2

ಸಂಗೀತ ಮತ್ತು ಯೋಗ  ನೆಮ್ಮದಿಯ ಜೀವನಕ್ಕೆ  ಅವಶ್ಯಕ : ಈ. ಧನರಾಜ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 25- ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠವು ಇತ್ತೀಚಿಗೆ ಹಮ್ಮಿಕೊಂಡಿರುವಂತಹ ಅಂತರಾಷ್ಟ್ರೀಯ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನದ ಅಂಗವಾಗಿ ರಾಗಾನುಯೋಗವೆಂಬ ಕಾರ್ಯಕ್ರಮ ಗಂಗಾವತಿಯಲ್ಲಿ ಶ್ರೀ ಮಲ್ಲಿಕಾರ್ಜುನ್ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ ಶ್ರೀ ಈ. ಧನರಾಜ್ ಅವರು ಸಂಗೀತ ಮತ್ತು ಯೋಗ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕೆ ಅತಿ ಅವಶ್ಯಕವಾಗಿ ಬೇಕು ಅದರಲ್ಲೂ ಪ್ರಸ್ತುತ ಕಾಲಮಾನದಲ್ಲಿ ಇವು ಎರಡರ ಮೊರೆ ಹೋದರೆ ಮಾತ್ರ ಒಳ್ಳೆಯದು ಎಂದರು.

ಮುಖ್ಯ ಅತಿಥಿಗಳಾದ ಹಿರಿಯ ತಬಲವಾದ ಕರಾದ ಶ್ರೀ ರಾಜಾಸಾಬ್ ಮುದ್ದಾ ಬಳ್ಳಿಯವರು ಸಂಗೀತ ಕಲಿಯದೆ ಇದ್ದರೂ ಸಹ ಒಳ್ಳೆಯ ಸಂಗೀತ ಕೇಳಿದರೆ ಆರೋಗ್ಯಕ್ಕೂ ಮನಸ್ಸಿಗೂ ಒಳ್ಳೆಯ ದು ಎಂದರು. ಯೋಗದ ಕುರಿತಾದ ಉಪನ್ಯಾಸಕರಾಗಿ ಮಾತನಾಡಿದ ಯೋಗ ಗುರು ಶ್ರೀ ಶಾಂತವೀರ ಸ್ವಾಮಿ ಗಂಧದ ಮಠರವರು ಮನಸ್ಸು ಜಾಗೃತವಾಗಲಿಕ್ಕೆ ಸಂಗೀತ ಮತ್ತು ಅಧ್ಯಾತ್ಮಗಳು ಬೇಕೇ ಬೇಕು ದೇಹದ ಶುದ್ಧತೆಗೆ ಯೋಗ ಸಾಧನೆ ಬೇಕು ಯೋಗದಲ್ಲಿ ಅನೇಕ ಪ್ರಕಾರಗಳಿವೆ ಅದರಲ್ಲಿ ಯಾವುದಾದರೂ ಒಂದನ್ನು ಅನುಸರಿಸಿ ಸಾಧಿಸಿದರೆ ಒಳ್ಳೆಯದು ದೇಹ ಮತ್ತು ಮನಸ್ಸು ಸರಿಯಾಗಿ ಇದ್ದರೆ ಸುಖ ಜೀವನ ಸಾಗಿಸಬಹುದೆಂದರು.

ಅಧ್ಯಕ್ಷರಾಗಿ ಆಗಮಿಸಿದ ಶ್ರೀಮಠದ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಸಿದ್ದನಗೌಡರು ನ್ಯಾಯವಾದಿಗಳು ಕೇವಲ ವೇದಿಕೆಯಲ್ಲಿ ನಿಂತು ಮಾತನಾಡಿದರೆ ಅಥವಾ ಕಾರ್ಯಕ್ರಮ ಕೇಳಿ ಹೋದರೆ ಸಾಲದು ಅದನ್ನು ದಿನನಿತ್ಯ ಆಚರಣೆಯಲ್ಲಿ ತಂದಾಗ ಸಂಘಟಕರ ಪರಿಶ್ರಮ ಸಾರ್ಥಕವಾಗುತ್ತದೆ ಇದಕ್ಕೆ ಒಳ್ಳೆಯ ಸಂಸ್ಕಾರವೇ ಬೇಕಾಗುತ್ತದೆ ಇಂತಹ ಅನೇಕ ಯೋಜನೆಗಳನ್ನು ಶ್ರೀ ಗವಿಮಠ ನಮ್ಮ ಭಾಗದಲ್ಲಿ ಹಮ್ಮಿಕೊಂಡು ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.

ರಾಗ ಪ್ರಸ್ತುತಿಯಲ್ಲಿ ಶ್ರೀಮತಿ ಎಸ್ ಪುಷ್ಪಾವತಿ ಹೊಸಪೇಟೆಯವರು ರಾಗ ಜೋಗ್ ಮಧ್ಯ ಲಯ ತೀನ್ ತಾಲ್ ಚೀಸ್ ಪ್ರಸ್ತುತಪಡಿಸಿದರು. ಯುವ ಗಾಯಕ ಶ್ರೀಕುಮಾರ್ ಪಂಚಾಕ್ಷರಿ ಬೊಮ್ಮಲಾಪುರ ಅನೇಕ ಗೀತೆಗಳನ್ನು ಹಾಡಿದರು.

ಸಹವಾಧಕರಾಗಿ ಶ್ರೀ ವಿರೇಶ್ ಹಿಟ್ನಾಳ್ ಹಾರ್ಮೋನಿಯಂ, ಶ್ರೀ ಮಹಮ್ಮದ್ ರಿಜ್ವಾನ್ ತಬಲ, ಶ್ರೀರಾಮು ಕಂಪ್ಲಿ ಕೀಬೋರ್ಡ್, ಶ್ರೀ ಶಿವಕುಮಾರ್ ಗೆಜ್ಜೆ ತಾಳಸಾತ್ ನೀಡಿದರು.

ಕಾರ್ಯಕ್ರಮದ ಪ್ರಾಸ್ತವಿಕ ಹಾಗೂ ಸ್ವಾಗತವನ್ನು ವಿದ್ಯಾಪೀಠದ ಕಲಾವಿದೆ ರಮೀಜಾ.ಬಿ ನಡೆಸಿದರು.

ಸ್ಥಳೀಯ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ಭಕ್ತಿ ಸಂಗೀತ ಹಾಡಿದರು. ಕಾರ್ಯಕ್ರಮವನ್ನು ವೈಷ್ಣವಿ ಕಮ್ಮಾರ್ ಹಾಗೂ ಸನ್ನಿಧಿ ಮ್ಯಾಗಳಮಠ ನಿರೂಪಿಸಿದರು.

ಶ್ರೀಮಠದ ಅನೇಕ ಭಕ್ತಾದಿಗಳು ಹಾಗೂ ಸಂಗೀತ ಆಸಕ್ತರು ಹಾಗೂ ಯೋಗ ಸಾಧಕರು ಪಾಲ್ಗೊಂಡಿದ್ದರು ಎಂದು ಸಂಗೀತ ಶಿಕ್ಷಕರಾದ ಶ್ರೀ ವೀರಶ್ ಹಿಟ್ನಾಳರವರು ವರದಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!