WhatsApp Image 2024-07-14 at 4.37.58 PM

ಮುದೇನೂರು ಬಲಕುಂದಿ ವೇದಾವತಿ ಹಗರಿ ನದಿ ಸೇತುವೆ ವೀಕ್ಷಿಸಿದ ಸೋಮಲಿಂಗಪ್ಪ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 14- ತಾಲೂಕು ಬಲಕುಂದಿ ಮುದೇನೂರು ಗ್ರಾಮಗಳ ನಡುವೆ ಇರುವ ವೇದಾವತಿ ಹಗರಿ ನದಿಗೆ ನಿರ್ಮಿಸಿದ ಸೇತುವೆ ಮತ್ತು ಬಾಂಧಾರ ಕಾಮಗಾರಿಯನ್ನು ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ವೀಕ್ಷಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ ಸಿರುಗುಪ್ಪ ತಾಲೂಕಿನ ಮುದೇನೂರು ಹಿರೇಹಾಳು ಕೇ ಬೆಳಗಲ್ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗುವ ಸೇತುವೆ ಮತ್ತು ಭಾಂದರ ನಿರ್ಮಾಣ ಕಾರ್ಯ ಪೂರ್ಣಗೊಳ್ಳದಿದ್ದರೂ ಕಾಮಗಾರಿಯ ಗುತ್ತಿಗೆ ಪಡೆದ ಆರ್‌ಪಿ ಕಂಪನಿಯ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳುತ್ತಿದ್ದಾರೆ ಇನ್ನು ಅನೇಕ ಕಾಮಗಾರಿ ಕಾರ್ಯಗಳು ಬಾಕಿ ಇವೆ ಈ ಭಾಗದ ರೈತರ ಕೃಷಿ ಜಮೀನಿಗೆ ನೀರು ಉಣಿಸಲು ಕನಿಷ್ಠ ಮೂರು ಟಿಎಂಸಿ ನೀರು ಸಂಗ್ರಹ ಮತ್ತು ಈ ಭಾಗದ ಅನೇಕ ಗ್ರಾಮಗಳಿಂದ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಬರಲು ಹತ್ತಾರು ಕಿಲೋಮೀಟರ್ ಸುತ್ತ ಬೇಕಾಗಿತ್ತು ಈ ಸೇತುವೆ ನಿರ್ಮಾಣದಿಂದ ವಿವಿಧ ಗ್ರಾಮಸ್ಥರ ಓಡಾಟಕ್ಕೆ ಅನುಕೂಲವಾಗಿದೆ ಈ ಸೇತುವೆ ನಿರ್ಮಾಣಕ್ಕೆ ನಮ್ಮ ಅಂದಿನ ಬಿಜೆಪಿ ಸರ್ಕಾರ 45 ಕೋಟಿ‌ರೂ ಅನುದಾನ ಮಂಜೂರಾಗಿದ್ದು ಈ ಹಣದಲ್ಲಿ ಬಲಕುಂದಿ ಗ್ರಾಮದಿಂದ ಸೇತುವೆ ವರೆಗೆ ರಸ್ತೆ ನಿರ್ಮಾಣ ಬ್ಯಾರೆಜ್ ಗೆ ಎಫ್ ಆರ್ ಟಿ ಗೇಟ್ ಬದಲಾಗಿ ಹೈಡ್ರಾಲಿಕ್ ಗೇಟ್ ಅಳವಡಿಸಬೇಕು ಬಾಕಿ ಇರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ತಾಲೂಕ ಅಧ್ಯಕ್ಷ ಕೆ ಮಲ್ಲಿಕಾರ್ಜುನ ಸ್ವಾಮಿ ಮಾಜಿ ಎಪಿಎಂಸಿ ಅಧ್ಯಕ್ಷ ಶರಣಬಸವ ಬಿಜೆಪಿ ಕಾರ್ಯಕರ್ತರಾದ ಹೆಚ್ ಬಿ ಗಂಗಪ್ಪ ಎಸ್ ವೀರೇಶ ಶಿವಪ್ಪ ಕೋರಿ ಪಿಡ್ಡಯ್ಯ ಈರಣ್ಣ ರಾಮಪ್ಪ ಬಸವರಾಜ ಜಿ ಸಿದ್ದಪ್ಪ ರಾಘವೇಂದ್ರ ಎಂ ಎಸ್ ಕುಮಾರೆಪ್ಪ ಡಿ ನೆಣಿಕೆಪ್ಪ ಮುದೇನೂರು ಬಲಕುಂದಿ ಬೆಳಗಲ್ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!