ಮೊಹರಂ ಮುಸ್ಲಿಂ ಹಬ್ಬವಾದರೂ ಹಿಂದುಗಳು ಸಹ ಭಾವೈಕ್ಯ ಸಾಮರಸ್ಯದಿಂದ ಆಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 15- ವಾಸ್ತವದಲ್ಲಿ ಮೊಹರಂ ಮುಸ್ಲಿಮರ ಹಬ್ಬವಾದರೂ ಹಿಂದುಗಳು ಸಹ ಧಾರ್ಮಿಕ ಸಾಂಸ್ಕೃತಿಕ ಭಾವೈಕ್ಯ ಸಾಮರಸ್ಯದಿಂದ ಶ್ರದ್ದಾ ಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಪರ ಧರ್ಮ ಸಹಿಷ್ಣುತೆಯೊಂದಿಗೆ ಶಕ್ತಿ ಭಾವ ಮೆರೆಯುತ್ತಿದ್ದಾರೆ ಮತ್ತು ತಮ್ಮ ಹರಕೆಯನ್ನು ಅರ್ಪಿಸುತ್ತಿದ್ದಾರೆ.
ಪೀರಲ ದೇವರನ್ನು ಹಿಡಿಯುತ್ತಾರೆ ಸಕ್ಕರೆ ಲೋಬಾನ ಊದುಬತ್ತಿ ನೀಡುವುದರೊಂದಿಗೆ. ದೀನ್ ಜಗಾಯಿಸುತ್ತಾರೆ ಸಿರುಗುಪ್ಪ ನಗರದ ಸೌದಾಗರ್ ಕೊಪ್ಪಳ ಹಿರೇಮಸೀದಿ ವಲ್ಲೂರು ಚಾವಲ್ ಮುಂತಾದ ಇಮಾಮ್ ಹುಸೈನ್ ಆಲಂಗಳ ಆಶೂರ್ ಖಾನ ಗಳಲ್ಲಿ ಸ್ಥಾಪಿಸಿದ ಪೀರಲ ದೇವರು ಮೊಹರಂ ನ 6ನೇ ದಿನದ ಶನಿವಾರ ಹಜರತ್ ಅಬ್ಬಾಸ್ ಅಲಿ 7ನೇ ದಿನದ ಭಾನುವಾರ ಹಜರತ್ ಇಮಾಮ್ ಖಾಸಿಂ 8ನೇ ದಿನದ ಸೋಮವಾರ ಹಜರತ್ ಅಕ್ಬರ್ ಅಲಿ ಜಿಗಳಿ ಸಾಹಬ್ ಸೇರಿ ಅಲಂ ಸವಾರಿಗಳು ಸಂಪ್ರದಾಯದಂತೆ ಖುರಾನ್ ಫಾತೆಹ ಓದಿಕೆದೊಂದಿಗೆ ನುಡಿಮುತ್ತುಗಳ ದೀನ್ ಜಗಾಯಿಸಿ ಪೀರಲ ದೇವರನ್ನು ಹೊತ್ತುಕೊಂಡು ಭಾವೈಕ್ಯ ಸಾಮರಸ್ಯದಿಂದ ಶ್ರದ್ದಾ ಭಕ್ತಿಯಿಂದ ಹಲಗೆ ತಪ್ಪಡಿ ಶೆಹೆನಾಯಿ ವಾದ್ಯಗಳೊಂದಿಗೆ ಪ್ರಮುಖ ಆಶೂರ್ ಖಾನ ಮಸೀದಿಗಳ ಮೊಹಲ್ಲಾಗಳಿಗೆ ಭೇಟಿ ನೀಡಿ ಮುಖ್ಯ ರಸ್ತೆಗಳ ಮನೆಗಳಿಗೆ ಭೇಟಿ ಫಾತೇಹ ಓದಿಕೆ ದೀನ್ ಜಗಾಯಿಸುವ ಮೂಲಕ ಪೀರ್ ದೇವರು ಹೊತ್ತ ಆಲಂ ಬಿರಾದಾರರು ನಾಡಿನಲ್ಲಿ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಭಕ್ತರಿಗೆ ಆಶೀರ್ವಚನ ನೀಡಿದರು.
