಂಜಿತಾ ಚವ್ಹಾಣ್, ಉಪಾಧ್ಯಕ್ಷರಾದ ಮಂಜುನಾಥ ಪಾಟೀಲ್, ಗ್ರಾ.ಪಂ ಸದಸ್ಯರಾದ ಕರಿಯಪ್ಪ ಮೇಟಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುಳಾದೇವಿ ಹೂಗಾರ, ಮುಖಂಡರಾದ ನೀಲಪ್ಪ ಮೂರಮನಿ, ಗುರಪ್ಪ ಗುಡೇಕಾರ, ನೂರಸಾಬ ಹೊಸಮನಿ, ಶಂಕರಗೌಡ, ಮಲ್ಲಿಕಾರ್ಜುನ ಹಲಗೇರಿ, ಮಲ್ಲಿಕಾರ್ಜುನ ಕಾಸನಕಂಡಿ, ಶಂಕರ ಲಮಾಣಿ, ಹನಮೇಶ್ ನಾಯಕ, ದಾವಲ್ ಮಲ್ಲಿಕ್, ಕೆರೆ ಅಭಿವೃದ್ದಿ ಸದಸ್ಯರಾದ ಅನಿಲ್ ಜಾನಾ, ಹರ್ಷ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಂಜುನಾಥ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಈಶ್ವರಯ್ಯ ಪೋಲಿಸ್ ಪಾಟೀಲ್, ರಾಜಾ, ರಾಜಾಭಕ್ಷಿ, ಆಶಾ ಕಾರ್ಯಕರ್ತರು, ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!