WhatsApp Image 2024-07-14 at 4.48.03 PM

ಸ್ಥಗಿತಗೊಂಡಿದ್ದ ಒಳಚರಂಡಿ ಸಂಸ್ಕರಣ ಘಟಕಕ್ಕೆ ಶಾಸಕ ಗವಿಯಪ್ಪ ಭೇಟಿ

ಕರುನಾಡ ಬೆಳಗು ಸುದ್ದಿ

ವಿಜಯನಗರ, 14- ಹೊಸಪೇಟೆ ಪಟ್ಟಣದ ಹೊರಹೊಲಯದಲ್ಲಿರುವ ಬೆಳಗೋಡು ಹತ್ತಿರದ ಸ್ಥಗಿತ ಗೊಂಡಿದ್ದ ಒಳಚರಂಡಿ ಸಂಸ್ಕರಣ ಘಟಕಕ್ಕೆ ಶಾಸಕರಾದ ಹೆಚ್. ಆರ್. ಗವಿಯಪ್ಪ ನವರು ಭೇಟಿ ನೀಡಿ ಪರಿಶೀಲಿಸಿ ಕೊಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು.

ಪಟ್ಟಣದ ಒಳಚರಂಡಿ ಸಂಸ್ಕರಣ ಘಟಕವು 27 ಎಂ.ಎಲ್‌.ಡಿ ಸಾಮರ್ಥ್ಯದಾಗಿದ್ದು, 2017ರಿಂದ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದ್ದು ಹಾಗೂ ಹೊಸಪೇಟೆಯ ಒಳಚರಂಡಿ ನೀರು ಶುದ್ದಿಕರಣವಾಗದೆ ನಾಲಾ ಮುಖಾಂತರ ಹರಿಯುತ್ತಿವೆ. ಇದರಿಂದ ಆ ಭಾಗದ ಗ್ರಾಮಸ್ಥರಿಗೆ ಮತ್ತು ರೈತರಿಗೆ ತೊಂದರೆಯಾಗುತ್ತಿದ್ದು ಶಾಸಕರ ಗಮನಕ್ಕೆ ಬಂದಿದ್ದರಿಂದ ಶಾಸಕರು ವಿಶೇಷ ಮುತುವರ್ಜಿವಹಿಸಿ ಸದರಿ ಘಟಕಕ್ಕೆ ನಗರಸಭೆಯ ಅಧಿಕಾರಿಗಳು ಮತ್ತು ತಜ್ಞರ ತಂಡದೊಂದಿಗೆ ಭೇಟಿ ನೀಡಿ ಘಟಕವನ್ನು 60 ದಿನಗಳೊಳಗಾಗಿ ಎನ್.ಜಿ.ಟಿ ನಿಯಮಗಳ ಪ್ರಕಾರ ಪ್ರಾರಂಭಿಸಲು ಸೂಚಿಸಿದರು.

ಇದರಿಂದ ಸುಮಾರು ಒಂದು ದಿನಕ್ಕೆ 27 ಲಕ್ಷ ಲೀಟರ್ ಹೊಸಪೇಟೆ ಪಟ್ಟಣದ ಒಳಚರಂಡಿ ನೀರು ಶುದ್ದೀಕರಣವಾಗುತ್ತದೆ. ಈ ಶುದ್ಧೀಕರಣವಾದ ನೀರನ್ನು ಸುಮಾರು 500 ರಿಂದ 600 ಎಕರೆಗೆ ರೈತರು ತಮ್ಮ ಗದ್ದೆಗಳಿಗೆ ಉಪಯೋಗಿಸಿಕೊಳ್ಳಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕರಾದ ಮನೋಹರ್ ಸೇರಿದಂತೆ ನಗರಸಭೆ ಅಧಿಕಾರಿಗಳು, ಬೆಂಗಳೂರಿನ ತಜ್ಞರ ತಂಡ, ಮುಖಂಡರಾದ ವಿನಯ್ ಶೆಟ್ಟರ್ ರಘುಕುಮಾರ್, ನಗರಸಭೆ ಸದಸ್ಯರಾದ ಖಧೀರ್, ಅಂಜನಪ್ಪ, ಬಸವರಾಜ್ ನಾಗೇನಹಳ್ಳಿ, ತೋಟಪ್ಪ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!