IMG20240707111101

ಕೊರಡಕೇರಾ ಜಿನುಗು‌ಕೆರೆ ಅವಾಂತರ: ಸಂಕಷ್ಟದಲ್ಲಿ ರೈತ, ದಿಕ್ಕುತಪ್ಪಿಸುತ್ತಿರುವ ಕುಷ್ಟಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು

ತಾಲೂಕಿನ ಕೊರಡಕೇರಾ ವ್ಯಾಪ್ತಿಯಲ್ಲಿ ಬರುವ ರೈತ ರಾಜಶೇಖರಗೌಡ ಗೊರೆಬಾಳ ಎಂಬುವವರ ಸುಮಾರು ೩೮ ಎಕರೆ ಜಮೀನು ಕೊರಕೇರಾ ಜಿನುಗು ಕೆರೆ ಇಲ್ಲಿನ ಸಣ್ಣ ನೀರಾವರಿ ಇಲಾಖೆಯ ಅವೈಜ್ಞಾನಿಕತೆಯಿಂದ ಜಮೀನು ಜಲಾವೃತವಾಗಿದ್ದು ಇತ್ತ ಹೂಳಲು ಇಲ್ಲ ಅತ್ತ ಮಾರಲೂ ಆಗದ ಗಂಭೀರ ಸ್ಥಿತಿ‌ಎದುರಾಗಿದೆ ಎಂದು ರೈತ ಅಲವತ್ತುಕೊಂಡಿದ್ದಾರೆ.‌

ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ  ವಕೀಲರಾದ ಮಹಾಂತೇಶ ಪರಪ್ಪ ರೇವಡಿ ಮಾತನಾಡಿ, ಲಿಂಗಸ್ಗೂರ ಮೂಲದ ರೈತ ರಾಜಶೇಖರಗೌಡ ಗೊರೆಬಾಳ ಅವರು ೨೦೦೯-೧೦ ಇಸ್ವಿಯಲ್ಲಿ ಅವರ ತಾಯಿ‌ ಹಾಗೂ ಸೋದರಮಾವನ ಹೆಸರಲ್ಲಿ ಕೊರಡಕೇರಾ ಗ್ರಾಮದಲ್ಲಿ ಸರ್ವೇ ನಂಬರ ೩೧/೧ಅ & ಆ ಕ್ಷೇತ್ರ ಸುಮಾರು ೩೮ ಎಕರೆ ಜಮೀನು ಖರೀದಿ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದಾಳಿಂಬೆ ಹಾಕಲಾಗಿತ್ತು. ಕೆರೆ ನಿರ್ಮಾಣ ಸಂದರ್ಭದಲ್ಲಿ ಭೂಸ್ವಾಧಿನವನ್ನೂ ಸಹ ಅಕ್ಕಪಕ್ಕದಲ್ಲಿ ಮಾಡಲಾಗಿದೆ. ಆದರೆ ನಮ್ಮ ಸದರಿ ಜಮೀನು ಕೆರೆಗಿಂತ ಕೆಳಗೆ ಇದ್ದು ಸಂಪೂರ್ಣವಾಗಿ ಜಲಾವೃತವಾಗುತ್ತದೆ ಎಂಬ ಪ್ರಾಥಮಿಕ ವರದಿ ಇದ್ದರೂ ಅಂದು ಎಂ.ಐ ಇಲಾಖೆಯಿಂದ ಅವೈಜ್ಞಾನಿಕವಾಗಿ ನಿರ್ಮಾಣವಾದ ಜಿನುಗು ಕೆರೆಯಿಂದಾಗಿ ಅಂದು ನಮ್ಮ‌ದಾಳಿಂಬೆ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿ ಭರಿಸಲಾಗದ ನಷ್ಟ ಉಂಟಾಗಿದೆ. ಮಳೆಗಾಲ ಬಂದರೆ ಸಾಕು ಸಣ್ಣ ಮಳೆಯಾದರೂ ಕೆರೆ ಒಡ್ಡು ಒಡೆದು ಜಮೀನು ಜಲಾವೃತವಾಗಿ‌ ಬೆಳೆ ನಾಶವಾಗಿ ಹೋಗಿದೆ. ಅಂದಿನಿಂದಲೂ ಇಲಾಖೆಗೆ ಸಾಕಷ್ಟು ಬಾರಿ ಪತ್ರ ವ್ಯವಹಾರ ಮಾಡಿ ಸಾಕ್ಷಿ ಸಮೇತವಾಗಿ‌ ಎಲ್ಲ ರೀತಿಯಿಂದಲೂ ತಿಳಿಸಿದರು ಸಹ ಯಾವುದೇ‌ ಪ್ರಯೋಜನವಾಗದೇ ಪ್ರಕರಣ ಕೋರ್ಟ ಮೆಟ್ಟಿಲೇರಿದ್ದು ಹೈಕೋರ್ಟ ನಿಂದಲೂ ಸಹ ಸಣ್ಣ ನೀರಾವರಿ‌ ಇಲಾಖೆಗೆ ನಷ್ಟ ಪರಿಹಾರ ಕೊಡಲು ಅಥವಾ ಈ‌ ಜಮೀನಿಗೆ ಬದಲಿ ಜಮೀನು ನೀಡುವಂತೆ ಅಥವಾ ಕೆರೆ ತಡೆಗೋಡೆ ಸುಸಜ್ಜಿತವಾಗಿ ನಿರ್ಮಿಸಿ ಸದರಿ ರೈತರ ಹೊಲಕ್ಕೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಲು ಆದೇಶ ಮಾಡಿದ್ದರೂ ಸಹಿತ‌, ಮತ್ತೆ ಇಲಾಖೆಗೆ ಪರಿಶೀಲಿಸಲು ತಿಳಿಸಿ‌ದಾಗ ಇಲಾಖೆ ಅಧಿಕಾರಿಗಳು ತಪ್ಪು ವರದಿ ನೀಡಿ ಕೋರ್ಟ ಗೂ ಸಹ ದಾರಿ ತಪ್ಪಿಸುವ ಕೆಲಸ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ಈಗ ನಮಗೆ ಹೊಲ‌ಬಿತ್ತನೆ‌ ಮಾಡಿ ಉಣ್ಣಲೂ ಆಗದೇ ಇತ್ತ ಮಾರಲು ಆಗದೇ, ಕಡೇ ಪಕ್ಷ ಸರಕಾರವೇ ಕೆರೆಗೆ ಭೂಸ್ವಾಧೀನ ಮಾಡಿಕೊಳ್ಳುವಂತೆ‌ ಕೇಳಿಕೊಂಡರೂ ಪ್ರಯೋಜನವಾಗಿಲ್ಲ.‌ ಇದರಿಂದ ನಮಗೆ ಅನ್ಯಾಯವಾಗಿದ್ದು ಇಂದು ಜಮೀನು ಖರೀದಿಸಿದ ರೈತ ಸಾಲ ಬಾಧೆಯಿಂದ ‌ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾನೆ. ಆದರೂ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಏನು‌ಮಾಡಬೇಕೆಂದು ತಿಳಿಯದಾಗಿದೆ‌. 

ನಮಗೆ ಸರಕಾರದ ನಿಯಮಾವಳಿಯಂತೆ ಭೂಸ್ವಾಧಿನ ಮಾಡಿಕೊಂಡು ನಮಗೆ ಪರಿಹಾರ ನೀಡಬೇಕು, ಕಳೆದ ಹತ್ತು ವರ್ಷದ ಹಿಂದೆ ಸಂಪೂರ್ಣ ನಷ್ಟ ಅನುಭವಿಸಿದ ರೈತನಿಗೆ ೨೦೦೯ ರಿಂದ ಇಲ್ಲಿಯವರೆಗೆ ಬೆಳೆನಷ್ಟ ಪರಿಹಾರ ತುಂಬಿಕೊಡಬೇಕು ಅಥವಾ ನಮಗೆ ಅದರ ಬದಲು ಹೈಕೋರ್ಟ ಆದೇಶದಂತೆ ಸರಕಾರದಿಂದ ಬದಲಿ ಜಮೀನು ಕೊಡುವಂತೆ ಎಂದು ಗೋಗರೆದರು. ನ್ಯಾಯಕ್ಕಾಗಿ ಮುಂದೆ ಸುಪ್ರೀಂ ಕೋರ್ಟ ಮೊರೆ ಹೋಗಿ ದಾವಾ ಹೂಡಲಾಗುವುದು ಎಂದರು. 

ಪ್ರಕರಣದಲ್ಲಿ ರಾಜಕೀಯ ತಿರುವು: 

ಇದೇ ಜಮೀನಿಗೆ ಸಂಬಂದಿಸಿದಂತೆ ಹಾಲಿ‌ಶಾಸಕರ‌ ಹೆಸರು‌ ಹೇಳಿಕೊಂಡು ಅವರ ಹಿಂಬಾಲಕರು ಎನ್ನುವ ವ್ಯಕ್ತಿಯೊಬ್ಬ ರೈತ ರಾಜಶೇಖರನನ್ನು ಸಂಪರ್ಕಿಸಿ ಜಮೀನಿನ ವಿಷಯ ರಾಜಿ ಮಾಡಿಕೊಳ್ಳುವಂತೆ ಅಧಿಕಾರಿಗಳು ಹೆಳಿದಂತೆ ಕೇಳು, ಇಲ್ಲವಾದಲ್ಲಿ ನಾವು ಹೇಳಿದ ವ್ಯಕ್ತಿ ಹೆಸರಲ್ಲಿ ಜಮೀನು ಮಾರಿಬಿಡು ನಿನಗೆ ಇಂತಿಷ್ಟು ಹಣ ಕೊಡುತ್ತೇವೆ ಎಂದಿದ್ದು ನಾವು ಒಪ್ಪಲಿಲ್ಲ. ಇದಕ್ಕೆ ಈ ಪ್ರಕರಣ ಬೀಸುವ ಕಲ್ಲಿನಂತೆ ಸುತ್ತುತ್ತಿದೆ ಇದರಲ್ಲಿ ಹಾಲಿ ಶಾಸಕ ದೊಡ್ಡನಗೌಡರ ಹೆಸರು ತಳುಕುಹಾಕಿಕೊಂಡಿದೆ ಎಂದು ಪರೋಕ್ಷವಾಗಿ ಶಂಕೆ ವ್ಯಕ್ತಪಡಿಸಿದರು. ಆದರೆ ಶಾಸಕರು ಈ ಬಗ್ಗೆ ಇದುವರೆಗೂ ನಮಗೆ ಈ ಬಗ್ಗೆ ಸಂಪರ್ಕಿಸಿಲ್ಲ‌ ಎಂದು ಸ್ಪಷ್ಟನೆ ನೀಡಿದರು. 

ತಡೆಗೋಡೆ ನಿರ್ಮಿಸಲು ೪೦ ಲಕ್ಷ ಬಿಲ್‌ಎತ್ತುವಳಿ!!

ಇದೇ ಜಿನುಗು ಕೆರೆಯಲ್ಲಿ ಸದರಿ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಜಮೀನುಗಳಿಗೆ‌ನೀರು ನುಗ್ಗದಂತೆ ತಡೆಯಲು ತಡೆಗೋಡೆ‌ ನಿರ್ಮಾಣ ಮಾಡಿದ ಸಣ್ಣ ನೀರಾವರಿ ಇಲಾಖೆ ಕಳಪೆ ಕಾಮಗಾರಿ ಮಾಡಿದ್ದಲ್ಲದೇ ಬಹುತೇಕ ಭೋಗಸ್ ಕಾಮಗಾರಿ ಮಾಡಿ ಸುಮಾರು ೪೦ ಲಕ್ಷ ಬಿಲ್ ಎತ್ತುವಳಿ ಮಾಡಿದೆ ಎಂದು ಆರೋಪಿಸಿದರು. 

ಈ ಸಂದರ್ಭದಲ್ಲಿ ವಕೀಲರಾದ ಮಹಾಂತೇಶ ಪರಪ್ಪ ರೇವಡಿ, ರಾಜಶೇಖರಗೌಡ ಗೊರೆಬಾಳ ಇದ್ದರು.

Leave a Reply

Your email address will not be published. Required fields are marked *

error: Content is protected !!