ತೆಕ್ಕಲಕೋಟೆಯ ಬೂದಿ ದಿಬ್ಬಕ್ಕೆ ರಕ್ಷಣಾ ಬೇಲಿ ಅಳವಡಿಸಿ : ಹೆಚ್ ವಿಶ್ವನಾಥ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 3- ತಾಲೂಕಿನ ತೆಕ್ಕಲಕೋಟೆದಲ್ಲಿರುವ ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಎಚ್ ವಿಶ್ವನಾಥ ಅವರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.
ವಿಶ್ವನಾಥ ಮಾತನಾಡಿ, ತೆಕ್ಕಲಕೋಟೆ ವ್ಯಾಪ್ತಿಗೆ ಬರುವ ಬೂದಿ ದಿಬ್ಬ ಗುಡ್ಡ ಕ್ರಿ.ಪೂ. ದಲ್ಲಿ ನಿರ್ಮಾಣವಾಗಿದೆ ಬಳ್ಳಾರಿ ಜಿಲ್ಲೆಯಲ್ಲಿ ಎರಡು ಕಡೆ ಮಾತ್ರ ಇಂತಹ ಗುಡ್ಡಗಳಿವೆ ಮತ್ತೊಂದು ಕುಡಿತಿನಿ ಮತ್ತು ತೋರಣಗಲ್ಲು ನಡುವೆ ಬರುವ ಗುಡ್ಡದ ಭಾಗದಲ್ಲಿ ದೊಡ್ಡದಾದ ಬೂದಿ, ದಿಬ್ಬವಿದೆ ಕೆಲ ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಬೂದಿ ದಿಬ್ಬದ ಗುಡ್ಡಕ್ಕೆ ರಕ್ಷಣಾ ಬೇಲಿಯನ್ನು ಅಳವಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇಲ್ಲಿಗೆ ಬಂದು ವೀಕ್ಷಿಸಿದ್ದು ತೆಕ್ಕಲಕೋಟೆ ಪಟ್ಟಣ ಪಂಚಾಯತಿ ಇದಕ್ಕೆ ರಕ್ಷಣಾ ಬೇಲಿ ಅಳವಡಿಸಬೇಕು ಸ್ಥಳದ ಸರ್ವೆ ನಂಬರ್ ಸೇರಿ ಅಗತ್ಯ ದಾಖಲೆಗಳನ್ನು ನೀಡಬೇಕು ಎಂದು ಕಂದಾಯ ಅಧಿಕಾರಿ ಸುರೇಶ್ ಬಾಬು ಅವರಿಗೆ ಸೂಚಿಸಲಾಗಿದೆ ನಂತರ ಈ ಸ್ಥಳವನ್ನು ಪ್ರಾಚ್ಯ ವಸ್ತು ಇಲಾಖೆಗೆ ಸೇರಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.
ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಪರಶುರಾಮ ಜೆ ಇ ಸುನಂದಾ ಪಟ್ಟಣ ಪಂಚಾಯತ್ ಸದಸ್ಯರಾದ ಎಸ್ ಸಿದ್ದೇಶ ನಸರುದ್ದೀನ್ ಖಾದರ್ ಭಾಷಾ ಮುಖಂಡರಾದ ಎಸ್ ನರೇಂದ್ರ ಸಿಂಹ ಎಚ್ ರಾಮನಾಥ ಸಂಶೋಧನಾ ವಿದ್ಯಾರ್ಥಿ ಕಾಳಸಿದ್ದ ಇದ್ದರು.
