ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪಗೆ ಕನಕ ರತ್ನ ಪ್ರಶಸ್ತಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 1- ಬಳ್ಳಾರಿ ಮಹಾನಗರದ 17 ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಕುರುಬರ ಸಂಘದ ವಿಶೇಷ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಗೌರವಿಸಿದರು.
ಈ ಸಮಾರಂಭದಲ್ಲಿ ನಡೆದ ಕುರುಬರು ಸಮುದಾಯದ ಏಳಿಗೆಗಾಗಿ ಮತ್ತು ನಾಡಿನ ಜ್ವಲವಂತ ಸಮಸ್ಯೆಗಳಿಗೆ ಹೋರಾಟ ಮಾಡಿದ ಮೂಲಕ ನ್ಯಾಯವನ್ನು ಒದಗಿಸಿ ಕೊಡುವಲ್ಲಿ ಯಶಸ್ವಿಯಾಗಿ ಪ್ರತಿಯೊಬ್ಬರಿಗೆ ಹಿರಿಯ ಸಹೋದರರಾಗಿ ಸಮಾಜದ ಸೇವೆ ಸಲ್ಲಿಸುತ್ತಿರುವ ಸ್ನೇಹ ಜೀವಿ ಸಿರುಗುಪ್ಪ ನಗರಸಭಾ ಮಾಜಿ ಅಧ್ಯಕ್ಷರಾಗಿ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಾಲೂಕ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷರಾದ ಎನ್ ಕರಿಬಸಪ್ಪ ಅವರು ನಿಸ್ವಾರ್ಥದಿಂದ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಕನಕ ರತ್ನ ಪ್ರಶಸ್ತಿ ಗೌರವಿಸಿ ಸನ್ಮಾನಿಸಿ ಅಭಿನಂದನೆಗಳೊಂದಿಗೆ ಶುಭ ಹಾರೈಸಿದರು.
