WhatsApp Image 2024-07-09 at 4.31.04 PM

ನ್ಯಾಯಾಲಯದಿಂದ ರಾಯರ ಮಠದ ಪರ ತಿರ್ಪು : ಭಕ್ತರಿಂದ ಶ್ರೀಗಳ ಮೆರವಣಿಗೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 9- ಆನೆಗೋಂದಿ ನವವೃಂದಾವನ ಗಡ್ಡೆಯ ಉಚ್ಚ ನ್ಯಾಯಾಲಯದ ತಿರ್ಪು ರಾಯರಮಠದ ಪರವಾದ ತಿರ್ಪು ಸ್ವಾಗರ್ತಹವಾಗಿದೆ. ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪಿಠಾಧಿಪತಿ ಶ್ರೀ ಸುಬುದೆಂದ್ರತಿರ್ಥರು ಹೇಳಿದರು.

ತಾಲೂಕಿನ ಆನೆಗೋಂದಯ ನವ ವೃಂದಾವನ ಗಡ್ಡೆಯಲ್ಲಿ ಭಕ್ತ ರೋಂದಿಗೆ ವಿಜಯೋತ್ಸವ ಆಚರಿಸಿ ಮಾತನಾಡಿ ನವವೃಂದಾವನ ಗಡ್ಡೆಯ ನಮ್ಮದು ಎಂದು ಪರ ಮಠದವರು ನ್ಯಾಯಾಲಯದ ಲ್ಲಿ ದಾವೆ ಹೂಡಿ ರಾಯರ ಮಠದವರು ಬರಬಾರದು ಎಂದಿದ್ದರು.

ಉಚ್ಚ ನ್ಯಾಯಾಲಯವು ಗಂಗಾವತಿ ನ್ಯಾಯಾಲಯದ ತಿರ್ಪುನ್ನು ಎತ್ತಿ ಹಿಡಿದು ರಾಯರ ಮಠದ ಪರವಾಗಿ ತಿರ್ಪು ನಿಡಿದೆ ರಾಯರ ಮಠವು ಯಾರ ವಿರುದ್ದವು ಹೋಗಿರಲಿಲ್ಲ. ಸದಾಕಾಲವೂ ಸೌರ್ಹದತೆಗಾಗಿ ನಮ್ಮ ಮಠ ಸಿದ್ದವಿದೆ. ರಾಘವೆಂದ್ರ ಗುರುಸಾರ್ವಭೌಮರು ಜಗದಗುರುಗಳಾಗಿ ಸರ್ವರಿಗೂ ಅನುಗ್ರಹಿಸುತ್ತಾರೆ. ಪದ್ಮನಾಭತಿರ್ಥರು,ವಾಗಿಶರು,ಕವಿಂದ್ರತಿರ್ಥರ ಪೂಜೆ ಮಾಡಲಾಗುವುದು. ನವವೃಂದಾವನ ದ ಯತಿಗಳ ಅನುಗ್ರಹ ಭಕ್ತರ ಮೇಲೆ ಇರಲಿ. ಸುಜಿಯಿಂದ್ರ ತಿರ್ಥರು,ಸುಶಮಿಂದ್ರತಿರ್ಥರು,ಸುಯತಿಂದ್ರ ತಿರ್ಥರ ಹಾಗೂ ಎಲ್ಲರ ಪರಿಶ್ರಮದ ಫಲವಾಗಿ ನ್ಯಾಯಾಲಯದ ತಿರ್ಪು ರಾಯರ ಮಠದ ಪರವಾಗಿ ಬಂದಿದೆ ಎಂದರು.

ಆನೆಗೋಂದಿ ರಾಯರ ಮಠದಿಂದ ನದಿತೀರದವರೆಗೆ ವಿಜಯ ಉತ್ಸವ ಮೆರವಣಿಗೆ ಜರುಗಿತು.

ಈ ಸಂದರ್ಭದಲ್ಲಿ ಪಂಡಿತ ಡಾ.ಎನ್.ವಾದಿರಾಜಾಚಾರ್ಯ, ನಿವೃತ್ತ ನ್ಯಾಯಾಧೀಶ ಶ್ರೀ ಧರರಾವ, ದ್ವಾರಕನಾಥಾಚಾರ್ಯ,ಪವರಾಫ್ ಹೋಲ್ಡರ ವಾದಿಂದ್ರಚಾರ್ಯ ಬೆಂಗಳೂರು, ಸೂರಿಂದ್ರಾಚಾರ್ಯ, ಅಪ್ರಮೇಯಾಚಾರ, ಫಣಿಂದ್ರ ಕಶ್ಯಪ, ಶ್ರೀ ನಿವಾಸ ಡಣಾಪೂರ ವಕೀಲ, ಹನುಮೇಶ ಅಯೋಧ್ಯೆ, ವಿಜಯ ಡಣಾಪೂರ, ಮೋಹಿತ ವಕಿಲ, ದ್ವಾರಪಾಲಕ ಅನಂಚಾರ ಪುರಾಣಿಕ, ಲಕ್ಷ್ಮಿಕಾಂತ ಹೇರೂರ, ಅಪ್ಪಣ ದೇಶಪಾಂಡೆ, ನವಲಿ ಪ್ರಲಾದ ವಕೀಲ, ವೆಂಕಟರಾವ ಹೇರೂರ, ರಾಮಕೃಷ್ಣ ಜಹಾಗಿರದಾರ, ಸಾಮವೇದ ಗುರುರಾಜಾಚಾರ್ಯ, ಕನಕವಿಡು ಸೇತು ಮಾಧವ, ನಗರಸಭೆ ಸದಸ್ಯ ವಾಸುದೇವ ನವಲಿ, ಗಿರಿಶ ಕನಕ ವಿಡು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!