ಏಕತೆ ಭಾವೈಕ್ಯತೆ ಭಾವನೆ ಹಂಚಿಕೊಳ್ಳುವ ಮಾದರಿ ಹಬ್ಬ ಮುಹರಂ : ವೆಂಕಟೇಶ್ ಉಗಿಬಂಡಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 11- ಹಿಂದೂ ಮುಸಲ್ಮಾನರ ಭಾವೈಕ್ಯದ ಸಂಕೇತ ಮುಹರ್ರಮ್ ಹಬ್ಬವನ್ನು ಶಾಂತಿ ಸಹೋದರತೆಯಿಂದ ಆಚರಿಸಬೇಕು ಎಂದು ಡಿ ವೈ ಎಸ್ ಪಿ ವೆಂಕಟೇಶ್ ಉಗಿಬಂಡಿ ಅವರು ಹೇಳಿದರು.
ಸಿರುಗುಪ್ಪ ನಗರದ ಪೊಲೀಸ್ ಠಾಣಾ ಆವರಣದಲ್ಲಿ ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲಾ ಪೊಲೀಸ್ ಸಿರುಗುಪ್ಪ ಉಪ ವಿಭಾಗ ಸಹಯೋಗದಲ್ಲಿ ಆಯೋಜಿಸಿದ ಮುಹರ್ರಮ್ ಶಾಂತಿ ಪಾಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಜಗತ್ತಿನಲ್ಲಿಯೇ ಭಾರತ ದೇಶ ನಮ್ಮ ರಾಜ್ಯ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನಲ್ಲಿ ಆಚರಿಸಲ್ಪಡುತ್ತಿರುವ ಐತಿಹಾಸಿಕ ಮೊಹರಂ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಸಾರ್ವಜನಿಕರು ಶಾಂತಿಯುತವಾಗಿ ಮುಹರಂ ಹಬ್ಬ ಆಚರಿಸಬೇಕು ಸಿರುಗುಪ್ಪ ತಾಲೂಕಿನಲ್ಲಿ ಜೂಲೈ 7ರಿಂದ ಜೂಲೈ 17 ರವರೆಗೆ ಜರುಗುವ ಮುಹರ್ರಮ್ ಹಬ್ಬ ದ ಆಚರಣೆಯನ್ನು ಕಾನೂನು ಮತ್ತು ಸು ವ್ಯವಸ್ಥೆ ಕಾಪಾಡುವ ಸಲುವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ತಾಲೂಕಿನ ಹಿರೇಹಾಳು ನಾಡಂಗ ಬಂಡ್ರಾಳ್ ದೇಶನೂರು ಕೆ ಬೆಳಗಲ್ ತೆಕ್ಕಲಕೋಟೆ ಹಳೆಕೋಟೆ, ಉಪ್ಪಾರು ಹೊಸಳ್ಳಿ ಉಡೆಗೋಳು ಅರಳಿಗನೂರು ಸಿರಿಗೇರಿ ಕೂರಿಗನೂರು ತಾಳೂರು ಕರೂರು ಗ್ರಾಮಗಳಲ್ಲಿ ಮುಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ವೈಶ್ಯಮ್ಯ ಇರುವುದರಿಂದ ಕಾನೂನು ಸು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗ್ರತೆಗೆ ಪೊಲೀಸ್ ಬಂದೋಬಸ್ತ್ ಪರಿಣಾಮಕಾರಿಯಾಗಿ ಜಾರಿಗೆ ತರಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ ಆದರೂ ಮುಹರ್ರಮ್ ಆಚರಿಸಲು ಆಚರಣೆ ಮಾಡುವ ಹಿರಿಯರು ಒಂದು ತಿಂಗಳ ಮುಂಚಿತವಾಗಿ ತಮ್ಮಲ್ಲಿ ಮನವಿ ಮಾಡಿಕೊಂಡಿದ್ದರೆ ಮುಹರಂ ಆಚರಿಸುವುದಾಗಿ ನಾವು ಅನುಮತಿ ನೀಡುವುದಾಗಿ ತಿಳಿಸಿದೆವು ಆದರೆ ಯಾವ ಮುಖ್ಯಸ್ಥರು ಬಂದಿಲ್ಲ ಸರ್ವರಿಗೂ ಮುಹರ್ರಮ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪ ಅವರು ಮಾತನಾಡಿ ಪ್ರತಿಯೊಬ್ಬರೂ ಮುಹರ್ರಮ್ ಹಬ್ಬ ಶಾಂತಿಯುತವಾಗಿ ಆಚರಿಸಬೇಕು ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಪೊಲೀಸ್ ಇಲಾಖೆ ಎಲ್ಲಾ ಹಬ್ಬಗಳಿಗೆ ನಿಯಮಾನುಸಾರ ಬಂದೊ ಬಸ್ತ್ ಕೊಡುತ್ತದೆ ಎಲ್ಲರಿಗೂ ಮುಹರ್ರಮ್ ಹಬ್ಬದ ಶುಭಾಶಯ ಕೋರಿದರು ಖತೀಬ್ ಜಹೀರುದ್ದೀನ್ ಬಾಬು ಅವರು ಮಾತನಾಡಿ ನಾವು ಎಲ್ಲರೂ ಸಹೋದರ ಭಾವನೆಯಿಂದ ಮುಹರ್ರಮ್ ಹಬ್ಬ ಯಶಸ್ಸಿಗೆ ಶಾಂತಿ ಸಹೋದರತೆ ಪ್ರೀತಿ ವಿಶ್ವಾಸ ಮತ್ತು ಸಹಕಾರ ಅಗತ್ಯ ಏಕತೆಯ ಮತ್ತು ಭಾವೈಕ್ಯತೆಯ ಭಾವನೆಯಿಂದ ಹಬ್ಬ ಆಚರಿಸೋಣ ಎಂದು ತಿಳಿಸಿದರು.
ಸಾಮಾಜಿಕ ಸುಧಾರಕ ಹಾಜಿ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಎಲ್ ಬಿ ಮೊಹಮ್ಮದ್ ಆಜಾಮ್ ಮುಲ್ಲಾ ದಾದಾ ಖಲಂದರ್ ತಾಲೂಕಿನ ಎಲ್ಲಾ ಹಳ್ಳಿಗಳ ಎಲ್ಲಾ ಸಮಾಜದವರು ಸಾರ್ವಜನಿಕರು ಗಣ್ಯರು ಮುಖಂಡರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ತೆಕ್ಕಲಕೋಟೆ ಸಿಪಿಐ ಸುಂದರೇಶ್ ಹೊಳೆಣ್ಣವರ್ ಪಿಎಸ್ಐ ಶಾಂತಕುಮಾರ್ ಸಿರುಗುಪ್ಪ ಪಿ ಎಸ್ ಐ ತಿಮ್ಮಣ್ಣ ನಾಯಕ ಕ್ರೈಂ ಪಿ ಎಸ್ ಐ ಹೊನ್ನಪ್ಪ ಸಿರಿಗೇರಿ ಪಿ ಎಸ್ ಐ ಸದ್ದಾಮ್ ಹುಸೇನ್ ಪೋಲಿಸ್ ಸಿಬ್ಬಂದಿ ವರ್ಗದವರು ಇದ್ದರು.
