WhatsApp Image 2024-07-02 at 4.33.02 PM

ವಚನ ಸಾಹಿತ್ಯ ಉಳಿಸಲು ಹಳಕಟ್ಟಿ ಅವರ ಐತಿಹಾಸಿಕ ದಾಖಲೆ : ಹೆಚ್ ವಿಶ್ವನಾಥ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 2- 12ನೇ ಶತಮಾನದಲ್ಲಿ ತಾಡೋಲೆಗಳಲ್ಲಿ ಬರೆಯಲ್ಪಟ್ಟಿದ್ದ ವಚನ ಸಾಹಿತ್ಯ ಕಲ್ಯಾಣ ಕ್ರಾಂತಿಯ ನಂತರ ಚಲ್ಲಾ ಪಿಲ್ಲಿ ಯಾದ ವಿಶ್ವಗುರು ಬಸವಣ್ಣನವರಂತಹ ನೂರಾರು ಶರಣರ ವಚನ ಸಾಹಿತ್ಯವನ್ನು ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದವರು ವಚನ ಪಿತಾ ಮಹಾ ಡಾ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಎಂದು ತಹಸಿಲ್ದಾರ್ ಹೆಚ್ ವಿಶ್ವನಾಥ್ ಅವರು ಹೇಳಿದರು.

ಸಿರುಗುಪ್ಪ ತಾಲೂಕು ಕಚೇರಿಯ ಕಾರ್ಯಾಲಯದಲ್ಲಿ ಕರ್ನಾಟಕ ಸರ್ಕಾರ ತಾಲೂಕ ಆಡಳಿತ ವಚನ ಸಾಹಿತ್ಯ ದಿನಾಚರಣೆ 145ನೇ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಅವರ ಜನ್ಮದಿನವನ್ನು ದೀಪ ಬೆಳಗಿಸಿ ಭಾವಚಿತ್ರಕ್ಕೆ ಹೂಮಾಲೆ ಪುಷ್ಪ ಅರ್ಪಿಸಿ ಗೌರವಿಸಿ ಸ್ಮರಿಸಿ ನಮನ ಸಲ್ಲಿಸಿ ಮಾತನಾಡುತ್ತಾ ಹಳಕಟ್ಟಿ ಅವರು ತಮ್ಮ ಜೀವಿತ ಅವಧಿಯ ಕೊನೆವರೆಗೂ ನಿರಂತರ 35 ವರ್ಷಗಳ ಕಾಲ ಮನೆ ಮಠಗಳಿಗೆ ತೆರಳಿ ತಾಡೋಲೇ ಗಳನ್ನು ಸಂಗ್ರಹಿಸಿ ಅದರಲ್ಲಿನ ಸಾಹಿತ್ಯವನ್ನು ಜನರಿಗೆ ತಲುಪಿಸಲು ಸ್ವತಹ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದರು ತಮ್ಮ ಪರಿಶ್ರಮದಿಂದ ವಿವಿಧ ಶರಣರ 10 ಸಾವಿರ ಕ್ಕಿಂತ ವಚನಗಳು ಸಂಗ್ರಹಿಸಿ ಪ್ರಕಟಿಸಿದ್ದು ಐತಿಹಾಸಿಕ ದಾಖಲೆ ಸ್ವಂತಕ್ಕೆ ಏನನ್ನು ಬಯಸದೆ ಸಮಾಜಕ್ಕೆ ಸರ್ವಸ್ವವನ್ನು ಧಾರೆ ಎರೆದ ಹಳಕಟ್ಟಿಯವರು ಪತ್ರಿಕೋದ್ಯಮ ದಿನಗಳಲ್ಲಿ ಬಡತನವನ್ನು ಮೈತುಂಬ ಹೊತ್ತುಕೊಂಡ ಅವರ ವಚನ ಸಾಹಿತ್ಯಕ್ಕೆ ಇವರ ಜೀವನ ಸಮರ್ಪಿತ ವಚನ ಸಾಹಿತ್ಯಗಳ ಬೆಳಕು ಅಪಾರ ಎಂದರು.

ರಾಷ್ಟ್ರೀಯ ಸಾಕ್ಷರತಾ ಸಮಾಜ ಸಾಹಿತ್ಯ ಶಿಕ್ಷಣ ಪ್ರೇಮಿ ಎ ಅಬ್ದುಲ್ ನಬಿ ಅವರು ಮಾತನಾಡಿ ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸಿ ಸರ್ವಜನರ ಕಲ್ಯಾಣದೆಡೆಗೆ ಮುಂದೆ ಸಾಗಬೇಕು ಪ್ರಖ್ಯಾತಿ ವಚನ ಪಿತಾಮಹ ಸಾಹಿತಿ ವಕೀಲರು ರಾಜಕಾರಣಿ ಶಿಕ್ಷಣ ಪ್ರೇಮಿ ಧಾರ್ಮಿಕ ಚಟುವಟಿಕೆಗಳ ಡಾ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಹಲವಾರು ಲೇಖನಗಳನ್ನು ಬರೆದು ವಚನ ಸಾಹಿತ್ಯ ಸಂರಕ್ಷಕರಾಗಿ ನಾಡಿನಗಮನ ಸೆಳೆದಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಶಿರಸ್ತೆದಾರ್ ಸಿದ್ದಾರ್ಥ ಕಾರಂಜಿ ಮಹಾಂತೇಶ ಶೇಖರ್ ಗುರುದೇಶ್ ಶೇಕ್ಷಾವಲಿ ಕಂದಾಯ ಪರಿವೀಕ್ಷಕ ಮಂಜುನಾಥ ತುಷಾರ್ ಸಮಾಜ ಸೇವಕ ಮೊಹಮ್ಮದ್ ನೌಶಾದ್ ಅಲಿ ತಾಲೂಕ ಕಚೇರಿಯ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!