IMG20240710120722

ಗ್ಯಾರಂಟಿ‌ ಯೋಜನೆಗಳು‌ ಫಲಾನುಭವಿಗಳಿಗೆ‌ ತಲುಪಿಸುವಲ್ಲಿ‌ ಅಧಿಕಾರಿಗಳ ನಿರ್ಲಕ್ಷ ಬೇಡ: ಶ್ರೀನಿವಾಸ ರೆಡ್ಡಿ

ಸರಕಾರದ‌ ಮಹತ್ವಾಕಾಂಕ್ಷೆಯ ಯೋಜನೆಗಳಾದ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬಾರದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಶ್ರೀನಿವಾಸ್ ರೆಡ್ಡಿ ಹೇಳಿದರು. 

ಜಿಲ್ಲಾ ಪಂಚಾಯತ ಕೊಪ್ಪಳ, ತಾಲೂಕ ಪಂಚಾಯತ ಕುಷ್ಟಗಿ ಸಹಯೋಗದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯನ್ನು ಇಲ್ಲಿನ ತಾಲೂಕ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯನವರ ಸರಕಾರ ಬಡವರ ಉದ್ಧಾರಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡುವುದಾಗಿ ಭರವಸೆ ನೀಡಿದಂತೆ ಜಾರಿ ಮಾಡಿದ್ದು ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ ಅರ್ಹ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಮಿಸ್ ಆಗಬಾರದು ಎಂದು ಸಭೆಯಲ್ಲಿ ತಿಳಿಸಿದರು. 

ಮೊದಲನೆ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳ ಬಿಪಿಎಲ್ ಕುಟುಂಬದ ಮನೆ ಯಜಮಾನಪತಿಗೆ ರೂ. 2000 ಡಿ ಬಿ ಟಿ ಮೂಲಕ ಜಮಾಣೆ ಆಗುತ್ತಿದೆ. ಇದರಲ್ಲಿ ಯಾವುದೇ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಬ್ಯಾಂಕ್ ಅಕೌಂಟ್ ಸರಿಯಾಗಿ ಲಿಂಕ್ ಇದೆಯೋ, ಈ ಕೆವೈಸಿ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಫಲಾನುಭವಿಗಳಿಗೆ ತಿಳಿಸಬೇಕು. 

ಇನ್ನು ಎರಡನೇ ಯೋಜನೆ ಗೃಹ ಜ್ಯೋತಿ ಸರಿಯಾಗಿ ಫಲಾನುಭವಿಗಳಿಗೆ ತಲುಪಿಸಿ. ಫಲಾನುಭವಿಗಳಿಗೆ ಹಳೆ ಬಾಕಿ ಸರಕಾರಕ್ಕೆ ಪಾವತಿಸುವಂತೆ ತಿಳಿಸಿ. ಗೈಡಲೈನ್ಸ್ ಪ್ರಕಾರ ಎಲ್ಲರಿಗೂ ತಲುಪಿಸಿ. ಹೊಸ ಆರ್.ಆರ್ ನಂಬರಿಗೆ ೫೩ ಯುನಿಟ್ ಪ್ರೀ, ಪ್ರತಿ ತಿಂಗಳು ೨೦೦ ಯುನಿಟ್ ಕ್ರಾಸ್ ಆದರೆ ಸಂಪೂರ್ಣ ಬಿಲ್ ಪಾವತಿಸಬೇಕು ಅಂತ ತಿಳಿಸಿ. ವಿದ್ಯುತ್ ಗೆ ಸಂಬಂಧಿಸಿದಂತೆ ನಮ್ಮ ಗ್ಯಾರಂಟಿ ಸಮಿತಿ ಸದಸ್ಯರು ಕರೆ ಮಾಡಿದಾಗ ಸ್ಪಂದಿಸಿ. ಏನೇ ಸಮಸ್ಯೆ ಇದ್ದರೂ ಬಗೆಹರಿಸಿ, ಮಾಹಿತಿ ಕೇಳಿದರೆ ಯೋಜನೆಗೆ ಸಂಬಂಧಿಸಿದ ಮಾಹಿತಿ ನೀಡಿ ಎಂದರು. 

ತಾಲೂಕ ಅಧ್ಯಕ್ಷ ಪಾರೂಕ ಡಲಾಯತ್ ಮಾತನಾಡಿ ಯವನಿಧಿ ಯೋಜನೆ ಅಡಿ ನಿರುದ್ಯೋಗ ಯುವಕ ಯುವತಿಯರು ನೊಂದಣಿ ಮಾಡಿಸಿಕೊಂಡಿದ್ದು ಇನ್ನೂ ಯಾರ್ಯಾರು ನೊಂದಣಿ ಮಾಡಿಸಿಲ್ಲವೋ ಅಂತವರಿಗೆ ಮಾಹಿತಿ ನೀಡುವ ಕೆಲಸವಾಗಬೇಕು. ಈಗಾಗಲೇ ನೋಂದಣಿ ಮಾಡಿಸಿದವರಿಗೆ ಯೋಜನೆ ತಲುಪುವಂತೆ ಮಾಡಬೇಕು ಎಂದರು. 

ಅನ್ನಭಾಗ್ಯ ಯೋಜನೆ ಅಡಿ 10 ಕೆಜಿ ಅಕ್ಕಿ ಅಂತ ಸರ್ಕಾರ ಘೋಷಿಸಿತ್ತು ಈಗಾಗಲೇ ಐದು ಕೆಜಿ ಅಕ್ಕಿ ನೀಡುತ್ತಿದ್ದು ಇನ್ನುಳಿದ ಐದು ಕೆಜಿ ಪ್ರತಿ ಯೂನಿಟ್ ಗೆ 170ಯಂತೆ ಜಮಾವಣೆಯಾಗುತ್ತಿದೆಯೋ ಇಲ್ಲವ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಜಮಾ ಆಗುತ್ತಿಲ್ಲವೆಂದರೆ ಯಾವ ಕಾರಣಕ್ಕೆ ಎಂದು ಫಲಾನುಭವಿಗೆ ತಿಳಿಸಿ, ಸರಿಪಡಿಸಬೇಕು. ತಾಂತ್ರಿಕ ತೊಂದರೆಗಳು ಇದ್ದಲ್ಲಿ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಹಾರ ಇಲಾಖೆ ಅಧಿಕಾರಿ ಚನ್ನಬಸಪ್ಪ ಅವರಿಗೆ ಹೇಳಿದರು.

 ಸರಕಾರದ ಮತ್ತೊಂದು ಜಾರಿಯಲ್ಲಿರುವ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಸನರ್ಪಕವಾಗಿ ಜಾರಿಯಾಗಿದ್ದುಸಾರಿಗೆ ಘಟಕಾಧಿಕಾರಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು.  ದಿನಂಪ್ರತಿ ಮಹಿಳೆಯರು ಎಷ್ಟು ಜನ ಪ್ರಯಾಣ ಮಾಡುತ್ತಿದ್ದಾರೆ? ನಿಮ್ಮ ಘಟಕಕ್ಕೆ ಎಷ್ಟು ಹಣ ಸಂದಾಯ ಮಾಡಲಾಗಿದೆ. ಸಿಬ್ಬಂದಿಗಳು ಮಹಿಳೆಯರಿಗೆ ಆಧಾರ್ ಹಾರ್ಡ ಕಾಪಿ ಇಟ್ಟುಕೊಳ್ಳಲು ಮೊದಲ ಆಧ್ಯತೆ ನೀಡಲು ತಿಳಿಸಿ. ಮೊಬೈಲ್ ನಲ್ಲೆ ಆಧಾರ್ ತೋರಿಸಬಹುದು ಆದರೆ ಸ್ವಿಚ್ ಆಫ್ ಆದರೆ ನಮಗ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿ ಹೇಳಿದರು. ಇನ್ನೂ ಲಾಂಗ್ ಜರ್ನಿ ಟಿಕೆಟ್ ಪಡೆದು ಮಧ್ಯದಲ್ಲೆ ಇಳಿದರೆ ಸಿಬ್ಬಂದಿ ಕೆಲಸಕ್ಕೆ ಕುತ್ತು ಬರುತ್ತೆ. ಇದರಿಂದ ಸಿಬ್ಬಂದಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸಮಸ್ಯೆ ಹೇಳಿಕೊಂಡರು. ಇದನ್ನು ಪರಿಹರಿಸುವ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. 

ನ್ಯಾಯಬೆಲೆ ಅಂಗಡಿಯವರು ಸರಿಯಾಗಿ ತೂಕ ಮಾಡಿ ಸರ್ಕಾರ ಕೊಡುವ ಅಕ್ಕಿ ಜೋಳಗಳನ್ನ ಫಲಾನುಭವಿಗೆ ನೀಡಬೇಕು. ಒಂದು ವೇಳೆ ತೂಕದಲ್ಲಿ ಮೋಸ ಅಥವಾ ಕಡಿಮೆ ದವಸ ನೀಡಿದ್ದು ಕಂಡು ಬಂದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ


ಶ್ರೀನಿವಾಸ ರೆಡ್ಡಿ, ತಾಲೂಕ ಅಧ್ಯಕ್ಷ ಫಾರುಕ ಡಲಾಯತ, ಇ.ಓ ನಿಂಗಪ್ಪ ಮಸಳಿ, ಶಾರದಾ ಕಟ್ಟಿಮನಿ, ಸಿಡಿಪಿಓ ಯಲ್ಲಮ್ಮ ಹಂಡಿ, ಜೆಸ್ಕಾಂ ಎಇಇ ದಾವಲಸಾಬ, ಡಿಪೋ ಮ್ಯಾನೇಜರ ಸುಂದರಗೌಡ ಸೇರಿದಂತೆ ಅನುಷ್ಠಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!